ETV Bharat / state

ದಾವಣಗೆರೆ: 5 ಲಕ್ಷಕ್ಕೆ ನವಜಾತ ಶಿಶು ಮಾರಾಟ ಪ್ರಕರಣ, ವೈದ್ಯೆ ಸೇರಿ 7 ಜನರ ಬಂಧನ - BABY SALE CASE

ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು ರೂ.5 ಲಕ್ಷಕ್ಕೆ ಮಾರಾಟ ಮಾಡಿದ ಜಾಲ ಭೇದಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಠಾಣೆಯ ಪೊಲೀಸರು, ವೈದ್ಯೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Davanagere Doctor 7 Others Arrested For Selling Baby For Rs 5 Lakh
ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕ (ETV Bharat)
author img

By ETV Bharat Karnataka Team

Published : Oct 10, 2024, 5:02 PM IST

ದಾವಣಗೆರೆ: ಮಗುವಿಗೆ ಜನ್ಮ ನೀಡಿದ್ದ ತಾಯಿಯೊಬ್ಬರು, ತನ್ನ ಮಗುವನ್ನು ಸಾಕಲು ಆಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಹಸುಗೂಸನ್ನೇ ಮಾರಾಟ ಮಾಡಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 8 ವರ್ಷಗಳ ಕಾಲ ಮಕ್ಕಳಾಗದೆ ಕೊರಗುತ್ತಿದ್ದ ದಂಪತಿ 5 ಲಕ್ಷ ರೂಪಾಯಿಗೆ ಮಗುವನ್ನು ಖರೀದಿ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಮಗು ಕೊಟ್ಟವರು, ಮಗು ಖರೀದಿ ಮಾಡಿದವರು, ಮಧ್ಯವರ್ತಿಗಳು, ವೈದ್ಯೆ ಸೇರಿ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ವೈದ್ಯೆ ಡಾ. ಭಾರತಿ, ಶಿಶುವಿನ ತಾಯಿ ಕಾವ್ಯ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್‌ ಕುಮಾರ್‌ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್‌, ಮಂಜಮ್ಮ ಬಂಧಿತರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದು, ಈ ಬಗ್ಗೆ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾಪ್ರಶಾಂತ್ (ETV Bharat)

ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು ಐದು ಲಕ್ಷಕ್ಕೆ ಮಾರಾಟ ಮಾಡಲಾಗಿದ್ದು, ಪ್ರಕರಣ ಸಂಬಂಧ ದಾವಣಗೆರೆಯ ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಡಾ.‌ಭಾರತಿ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಆಗಸ್ಟ್​ 26 ರಂದು ಮಗುವಿನ ತಾಯಿ ಕಾವ್ಯ ಅವರು ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಈ ಮಗುವನ್ನು ಸಾಕಲು ಆಗುವುದಿಲ್ಲ ಎಂಬ ಸಬೂಬು ಹೇಳಿ ಮಾರಾಟ ಮಾಡಿದ್ದರು. ದಾವಣಗೆರೆ ದಂಪತಿ ಪ್ರಶಾಂತ ಕುಮಾರ್ ಹಾಗೂ ಜಯಾ ಎಂಬುವರು 5 ಲಕ್ಷ ಹಣ ನೀಡಿ ಮಗುವನ್ನು ಖರೀದಿಸಿದ್ದರು. ಮಗು ಮಾರಾಟಕ್ಕೆ ಟಿ. ವಾದಿರಾಜ್ ಹಾಗೂ ಮಂಜಮ್ಮ ಅಲಿಯಾಸ್ ಮಂಜುಳಾ ಎಂಬ ದಂಪತಿ ಬ್ರೋಕರ್ ಕೆಲಸ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಸುಗೂಸಿನ ಮುಖ ನೋಡದೇ ಕಾವ್ಯ ಅವರು ಮಗು ಮಾರಾಟ ಮಾಡಿದ್ದರು. ಬಳಿಕ ಎಂಕೆ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಈ ಮಗು ಪ್ರಶಾಂತ್ ಕುಮಾರ್ ಮತ್ತು ಜಯಾ ಅವರಿಗೆ ಜನಿಸಿದೆ ಎಂದು ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ್ದರು. ನಕಲಿ ದಾಖಲೆಗಳನ್ನು ನೀಡಿದ ಆರೋಪಿಗಳು ಮಹಾನಗರ ಪಾಲಿಕೆಯಲ್ಲಿ ಮಗುವಿನ ಜನನ ಪ್ರಮಾಣಪತ್ರ ಪಡೆದಿದ್ದರು‌. ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್​ಪಿ ಉಮಾಪ್ರಶಾಂತ್ ಪ್ರಕರಣದ ಬಗ್ಗೆ ವಿವರಿಸಿದರು.

