ETV Bharat / state

ತುಳುನಾಡಿನಲ್ಲಿಂದು ಆಟಿ ಅಮಾವಾಸ್ಯೆ; ಪಾಲೆ ಮರದ ಕಷಾಯ ಸೇವನೆ - Aati Amavasya

author img

By ETV Bharat Karnataka Team

Published : Aug 4, 2024, 12:11 PM IST

ಇಂದು ತುಳುವರಿಗೆ ಆಟಿ ಅಮಾವಾಸ್ಯೆ. ಈ ದಿನ ಹಾಳೆಮರದ ಕಷಾಯ ಸೇವಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ದಿನದ ವಿಶೇಷತೆಯ ಕುರಿತು ಒಂದು ವಿಶೇಷ ವರದಿ.

ಆಟಿ ಅಮಾವಾಸ್ಯೆ
ಆಟಿ ಅಮಾವಾಸ್ಯೆ (ETV Bharat)
ತುಳುನಾಡಿನಲ್ಲಿಂದು ಆಟಿ ಅಮವಾಸ್ಯೆ (ETV Bharat)

ಉಡುಪಿ: ತುಳುನಾಡು ಆಚಾರ-ವಿಚಾರ ಮತ್ತು ವಿಭಿನ್ನ ಸಂಸ್ಕ್ರತಿಗಳ ಬೀಡು. ಇಲ್ಲಿನ ಜನ ಜೀವನ ಶೈಲಿ, ಆಹಾರ ಕ್ರಮಗಳು ಕೂಡಾ ವಿಭಿನ್ನವೇ ಸರಿ. ಅದರಲ್ಲೂ ಆಟಿ ಅಮಾವಾಸ್ಯೆ ಇನ್ನೂ ವಿಶೇಷ.

ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆ ತುಳುನಾಡ ಜನರಿಗೆ ಬಹಳ ಪ್ರಮುಖ ದಿನ. ಈ ಭಾಗದ ಜಾನಪದ ಆಚರಣೆಯಾದ 'ಆಟಿ ಕಳೆಂಜ' ಬರುವ ಸಮಯವಿದು.

ಆಟಿ ವಿಶೇಷ: ತುಳು ಜನರು ಆಷಾಢವನ್ನು 'ಆಟಿ' ಎಂದು ಕರೆಯುತ್ತಾರೆ. ಈ ಆಟಿ ತಿಂಗಳಲ್ಲಿ ಬಹುತೇಕ ಮನೆಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಗೆಡ್ಡೆ-ಗೆಣಸು, ಸೊಪ್ಪು-ತರಕಾರಿಗಳನ್ನೇ ಹೆಚ್ಚಾಗಿ ತಿನ್ನುವ ಪರಿಪಾಠವಿದೆ. ಈ ವಿಶೇಷ ದಿನದಂದು ಮೊದಲು ನೆನಪಿಗೆ ಬರುವುದೇ ಪಾಲೆ(ಹಾಳೆ) ಮರದ ಕಷಾಯ. ಸಾವಿರದಷ್ಟು ಔಷಧ ಗುಣಗಳನ್ನು ಹೊಂದಿರುವ ಈ ಮರದ ತೊಗಟೆಯಿಂದ ರಸ ತೆಗೆದು ಖಾಲಿ ಹೊಟ್ಟೆಗೆ ಕುಡಿಯುವ ಪದ್ಧತಿ ಹಿಂದಿನಿಂದಲೂ ಬಂದಿರುವ ವಿಶಿಷ್ಟ ಕ್ರಮ.

ತುಳುವರು ತಮ್ಮದೇ ಆದ ಕ್ಯಾಲೆಂಡರ್​ ಅನುಸರಿಸುತ್ತಾರೆ. ಹಾಗಾಗಿ, ಜುಲೈ-ಆಗಸ್ಟ್ ಮಧ್ಯೆ ಬರುವ ತಿಂಗಳನ್ನು ಆಟಿ ಎನ್ನುವರು. ಆಟಿ ತಿಂಗಳ ಅಮವಾಸ್ಯೆಯ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಪಾಲೆ ಮರದ ಕಷಾಯ ಕುಡಿಯುವುದರಿಂದ ಮುಂದಿನ ಆಷಾಢ ಮಾಸದವರೆಗೂ ಯಾವುದೇ ಕಾಯಿಲೆಗಳು ಬರುವುದಿಲ್ಲ. ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಈ ಕಷಾಯದಿಂದ ವೃದ್ಧಿಯಾಗುತ್ತದೆ ಎಂಬ ಅಚಲ ನಂಬಿಕೆ ಜನರದ್ದು.

