ETV Bharat / state

ಹಾಸನ ಸಮಾವೇಶಕ್ಕೆ ರಾಹುಲ್​ ಗಾಂಧಿ ಗ್ರೀನ್​ ಸಿಗ್ನಲ್​: ವೈರಲ್​ ಪತ್ರದ ಕುರಿತು ಸಿಎಂ, ಪಕ್ಷದ ನಾಯಕರು ಹೇಳಿದ್ದೇನು? - SIDDARAMAIAH SWABHIMANI CONVENTION

ಹಾಸನದಲ್ಲಿ ನಡೆಸಲು ಉದ್ದೇಶಿಸಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶಕ್ಕೆ ರಾಹುಲ್​ ಗಾಂಧಿ ಸಮ್ಮತಿ ಸೂಚಿಸಿದ್ದಾರೆ. ಈ ನಡುವೆ ಎಐಸಿಸಿಗೆ ಬರೆದಿರುವ ಪತ್ರವೊಂದು ಹರಿದಾಡುತ್ತಿದ್ದು, ಈ ಕುರಿತು ಪಕ್ಷದ ನಾಯಕರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​, ಯತೀಂದ್ರ ಸಿದ್ದರಾಮಯ್ಯ
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​, ಯತೀಂದ್ರ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Nov 29, 2024, 6:17 PM IST

Updated : Nov 29, 2024, 6:22 PM IST

ದೆಹಲಿ/ಬೆಂಗಳೂರು: ಡಿ.4ಕ್ಕೆ ಹಾಸನದಲ್ಲಿ ಸಮಾವೇಶ ನಡೆಸುವ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಗ್ರೀನ್ ಸಿಗ್ನಲ್ ಸಿಕ್ಕಿದೆ. ಶುಕ್ರವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಹಾಸನ ಸಮಾವೇಶದ ಹಿನ್ನೆಲೆ ಬಗ್ಗೆ ವಿವರಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಸಮಾವೇಶ ನಡೆಸಿದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಅನುಕೂಲ ಎಂಬುದಾಗಿ ಮನವರಿಕೆ ಮಾಡಿದ್ದಾರೆ.

ಪಕ್ಷದ ಎಲ್ಲ ನಾಯಕರೂ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಪಕ್ಷ ಮತ್ತು ಹಿಂದುಳಿದ ವರ್ಗಳ ಒಕ್ಕೂಟದ ಅಡಿಯಲ್ಲಿ ಸಮಾವೇಶ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ತಿಳಿಸಿದ್ದಾರೆ. ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಿದ್ದರಾಮಯ್ಯ ಬೆಂಬಲಿಗರು, ಸಂಯುಕ್ತ ಶೋಷಿತ ವರ್ಗಗಳ ಒಕ್ಕೂಟ, ಅಹಿಂದ ನಾಯಕರು ಈ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಸಮಾವೇಶದ ಸಂಬಂಧ ಇರುವ ಗೊಂದಲ, ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಸಮಾವೇಶದ ಹಿನ್ನೆಲೆ ಬಗ್ಗೆ ವಿವರಿಸಿದ್ದಾರೆ.

ಅನಾಮಧೇಯ ಪತ್ರದ ಬಗ್ಗೆ ಸಿಎಂ ಹೇಳಿದ್ದೇನು?: ಸ್ವಾಭಿಮಾನಿ ಸಮಾವೇಶ ಕುರಿತಂತೆ ಹೈಕಮಾಂಡ್​​ಗೆ ಅನಾಮಧೇಯ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ಬಗ್ಗೆ ನನ್ನ ಬಳಿ ಚರ್ಚೆ ಮಾಡಲಿಲ್ಲ. ಸಮಾವೇಶದ ಬಗ್ಗೆ ರಾಹುಲ್​ ಗಾಂಧಿ ಅವರಿಗೆ ಹೇಳಿದ್ದೇನೆ, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದೇನೆ. ಈ ಸಮಾವೇಶವನ್ನು ನಾವು ಮಾಡುತ್ತಿಲ್ಲ, ಹಿಂದುಳಿದ ವರ್ಗಗಳ ಒಕ್ಕೂಟ ಸಮಾವೇಶ ಮಾಡುತ್ತಿದೆ, ಅವರೊಂದಿಗೆ ನಾವು ಸೇರಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದೇ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯಿಸಿ, ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಆದರೆ, ಸಮಾವೇಶವನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ನನಗೆ ಮೊದಲೇ ತಿಳಿಸಿದ್ದಾರೆ. ಮಿಕ್ಕ ವಿಚಾರಗಳು ನನಗೆ ಗೊತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿ ಮಾಡಿ ಮೂರ್ನಾಲ್ಕು ದಿನಗಳಾಗಿವೆ. ಪಕ್ಷದ ಭಾಗವಹಿಸುವಿಕೆ ಖಂಡಿತ ಇದ್ದೇ ಇರುತ್ತದೆ ಎಂದಿದ್ದಾರೆ.

ಮತ್ತೊಂದೆಡೆ, ಹಾವೇರಿಯಲ್ಲಿ ಸಚಿವ ಸತೀಶ್​ ಜರಕಿಹೊಳಿ ಮಾತನಾಡಿ, ಎಲ್ಲಿದೆ ಪತ್ರ? ಯಾರಿಗೆ ಬರೆದರು? ಯಾಕೆ ಬರೆದರು? ಏನು ಆ್ಯಕ್ಷನ್ ತಗೊಂಡ್ರು ಎಂಬುದು ಬೇಕಲ್ವಾ? ಸುಮ್ಮನೇ ವಾಟ್ಸ್​ಆ್ಯಪ್​ನಲ್ಲಿ ಒಂದು ಪತ್ರ ಬಂದರೆ ಅದು ಇಡೀ ಪಕ್ಷದ ನಿರ್ಧಾರ ಆಗಲ್ಲ ಎಂದು ಹೇಳಿದ್ದಾರೆ.

