ETV Bharat / state

ಪ್ರಶ್ನೆ ಕೇಳಲು ವಿಳಂಬ ಮಾಡಿದ ಕಾಂಗ್ರೆಸ್​​ ಶಾಸಕರು: ಗಾಡ್ ಫಾದರ್​​ಗಳ ಬಗ್ಗೆ ಸದನದಲ್ಲಿ ಚರ್ಚೆ

ವಿಧಾನಸಭೆಯಲ್ಲಿ ಕಾಂಗ್ರೆಸ್​ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಪ್ರಶ್ನೆ ಕೇಳಲು ಪರದಾಡಿದ ಪ್ರಸಂಗ ನಡೆಯಿತು.

ವಿಧಾನಸಭೆ
ವಿಧಾನಸಭೆ
author img

By ETV Bharat Karnataka Team

Published : Feb 19, 2024, 4:49 PM IST

Updated : Feb 19, 2024, 5:35 PM IST

ಪ್ರಶ್ನೆ ಕೇಳಲು ವಿಳಂಬ ಮಾಡಿದ ಕಾಂಗ್ರೆಸ್​​ ಶಾಸಕರು

ಬೆಂಗಳೂರು : ತಡವಾಗಿ ಬಂದ ಕಾಂಗ್ರೆಸ್ ಶಾಸಕರೊಬ್ಬರು ಪ್ರಶ್ನೆ ಕೇಳಲು ಪರದಾಡಿದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
ಪ್ರಶ್ನೋತ್ತರ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಪ್ರಶ್ನೆ ಕೇಳಲು ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದರು. ಪಕ್ಕದ ಚೇರ್ ನಲ್ಲಿ ಕುಳಿತಿದ್ದ ಕಾಶಪ್ಪನವರ ತಮ್ಮ ಸ್ಥಾನಕ್ಕೆ ಬಂದು ಪ್ರಶ್ನೆ ಕೇಳಲು ವಿಳಂಬ ಮಾಡಿದರು.

ಆಗ ಪ್ರಶ್ನೆ ಸಂಖ್ಯೆಯನ್ನು ಸ್ಪೀಕರ್ ಕೇಳಿದರು. ಆದರೂ ಪ್ರಶ್ನೆ ಕೇಳಲು ಪರದಾಡುತ್ತಿದ್ದಂತೆ ರೇಷ್ಮೆ ಸಚಿವ ಕೆ.ವೆಂಕಟೇಶ್​ ಅವರು ಸದಸ್ಯರ ಪ್ರಶ್ನೆಗೆ ಉತ್ತರ ಒದಗಿಸಲಾಗಿದೆ ಎಂದರು. ಆಗ ಶಾಸಕರೊಬ್ಬರು ಉತ್ತರ ಸಮರ್ಪಕವಾಗಿದೆ ಎಂದು ಹೇಳಿದರು. ಇಷ್ಟಾದರೂ ಪ್ರಶ್ನೆ ಕೇಳದ ಶಾಸಕರನ್ನು ನೋಡಿ ಯು.ಟಿ. ಖಾದರ್ ಸದಸ್ಯರ ಪರವಾಗಿ ಪ್ರಶ್ನೆ ಕೇಳಿದರು. ಆಗ ಪ್ರತಿಪಕ್ಷದ ನಾಯಕ ಅಶೋಕ್ ಅವರು, ಮಂತ್ರಿಗಳೇ ಪ್ರಶ್ನೆ ಕೇಳಿ ಉತ್ತರವನ್ನೂ ಹೇಳಿ ಎಂದು ಛೇಡಿಸಿದರು. ಬಳಿಕ ಬೇಗ ಸದನಕ್ಕೆ ಬಂದು ಸರಿಯಾಗಿ ಪ್ರಶ್ನೆಯನ್ನು ಕೇಳಿ ಎಂದು ಸ್ಪೀಕರ್ ಸೂಚಿಸಿದರು.

ಇಳಕಲ್ ಹೊಸ ತಾಲೂಕು ರಚನೆಯಾಗಿ 5 ವರ್ಷವಾಗಿದ್ದರೂ ರೇಷ್ಮೆ ಇಲಾಖೆ ರಚನೆಯಾಗಿಲ್ಲ. ಯವಾಗ ಪ್ರಾರಂಭ ಮಾಡುತ್ತೀರಾ ಎಂದು ಕಾಶಪ್ಪನವರ್ ಪ್ರಶ್ನೆ ಕೇಳಿದರು. ಆಗ ಸಚಿವ ವೆಂಕಟೇಶ್​ ಕಟ್ಟಡ ಕೊಡಿಸಿದರೆ ರೇಷ್ಮೆ ಇಲಾಖೆ ಕಚೇರಿ ಕಾರ್ಯಾರಂಭ ಮಾಡುವುದಾಗಿ ಉತ್ತರ ನೀಡಿದರು.