ಪಾಲೆ(ಹಾಳೆ) ಮರದ ವಿಶೇಷತೆ: ಪಾಲೆ ಮರ ಒಂದು ರೀತಿಯಲ್ಲಿ ಹಾಲಿನ ರೂಪದಲ್ಲಿ ರಸ ಕೊಡುವ ಮರ. ಆಟಿ ಅಮವಾಸ್ಯೆಯಂದು ಈ ಮರ ಮದ್ದಿನ ಅಂಶ ಹೊಂದಿದ್ದು, ದೈವಿಕ ಸ್ಥಾನವಿದೆ. ಮರದ ರಸದಲ್ಲಿ ಮಾಡುವ ಮದ್ದು ಕಹಿಯಾಗಿದ್ದರೂ, ವರ್ಷಕ್ಕೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿವೆ. ಮನುಷ್ಯನ ದೇಹಕ್ಕೆ ಬೇಕಾದ ರೋಗನಿರೋಧಕ ಶಕ್ತಿ ಇದರಲ್ಲಡಗಿದೆ. ಪ್ರತಿಯೊಂದು ಗೊಂಚಲಲ್ಲೂ ಏಳು ಎಲೆಗಳಿಂದ ತುಂಬಿರುವುದರಿಂದ ಇದನ್ನು 'ಸಪ್ತಪರ್ಣಿಮರ' ಅಂತಲೂ ಕರೆಯುತ್ತಾರೆ.

ಮರದ ತೊಗಟೆಯ ಕಷಾಯ: ಪಾಲೆ ಮರದ ತೊಗಟೆ ಯಾರು ತರಬೇಕು ಅನ್ನೋದನ್ನು ಅಮವಾಸ್ಯೆಯ ಹಿಂದಿನ ದಿನವೇ ಮನೆಯವರು ನಿರ್ಧರಿಸುತ್ತಾರೆ. ಹಾಗಾಗಿ, ಅದೇ ದಿನ ಸಂಜೆ ಆ ವ್ಯಕ್ತಿ ಕಾಡಿಗೋ ಗುಡ್ಡೆಗೋ ತೆರಳಿ ಆ ಮರವನ್ನು ಪತ್ತೆ ಹಚ್ಚಿ ಮರ ಅದಕ್ಕೊಂದು ಗುರುತು ಹಾಕಿ ಬರುತ್ತಾರೆ. ಅಮವಾಸ್ಯೆಯ ದಿನ ಸೂರ್ಯೋದಯಕ್ಕೂ ಮುನ್ನವೇ ಮನೆಯ ಯಜಮಾನ ಅಥವಾ ನಿರ್ಧರಿಸಿದ ವ್ಯಕ್ತಿ ಮರವಿದ್ದ ಜಾಗಕ್ಕೆ ತೆರಳಿ ಬರೀ ಮೈಯ್ಯಲ್ಲಿ ಹೋಗಿ ಮರದ ತೊಗಟೆ ತರಬೇಕು ಅನ್ನೋದು ನಿಯಮ. (ಆದರೆ ಈಗ ಬರಿ ಮೈಯಲ್ಲಿ ಹೋಗುವವರ ಸಂಖ್ಯೆ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ.)

