ETV Bharat / state

159 ಬಾರಿ ರಕ್ತದಾನ ಮಾಡಿ 80 ನವಜಾತು ಶಿಶುಗಳನ್ನು ಉಳಿಸಿರುವ ರಕ್ತದಾನಿ ಆದಿ ಕೇಶವ್: ಬೆಣ್ಣೆ ನಗರಿಯಲ್ಲಿದೆ ರಕ್ತದಾನಿ ಕುಟುಂಬ - Blood Donor Family - BLOOD DONOR FAMILY

ಬೆಣ್ಣೆ ನಗರಿಯಲ್ಲಿ ರಕ್ತದಾನಿ ಕುಟುಂಬವೊಂದು ಇದೆ. ಈ ಕುಟುಂಬದಲ್ಲಿ ಆದಿ ಕೇಶವ್​ ಎಂಬುವರು 159 ಬಾರಿ ರಕ್ತದಾನ ಮಾಡಿ 80 ನವಜಾತು ಶಿಶುಗಳನ್ನು ಉಳಿಸಿದ್ದಾರೆ. ಯಾರ್ಯಾವರು ಎಂಬುದು ತಿಳಿಯೋಣ ಬನ್ನಿ..

BLOOD DONOR  BLOOD DONATED  SAVED NEWBORNS  DAVANAGERE
ಬೆಣ್ಣೆ ನಗರಿಯಲ್ಲಿದೆ ರಕ್ತದಾನಿ ಕುಟುಂಬ (ಕೃಪೆ: ETV Bharat Karnataka)
author img

By ETV Bharat Karnataka Team

Published : Jun 14, 2024, 1:15 PM IST

Updated : Jun 14, 2024, 2:29 PM IST

ಬೆಣ್ಣೆ ನಗರಿಯಲ್ಲಿದೆ ರಕ್ತದಾನಿ ಕುಟುಂಬ (ಕೃಪೆ: ETV Bharat Karnataka)

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ಅಲ್ಲದೆ ಇತರ ಜಿಲ್ಲೆಗಳಿಗೆ ತೆರಳಿ ಬರೋಬ್ಬರಿ 159 ಬಾರಿ ರಕ್ತದಾನ ಮಾಡಿದ ಕೀರ್ತಿ ಆದಿ ಕೇಶವ್ ಪ್ರಕಾಶ್ ಶಾಸ್ತ್ರೀಯವರಿಗೆ ಸಲ್ಲುತ್ತದೆ. ಇದಲ್ಲದೇ ಆದಿ ಕೇಶವ್ ಅವರು ಇಲ್ಲಿತನಕ ರಕ್ತದಾನ ಮಾಡಿ 80 ನವಜಾತು ಶಿಶುಗಳ ಪ್ರಾಣ ಉಳಿಸಿರುವ ರಕ್ತದಾನಿ ಕೂಡ ಹೌದು.. ಇವರ ಇಡೀ ಕುಟುಂಬದ ಸದಸ್ಯರು ಕೂಡ ರಕ್ತದಾನ ಮಾಡುವಲ್ಲಿ ನಿರತರಾಗಿರುತ್ತಾರೆ.

ಹೌದು, ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ರಕ್ತಬೇಕು ಎಂದು ಬರುವವರಿಗೆ ರಕ್ತ ಕೊಡಿಸಲು ದಾವಣಗೆರೆಯ ವಿದ್ಯಾನಗರ ನಿವಾಸಿ ರಕ್ತದಾನಿ ಆದಿ ಕೇಶವ್ ಪ್ರಕಾಶ್ ಶಾಸ್ತ್ರೀಯವರು ಟೊಂಕ ಕಟ್ಟಿ ನಿಂತಿದ್ದಾರೆ. ಮಧ್ಯ ರಾತ್ರಿ ಬಂದು ರಕ್ತಬೇಕು ಸ್ವಾಮಿ ಎಂದು ಕೇಳುವ ಬಡ ವರ್ಗದ ಜನರಿಗೆ ಶಾಸ್ತ್ರೀಯವರು ರಕ್ತ ಹೊಂದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಆದಿ ಕೇಶವ್ 1987 ನವೆಂಬರ್ 10 ರಲ್ಲಿ ಮೊದಲಬಾರಿ ರಕ್ತದಾನ ಮಾಡಿದರು. ರಕ್ತದಾನ ಮಾಡುವ ಮೂಲಕ ತಮ್ಮ ಹೊಸ ಜೀವನವನ್ನು ಆರಂಭಿಸಿದ್ರು. ಇಲ್ಲಿ ತನಕ ಅವರು ಒಟ್ಟು 159 ಬಾರಿ ರಕ್ತದಾನ ಮಾಡಿದ್ದಾರೆ. ಓ ನೆಗೆಟಿವ್ ರಕ್ತದ ಗುಂಪಾಗಿದ್ದರಿಂದ ರಕ್ತದಾನಿ ಆದಿಯವರ ರಕ್ತಕ್ಕೆ ವಿಶೇಷ ಬೇಡಿಕೆ ಇದೆ. ರಕ್ತದಾನಿ ಶಾಸ್ತ್ರೀಯವರು ರಕ್ತದಾನ ಮಾಡಿ ಈಗ ತಾನೇ ಜನಿಸಿದ (ನ್ಯೂನಾಟಲ್ ಬೇಬಿಸ್) ಪುಟ್ಟ ಪುಟ್ಟ 80 ಕ್ಕೂ ಹೆಚ್ಚು ನಜಾತಶಿಶುಗಳ ಪ್ರಾಣ ಉಳಿಸಿರುವ ಖ್ಯಾತಿ ಕೂಡ ಗಳಿಸಿದ್ದಾರೆ. ತಡ ರಾತ್ರಿ ಆಗಿದ್ದರೂ ಕೂಡ ಆಸ್ಪತ್ರೆಗೆ ತೆರಳಿ ಆದಿ ಕೇಶವ್ ಅವರು ರಕ್ತದಾನ ಮಾಡಿರುವ ಉದಾಹರಣೆಗಳಿವೆ. ಜಾತಿ, ಮತ, ಧರ್ಮ ನೋಡದೆ ರಕ್ತದಾನ ಮಾಡುವ ಆದಿಯವರು ಜಾತ್ಯತೀತ ವ್ಯಕ್ತಿ ಎಂದೇ ಖ್ಯಾತಿ ಗಳಿಸಿದ್ದಾರೆ.