ವಿಶೇಷ ಚೇತನರ ಬಗ್ಗೆ ಚರ್ಚೆ : ವಿಧಾನಸಭೆಯ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಲು ವಿಶೇಷ ಚೇತನರಿಗೆ ಅವಕಾಶ ಕಲ್ಪಿಸಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಸಭಾಧ್ಯಕ್ಷ ಯು.ಟಿ ಖಾದರ್ ಪ್ರಶ್ನೋತ್ತರದ ನಡುವೆ ಪ್ರತಿದಿನ ಮುಂದುವರೆದ ಸಂಪ್ರದಾಯದ ಭಾಗವಾಗಿ ಇಂದೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಲು ದೇವರ ಮಕ್ಕಳೆಂದು ಕರೆಯುವ ವಿಶೇಷ ಚೇತನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ಈ ಹಿಂದೆ ಗ್ರಾಮ್ಯ ಭಾಷೆಯಲ್ಲಿ ದಿವ್ಯಾಂಗರನ್ನು ಬೇರೆ ಬೇರೆ ಸೂಚಕ ಪದಗಳಿಂದ ಕರೆದು ಚುಚ್ಚಿ ಮಾತನಾಡಲಾಗುತ್ತಿತ್ತು. ನಾಗರಿಕ ಸಮಾಜ ಸುಧಾರಿಸಿದಂತೆ ಅವರನ್ನು ವಿಶೇಷ ಚೇತನರು ಎಂದು ಪರಿಗಣಿಸಲಾಗಿದೆ. ಈಗ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡಗಳಲ್ಲಿ ರ್ಯಾಂಪ್ ಅಳವಡಿಕೆ, ಪ್ರತ್ಯೇಕ ಶೌಚಾಲಯ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಅವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ವಿಶೇಷ ಚೇತನ ಮಕ್ಕಳು ಅಗಾಧವಾದ ಪ್ರತಿಭೆಯನ್ನು ಹೊಂದಿರುತ್ತಾರೆ ಮತ್ತು ಉನ್ನತ ಸ್ಥಾನಕ್ಕೇರಲು ಅವಕಾಶ ಹೊಂದಿರುತ್ತಾರೆ. ಅವರಿಗೆ ಅಗತ್ಯ ಸೌಲಭ್ಯ ಮತ್ತು ಗೌರವ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ವಿಶೇಷಚೇತನರಿಗೆ ಅವಕಾಶಗಳು ಬೇಕು, ಕರುಣೆ ಅಲ್ಲ. ಅವರಿಗೆ ದೇವರು ಅನ್ಯಾಯ ಮಾಡಿದ್ದಾನೆ. ನಮಗೆ ಎಲ್ಲಾ ದೈಹಿಕ ಸಾಮರ್ಥ್ಯಗಳಿದ್ದರೂ ದುರಾಸೆಗಳು ತಪ್ಪಿಲ್ಲ. ನಮಗೆ ಎಲ್ಲವನ್ನೂ ದೇವರು ಕೊಟ್ಟಿದ್ದಾನೆ. ವಿಶೇಷ ಚೇತನರಿಗೆ ಸಿಗಬೇಕಾಗಿರುವುದು ಕರುಣೆ ಅಲ್ಲ, ಅವರಿಗೆ ಬದುಕು ನೀಡಬೇಕು ಎಂದರು. ಇದೇ ವೇಳೆ ತಾವು ಸಾರಿಗೆ ಸಚಿವರಾಗಿದ್ದಾಗ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಮಕ್ಕಳ ಜೊತೆ ಬನ್ನೇರುಘಟ್ಟಕ್ಕೆ ತೆರಳಿ ಒಂದು ದಿನ ಸಮಯ ಕಳೆದಿದ್ದನ್ನು ಅಶೋಕ್ ಸ್ಮರಿಸಿಕೊಂಡರು.

ಚರ್ಚೆಯ ನಡುವೆ ನಮ್ಮನ್ನು ಎಂಎಲ್ಎ, ಎಂಪಿ ಮಾಡಲು ಗಾಡ್​ ಫಾದರ್​ಗಳಿರುತ್ತಾರೆ. ಅವರು ನಮ್ಮನ್ನು ಮುಂದೆ ತಳ್ಳುತ್ತಿರುತ್ತಾರೆ. ಆದರೆ ವಿಶೇಷ ಚೇತನರಿಗೆ ಈ ರೀತಿಯ ಯಾವ ಅವಕಾಶಗಳಿರುವುದಿಲ್ಲ ಎಂದು ಆರ್.ಅಶೋಕ್ ತಿಳಿಸಿದರು. ಇದಕ್ಕೆ ಸಭಾಧ್ಯಕ್ಷ ಪ್ರತಿಕ್ರಿಯಿಸಿ ಗಾಡ್​ ಫಾದರ್ ಮುಂದೆ ತಳ್ಳಬಹುದು. ಆದರೆ ನಮ್ಮನ್ನು ಆಯ್ಕೆ ಮಾಡಲು ಜನರೇ ಮುಂದೆ ಬರುವುದಿಲ್ಲ ಎಂದು ಛೇಡಿಸಿದರು.

ಇದನ್ನೂ ಓದಿ : ಪರಿಷತ್​ನಲ್ಲಿ ಪ್ರತಿಧ್ವನಿಸಿದ 'ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸು': ಸದನದ ಬಾವಿಗಿಳಿದು ಬಿಜೆಪಿ ಧರಣಿ

Last Updated : Feb 19, 2024, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.