ಹೀಗೆ ಬರುವ ವ್ಯಕ್ತಿ, ಮುಂಜಾನೆ ಮರದ ಬುಡಕ್ಕೆ ಬಂದು ‘ರೋಗ ನಿವಾರಿಸುವ ಎಲ್ಲಾ ಗುಣಗಳನ್ನು ತೊಗಟೆಗೆ ನೀಡು’ ಎಂದು ಪ್ರಕೃತಿ ಮಾತೆಯನ್ನು ಬೇಡಿಕೊಳ್ಳುತ್ತಾನೆ. ಪದ್ಧತಿಯಂತೆ ಪಾಲೆ ಮರಕ್ಕೆ ಮೂರು ಬಾರಿ ಪೊರಕೆಯಲ್ಲಿ ಹೊಡೆದು ನಂತರ ತೊಗಟೆ ಕಲ್ಲಿನಿಂದಲೇ ತೊಗಟೆ ತೆಗೆಯುತ್ತಾರೆ. (ಔಷಧೀಯ ಸತ್ವಗಳು ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಕತ್ತಿ, ಲೋಹಗಳನ್ನು ಬಳಸುವುದಿಲ್ಲ).

ಪಾಲೆ ಮರದ ತೊಗಟೆ ಅಂತ ಕೆಲವು ವಿಷಕಾರಿ ಮರದ ತೊಗಟೆಗಳನ್ನು ತಂದು ಸೇವಿಸಿದ ಪರಿಣಾಮ ಮನೆಯವರೆಲ್ಲ ಸಾವನ್ನಪ್ಪಿರುವ ಘಟನೆಗಳೂ ಈ ಹಿಂದೆ ನಡೆದಿವೆ. ಹಾಗಾಗಿ ಪಾಲೆ ಮರದ ತೊಗಟೆ ತರುವವರು ಜಾಗರೂಕರಾಗಿರಬೇಕು. ಇದೇ ಕಾರಣಕ್ಕೆ ಅಮವಾಸ್ಯೆಯ ಮುಂಚಿನ ದಿನ ಮರವನ್ನು ಗುರುತಿಸಿ ಅದಕ್ಕೊಂದು ಹಗ್ಗವನ್ನೋ, ಕತ್ತಿಯನ್ನೋ ಕಟ್ಟಿ ಬರುತ್ತಿದ್ದರು.

ಕಷಾಯ ಸೇವನೆಯ ಆರೋಗ್ಯ ಲಾಭಗಳು: ಮುಂಜಾನೆದ್ದು ಪಾಲೆ ಮರದ ತೊಗಟೆಯನ್ನು ತರಬೇಕು. ಓಮ, ಬೆಳ್ಳುಳ್ಳಿ, ಅರಿಶಿನ, ಕರಿ ಮೆಣಸು ಹಾಕಿ ಅರೆಯುವ ಕಲ್ಲಿನಲ್ಲಿ ಅರೆದು ರಸ ತೆಗೆಯುತ್ತಾರೆ. ಇವುಗಳನ್ನು ಬೆರೆಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ನಂತರ ಬಿಳಿ ಕಲ್ಲನ್ನು ಕೆಂಡಕ್ಕೆ ಹಾಕಿ ಬಿಸಿ ಮಾಡಿ ಪಾಲೆದ ಮರದ ಕಷಾಯಕ್ಕೆ ಹಾಕಿ ಮುಚ್ಚುತ್ತಾರೆ.

ತದ ನಂತರ ಬರೀ ಹೊಟ್ಟೆಗೆ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ಕಷಾಯ ಕುಡಿಸುತ್ತಾರೆ. ಈ ಮರದ ರಸದ ಔಷಧ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಅದನ್ನು ಸಮತೋಲಿತಗೊಳಿಸಲು ಕಷಾಯ ಸೇವಿಸಿದ ನಂತರ ಮೆಂತ್ಯೆ ಗಂಜಿ ಸೇವಿಸುತ್ತಾರೆ. ಹೀಗೆ ಆಟಿ ಅಮವಾಸ್ಯೆ ಆಚರಣೆ ತುಳುನಾಡಿನಲ್ಲಿ ಸಂಪ್ರದಾಯಬದ್ಧವಾಗಿ ನಡೆಯುತ್ತದೆ.

ಇದನ್ನೂ ಓದಿ: ಉಡುಪಿ: ಆಟಿ ಅಮಾವಾಸ್ಯೆ ಮಹತ್ವ, ಸಪ್ತಪರ್ಣಿ ಕಷಾಯದ ಹಿಂದಿದೆ ವೈಜ್ಞಾನಿಕ ಕಾರಣ - Ati amavasya

ETV Bharat Logo

Copyright © 2024 Ushodaya Enterprises Pvt. Ltd., All Rights Reserved.