"ನಾನು 1987 ರಿಂದ ರಕ್ತದಾನ ಮಾಡಿಕೊಂಡು ಬರುತ್ತಿದ್ದು, ಇಲ್ಲಿ ತನಕ ಒಟ್ಟು 159 ಬಾರಿ ರಕ್ತದಾನ ಮಾಡಿದ್ದೇ‌ನೆ. ರಕ್ತದಾನ ಮಾಡಿ ಈಗಾ ತಾನೆ ಜನಿಸಿದ ಪುಟ್ಟ 80 ನವಜಾತ ಶಿಶುಗಳ ಪ್ರಾಣ ಉಳಿಸಿದ್ದೇನೆ. ಇನ್ನು ಸಿರಿಯಾ ದೇಶದ ಮೊಹಮ್ಮದ್ ಎಂಬ ಏಳು ವರ್ಷದ ಕ್ಯಾನ್ಸರ್ ರೋಗಿಗೆ ರಕ್ತದಾನ ಮಾಡಿದ್ದೇನೆ. 1987ರಲ್ಲಿ ರಕ್ತದಾನ ಮಾಡಲು ಆರಂಭಿಸಿ ಲೈಫ್ ಲೈ‌ನ್ ಸಂಸ್ಥೆ ಮಾಡಿಕೊಂಡು ದಾವಣಗೆರೆಯಲ್ಲಿ ಒಟ್ಟು 3 ಸಾವಿರ ರಕ್ತದಾನಿಗಳನ್ಮು ಹುಟುಹಾಕಿದ್ದೇನೆ. ಇದಲ್ಲದೇ ನಮ್ಮ ಇಡೀ ಕುಟುಂಬ ಕೂಡ ರಕ್ತದಾನಿ ಕುಟುಂಬ ಆಗಿದೆ" ಎಂದು ಆದಿಯವರು ಸಂತಸ ವ್ಯಕ್ತಪಡಿಸಿದರು.

ಇಡೀ ಕುಟುಂಬ ರಕ್ತದಾನಿ ಕುಟುಂಬ: ಆದಿ ಕೇಶವ್ ಅವರು ದೂರದ ಸಿರಿಯಾ ದೇಶದ ಮೊಹಮ್ಮದ್ ಎಂಬ ಏಳು ವರ್ಷದ ಕ್ಯಾನ್ಸರ್ ರೋಗಿಗೆ ರಕ್ತದಾನ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಲೈಫ್ ಲೈನ್ ಎಂಬ ಗುಂಪು ಮಾಡಿಕೊಂಡು ದಾವಣಗೆರೆಯಲ್ಲಿ 3000 ರಕ್ತದಾನಿಗಳನ್ನು ಹುಟ್ಟುಹಾಕಿದ್ದಾರೆ. ಆದಿ ಕೇಶವ್ ಪ್ರಕಾಶ್ ಅವರು ರಕ್ತದಾನಿ ಮಾತ್ರವಲ್ಲದೇ ಅವರ ಇಡೀ ಕುಟುಂಬ ಕೂಡ ರಕ್ತದಾನ ಮಾಡಿಕೊಂಡು ಬಂದಿದೆ. ಅವರ ಪತ್ನಿ ಉಷಾ ಪ್ರಕಾಶ್ 12 ಬಾರಿ ರಕ್ತದಾನ ಮಾಡಿದ್ದು, ಇವರ ಹಿರಿಯ ಸಹೋದರ 89 ಬಾರಿ, ಮತ್ತೊಬ್ಬ ಸಹೋದರ 22 ಬಾರಿ ರಕ್ತದಾನ ಮಾಡಿದ್ದಾರೆ. ಇವರ ಪುತ್ರಿ ಕೂಡ ರಕ್ತದಾನಿ ಆಗಿದ್ದು, ಪ್ರತಿ ಹುಟ್ಟುಹಬ್ಬದಂದು ರಕ್ತದಾನ ಮಾಡ್ತಿರುವುದು ವಿಶೇಷವಾಗಿದೆ.

ಓದಿ: ಉತ್ತರ ಕನ್ನಡ: ಗರ್ಭಿಣಿಯರ ದತ್ತು ಯೋಜನೆಗೆ ಅಭೂತಪೂರ್ವ ಯಶಸ್ಸು: ಶೇ.100 ಸುರಕ್ಷಿತ ಹೆರಿಗೆ - Pregnant Women Adoption Scheme

Last Updated : Jun 14, 2024, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.