ಪತ್ರ ಫೇಕ್‌ ಇರುಬಹುದು: ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಇದೇ ವಿಚಾರವಾಗಿ ಮಾತನಾಡಿ, ಹಾಸನದಲ್ಲಿ ಡಿ.5 ರಂದು ನಡೆಯಲಿರುವ ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್‌ ಒಪ್ಪಿಗೆ ಇದೆ. ಸ್ವಾಭಿಮಾನಿ ಸಮಾವೇಶದ ಬಗ್ಗೆ ಎಐಸಿಸಿಗೆ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ. ಆ ಪತ್ರ ಫೇಕ್‌ ಇರುಬಹುದು. ಈಗಾಗಲೇ ಮುಡಾ ವಿಚಾರದಲ್ಲಿ, ಮೈಸೂರಿನಲ್ಲಿ ಸಮಾವೇಶ ಮಾಡಲಾಗಿದೆ. ಜತೆಗೆ ಹಾಸನದಲ್ಲೂ ಭಾರೀ ಸಮಾವೇಶ ಮಾಡುತ್ತಿದ್ದೇವೆ, ಅಷ್ಟೇ. ಹಾಸನ ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ" ಎಂದು ತಿಳಿಸಿದ್ದಾರೆ.

ನಾನು, ಸಿದ್ದರಾಮಯ್ಯ ಎಣ್ಣೆ - ಸೀಗೆಕಾಯಿ ಅಲ್ಲ: ಮತ್ತೊಂದೆಡೆ, ತುಮಕೂರಿನಲ್ಲಿ ಸಚಿವ ಜಿ.ಪರಮೇಶ್ವರ್​ ಮಾತನಾಡಿ, ನಾವೇ ತುಮಕೂರಿನಲ್ಲೇ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ಮಾಡಲು ಚಿಂತನೆ ನಡೆಸಿದ್ದೆವು. ಬಳಿಕ ಸಚಿವ ಕೆ.ಎನ್​. ರಾಜಣ್ಣ ಹಾಸನದಲ್ಲಿ ಮಾಡುತ್ತೇನೆ ಎಂದರು. ಸಿದ್ದರಾಮಯ್ಯ ಅವರ ಜೊತೆಯಲ್ಲಿ ನಾವು ಇದ್ದೇವೆ. ಅವರು ನಮ್ಮ ನಾಯಕರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಡಿ.5ನೇ ತಾರೀಖಿನ ಕಾರ್ಯಕ್ರಮದ ಬಗ್ಗೆ ನನಗೆ‌ ಗೊತ್ತಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದೆ. ಅದಕ್ಕೆ ಮಾಧ್ಯಮದಲ್ಲಿ ಸಿದ್ದರಾಮಯ್ಯ ಹಾಗೂ ನಾನು ಎಣ್ಣೆ - ಸೀಗೆಕಾಯಿ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದರು.

ಪತ್ರದಲ್ಲೇನಿದೆ?: ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಪಕ್ಷದ ಚಿನ್ನೆಯಡಿ ಕಾರ್ಯಕ್ರಮ ಆಯೋಜನೆ ಮಾಡಲು ತಿಳಿ ಹೇಳುವಂತೆ ಕೋರಿ ಕೈ ಕಾರ್ಯಕರ್ತರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಹರಿದಾಡುತ್ತಿದೆ. ಸಮಾವೇಶ ವಿರೋಧಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಆಪ್ತರು ಈ ಸಮಾವೇಶ ಕೈಗೊಳ್ಳುತ್ತಿದ್ದಾರೆ. ಪಕ್ಷದ ವೇದಿಕೆಯಡಿ ಕಾರ್ಯಕ್ರಮ ಮಾಡುತ್ತಿಲ್ಲ. ಬೇರೆ ಬೇರೆ ಸಂಘಟನೆಗಳ ಮೂಲಕ ಸಮಾವೇಶ ಮಾಡಲಾಗುತ್ತಿದೆ. ಅವರ ಹುಟ್ಟುಹಬ್ಬವನ್ನು ಅದೇ ರೀತಿ ಆಚರಿಸಿದ್ರು. ಆದರೆ ಅದರಲ್ಲಿ ಪಕ್ಷದ ಎಲ್ಲ ನಾಯಕರು ಇದ್ರು. ಈಗ ಮತ್ತೆ ಅಂತಹದ್ದೇ ಕಾರ್ಯಕ್ರಮ ಮಾಡ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿ ಮಾಡಿದರೆ ಉತ್ತಮ. ಅಹಿಂದ ಹೆಸರಿನಲ್ಲಿ‌ ಮಾಡಿದರೆ ಸರಿಯಲ್ಲ. ಹಾಗಾಗಿ, ಕಾರ್ಯಕ್ರಮಕ್ಕೆ ಅನುಮತಿ ನೀಡಬೇಡಿ ಎ‌ಂದು ವೈರಲ್​ ಆದ ಪತ್ರದಲ್ಲಿದೆ.

ಇದನ್ನೂ ಓದಿ: ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ನಮಗೆ ನಂಬಿಕೆಯಿಲ್ಲ: ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ

Last Updated : Nov 29, 2024, 6:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.