ನಕಲಿ ದಾಖಲೆ ಸೃಷ್ಟಿ: ನಕಲಿ ದಾಖಲೆ ಸೃಷ್ಟಿಸಿ ಮಗುವಿನ ಜನನ ಪ್ರಮಾಣಪತ್ರ ಪಡೆಯಲು ನಕಲಿ ದಾಖಲೆಗಳಿಗೆ ಎಂ.ಕೆ ಮೆಮೊರಿಯಲ್ ಆಸ್ಪತ್ರೆಯ ಡಾ.‌ ಭಾರತಿ ಸಹಿ ಮಾಡಿದ್ದರು. ಸದ್ಯ ಎಂಟು ಜನ ಅರೋಪಿಗಳನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ದಾವಣಗೆರೆ ‌ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರಾಟವಾಗಿದ್ದ ಎರಡೂವರೆ ತಿಂಗಳ ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮಗುವಿನ ಅಕ್ರಮ ಮಾರಾಟದಲ್ಲಿ ಪಾಲ್ಗೊಂಡಿದ್ದ ಜಯಾ ಹಾಗೂ ಪ್ರಶಾಂತ್‌ ಕುಮಾರ್‌ ದಂಪತಿ, ಮಧ್ಯವರ್ತಿಯಾದ ವಾದಿರಾಜ್, ಸಾಯಿಕೃಷ್ಟ ಪಿ, ತಾಯಿ ಕಾವ್ಯ ಹಾಗೂ ಸುಳ್ಳು ದಾಖಲೆ ಸೃಷ್ಟಿ ಮಾಡಿರುವ ಡಾ. ಭಾರತಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿದೆ ಎಂದು ಎಸ್​ಪಿ ತಿಳಿಸಿದರು.

ಎಸ್ಪಿ ಹೇಳಿದ್ದೇನು? ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಮಾತನಾಡಿದ ಎಸ್ಪಿ ಉಮಾಪ್ರಶಾಂತ್, "ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಅವರು ಮಗು ಮಾರಾಟ ಆಗಿದೆ ಎಂದು ದೂರು ಕೊಟ್ಟಿದ್ದರು. ಆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಮಗು ಮಾರಾಟ ಮಾಡಿರುವುದು ನಿಜ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಕಾವ್ಯ ಎಂಬುವರಿಗೆ ಗಂಡು ಮಗು ಜನಿಸಿದ್ದು, ಅವರಿಗೆ ಸಾಕಲು ಆಗದ ಕಾರಣ ಮಗು ಮಾರಾಟ ಮಾಡಲು ನಿರ್ಧರಿಸಿದ್ದರು. ಈ ವೇಳೆ ಎಂಕೆ ಮೆಮೋರಿಯಲ್ ಆಸ್ಪತ್ರೆಯ ಸಿಬ್ಬಂದಿ ವಾದಿರಾಜ್ ಹಾಗೂ ಮಂಜಮ್ಮ ಇಬ್ಬರು ನಮ್ಮವರಿಗೆ ಒಬ್ಬರಿಗೆ ಮಗು ಬೇಕಾಗಿದೆ ಎಂದು ಹೇಳಿ ಮಾರಾಟ ಮಾಡಲು 5 ಲಕ್ಷಕ್ಕೆ ಮಾತುಕತೆ ನಡೆಸಿದ್ದರು. ಮಕ್ಕಳಾಗದ ಪ್ರಶಾಂತ ಹಾಗೂ ಜಯಾ ಎಂಬ ದಂಪತಿ ₹ 5 ಲಕ್ಷಕ್ಕೆ ಮಗು ಕೊಳ್ಳಲು ಒಪ್ಪಿಕೊಂಡಿದ್ದರು. ಅದರಂತೆ ₹ 5 ಲಕ್ಷಕ್ಕೆ ಮಗು ಮಾರಾಟ ಮಾಡಿದ್ದಲ್ಲದೇ ಜನನ ಪ್ರಮಾಣಪತ್ರ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಗೊತ್ತಾಗಿದೆ. ಎಂಕೆ ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಡಾ. ಭಾರತಿ ಅವರು ಪ್ರಶಾಂತ ಹಾಗೂ ಜಯಾ ದಂಪತಿಯ ಮಗು ಎಂದು ನಕಲಿ ದಾಖಲೆಗಳನ್ನು ನಿರ್ಮಿಸಿಕೊಡಲು ಸಹಕರಿಸಿವುದು ತನಿಖೆ ವೇಳೆ ಗೊತ್ತಾಗಿದೆ. ಪಾಲಿಕೆಯಿಂದ ಜನನ ಪ್ರಮಾಣಪತ್ರ ಕೂಡ ಪಡೆದಿದ್ದಾರೆ. ಈ ಪ್ರಕರಣ ಸಂಬಂಧ ಇಲ್ಲಿ ತನಕ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಗು ಮಾರಾಟ ಜಾಲ ಭೇದಿಸಿದ ಸಿಸಿಬಿ ಪೊಲೀಸರು: ಬೆಂಗಳೂರಲ್ಲಿ ಏಳು ಜನ ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.