ಬೆಂಗಳೂರು: ಕೊನೆಗೂ ಸರ್ಕಾರ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಹೊರಡಿಸಿದೆ. 36 ಮಂದಿ ಶಾಸಕರುಗಳಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎನ್.ಎ.ಹ್ಯಾರೀಸ್ ಗೆ ಬಿಡಿಎ ಅಧ್ಯಕ್ಷ ಸ್ಥಾನ, ಬೇಲೂರು ಗೋಪಾಲಕೃಷ್ಣ ಅವರಿಗೆ ಅರಣ್ಯ ಕೈಗಾರಿಕಾ ನಿಗಮ, ಶಿವಲಿಂಗೇಗೌಡರಿಗೆ ಕರ್ನಾಟಕ ಗೃಹ ಮಂಡಳಿ, ನರೇಂದ್ರಸ್ವಾಮಿಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಹೆಚ್ ಸಿ ಬಾಲಕೃಷ್ಣಗೆ ಕರ್ನಾಟಕ ಸಾರಿಗೆ ನಿಗಮ, ವಿನಯ್ ಕುಲಕರ್ಣಿಗೆ ಬೆಂಗಳೂರು ಜಲಮಂಡಳಿ, ಶ್ರೀನಿವಾಸ್ ಮಾನೆ ಅವರಿಗೆ ಡಿಸಿಎಂ ರಾಜಕೀಯ ಸಲಹೆಗಾರ, ಅನಿಲ್ ಚಿಕ್ಕಮಾದುಗೆ ಜಂಗಲ್ ಲಾಡ್ಜ್, ವಿಜಯಾನಂದ ಕಾಶಪ್ಪನವರ್‌ಗೆ ಕ್ರೀಡಾ ಪ್ರಾಧಿಕಾರ, ರೂಪಕಲಾರಿಗೆ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.
-
The Government of Karnataka has notified the appointments of MLAs as Chairmen to various boards and corporations. pic.twitter.com/oUbnXQ0Oh0
— CM of Karnataka (@CMofKarnataka) January 26, 2024 " class="align-text-top noRightClick twitterSection" data="
">The Government of Karnataka has notified the appointments of MLAs as Chairmen to various boards and corporations. pic.twitter.com/oUbnXQ0Oh0
— CM of Karnataka (@CMofKarnataka) January 26, 2024The Government of Karnataka has notified the appointments of MLAs as Chairmen to various boards and corporations. pic.twitter.com/oUbnXQ0Oh0
— CM of Karnataka (@CMofKarnataka) January 26, 2024
ಗುಬ್ಬಿ ಶ್ರೀನಿವಾಸ್ಗೆ ಕರ್ನಾಟಕ ಸಾರಿಗೆ ರಸ್ತೆ ನಿಗಮ, ಅಪ್ಪಾಜಿ ನಾಡಗೌಡಗೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್, ಹೆಚ್ ವೈ ಮೇಟಿಗೆ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ, ಪುಟ್ಟರಂಗ ಶೆಟ್ಟಿಗೆ ಎಂಎಸ್ಐಎಲ್, ಜೆ.ಟಿ.ಪಾಟೀಲ್ ಗೆ ಹಟ್ಟಿ ಚಿನ್ನದ ಗಣಿ, ಮಹಾಂತೇಶ ಕೌಜಲಗಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ರಾಜಾ ವೆಂಕಟಪ್ಪ ನಾಯಕ್ ಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಬಿ.ಕೆ.ಸಂಗಮೇಶ್ವರ್ಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿ ಅಧ್ಯಕ್ಷಗಿರಿ ಸಿಕ್ಕಿದೆ.
ಶರತ್ ಬಚ್ಚೇಗೌಡಗೆ ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಜೆ.ಎನ್.ಗಣೇಶ್ ಗೆ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ, ಸತೀಶ್ ಸೈಲ್ ಗೆ ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸೀಸ್, ಅಬ್ಬಯ್ಯ ಪ್ರಸಾದ್ ಗೆ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಬಿ.ಶಿವಣ್ಣಗೆ ಬಿಎಂಟಿಸಿ, ಎ.ಬಿ.ರಮೇಶ್ ಬಂಡಿ ಸಿದ್ದೇಗೌಡಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಎಸ್.ಎನ್.ನಾರಾಯಣ ಸ್ವಾಮಿಗೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ ಅಧ್ಯಕ್ಷ ಸ್ಥಾನ ಲಭಿಸಿದೆ.
ಹಲವು ಚರ್ಚೆ, ಸಭೆ, ಆಕ್ಷೇಪ, ಅಸಮಾಧಾನಗಳ ಬಳಿಕ ಅಳೆದು ತೂಗಿ ಸರ್ಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿದೆ. ಕಳೆದ ಮೂರು ನಾಲ್ಕು ತಿಂಗಳಿಂದ ನಿಗಮ ಮಂಡಳಿ ನೇಮಕ ನನೆಗುದಿಗೆ ಬಿದ್ದಿತ್ತು. ಹಲವು ಶಾಸಕರು ಹಾಗೂ ಕಾರ್ಯಕರ್ತರು ನಿಗಮ ಮಂಡಳಿ ಮೇಲೆ ಕಣ್ಣಿಟ್ಟಿದ್ದರು. ಇದೀಗ ಮೊದಲ ಪಟ್ಟಿಯಲ್ಲಿ 32 ಮಂದಿ ಕೈ ಶಾಸಕರುಗಳನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದೆ.
ಇದನ್ನೂ ಓದಿ: ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಇಂಟಲಿಜೆನ್ಸಿ ಫೇಲ್ ಆಗಿದೆ: ಬಿ.ವೈ.ವಿಜಯೇಂದ್ರ ವ್ಯಂಗ್ಯ