ಬೆಂಗಳೂರು: ಕಳೆದ 9 ತಿಂಗಳ ಹಿಂದೆ ನಗರ ಪೊಲೀಸರಿಗೆ ಐಸಿಎಟಿಟಿ ಫೌಂಡೇಷನ್ ಸಂಸ್ಥೆ ನೀಡಿದ್ದ ಹೃದಯ ಸಂಬಂಧಿ ಸಿಪಿಆರ್ ಮತ್ತು ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಸಿಎಟಿಟಿ ಫೌಂಡೇಷನ್‌ನ ಮುಖ್ಯಸ್ಥೆ ಡಾ.ಶಾಲಿನಿ ನಲ್ವಡ್, ತಮ್ಮ ಸಂಸ್ಥೆಯಿಂದ 2024ರ ಜ.14ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರದ ಸುಮಾರು 2240 ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್), ಕಾರ್ಡಿಯೋ ಪಲ್ಮನರಿ ರೆಸಸಿಟೇಷನ್ (ಸಿಪಿಆರ್) ತರಬೇತಿಯನ್ನು ನೀಡಲಾಯಿತು. ಈ ಕಲಿಕೆಯಿಂದ ಪೊಲೀಸರು ಒಂದಷ್ಟು ಕಡೆ ಹೃದಯ ಸಂಬಂಧಿ ಸಮಸ್ಯೆ ಉಂಟಾದ ವ್ಯಕ್ತಿಗಳ ಜೀವ ಉಳಿಸಿರುವುದು ದಾಖಲಾಗಿದೆ. ಇಡೀ ವಿಶ್ವದಲ್ಲಿ ಮೊದಲ ಬಾರಿಗೆ ಸಹಸ್ರಾರು ಮಂದಿ ಪೊಲೀಸ್ ಅಧಿಕಾರಿಗಳು ಏಕಕಾಲದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಅದನ್ನು ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಗಮನಿಸಿ ದಾಖಲಿಸಿಕೊಂಡಿದೆ ಎಂದರು.
ಕೆಲಸದೊತ್ತಡದಲ್ಲಿರುವ ಪೊಲೀಸರಿಗೆ ಈ ಪ್ರಯೋಗ ಸಹಾಯವಾಗಲಿದೆ. ಹೃದಯ ಸ್ತಂಭನ ಉಂಟಾದಾಗ ಯಾವ ರೀತಿ ಹೃದಯದ ಬಡಿತ ಹೆಚ್ಚಿಸಬೇಕು. ಪ್ರಾಥಮಿಕ ಚಿಕಿತ್ಸೆ ಹೇಗೆಕೊಡಬೇಕೆಂದು ತಿಳಿಸಲಾಗಿತ್ತು. ಇದೀಗ ಈ ಪ್ರಯೋಗ ವಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಅನ್ನು ನಗರ ಪೊಲೀಸ್ ಆಯುಕ್ತರಿಗೆ ಶಾಲಿನಿ ನಲ್ವಡ್ ಅವರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಹಸ್ತಾಂತರಿಸಿದು. ಇದೇ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ರಮಣ್‌ಗುಪ್ತಾ, ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತ ಇದ್ದರು.
ಇದನ್ನೂ ಓದಿ: ಬಾಯಲ್ಲಿಟ್ಟರೆ ಕರಗುವ ಸಾಫ್ಟ್ ಸ್ಪಂಜ್ ದೋಸೆ; ರುಚಿಯೂ ಅದ್ಭುತ - Sponge Dosa Recipe