ಕೊಪ್ಪಳ: 'ಕ್ರಸ್ಟ್ ಗೇಟ್ ಕೂರಿಸುವುದೇ ದೊಡ್ಡ ಚಾಲೆಂಜ್. ಗೇಟ್ನ ಒಂದು ಭಾಗವನ್ನು ನೀರಿನಲ್ಲಿ ಇಳಿಸಿದ ನಂತರದಲ್ಲಿ ಅಷ್ಟೊಂದು ಕಷ್ಟ ಆಗಲ್ಲ. ನನ್ನ ಜೀವನದಲ್ಲಿ ಇದನ್ನು ದೊಡ್ಡ ಸವಾಲಾಗಿ ತೆಗೆದುಕೊಂಡಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲಾ ಒಳ್ಳೆಯದಾಗುತ್ತದೆ, ನಾಳೆಯೊಳಗೆ ಗುಡ್ ನ್ಯೂಸ್ ಕೊಡುತ್ತೇನೆ' ಎಂದು ಡ್ಯಾಂನ ಬಳಿ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.
ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, "ಇವತ್ತು ಮಧ್ಯಾಹ್ನದಿಂದ ನಾವು ಕ್ರಸ್ಟ್ ಗೇಟ್ನ ಭಾಗಗಳನ್ನು ನೀರಿನಲ್ಲಿ ಇಳಿಸಲು ಸನ್ನದ್ಧರಾಗಿದ್ದೇವೆ. ಇದಕ್ಕೆ ಎಷ್ಟು ಜನ ಬೇಕು, ಸಮಯವೆಷ್ಟು ಬೇಕು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅಲ್ಲಿ ಗುಂಡಿಗೆ ಗಟ್ಟಿ ಇರುವವರೇ ಕೆಲಸಕ್ಕೆ ಸನ್ನದ್ಧರಾಗಿದ್ದಾರೆ. ಇನ್ನು ಎರಡು ಗೇಟ್ ಭಾಗಗಳು ಇಂದು ಮಧ್ಯಾಹ್ನದ ಹೊತ್ತಿಗೆ ನಮಗೆ ಸಿಗಲಿವೆ. ಒಟ್ಟಾರೆ ನಾವು ಹೊಸ ಪ್ರಯತ್ನವೊಂದಕ್ಕೆ ಸಿದ್ಧರಾಗಿದ್ದೇವೆ. ಕೆಲಸ ಯಶಸ್ವಿಯಾಗಿ ಮುಗಿದ ನಂತರ ಸೆಲೆಬ್ರೇಷನ್ ಮಾಡೋಣ ಎಂದರು.
ಇದನ್ನೂ ಓದಿ: ಟಿಬಿ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ; ಗುರುವಾರ ನೀರಿಗಿಳಿಸುವ ಕಾರ್ಯ - TB Dam Crest Gate