ETV Bharat / state

ಚಾಮರಾಜನಗರ: ಇಎಲ್ ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ-ಬಿಇಓ, ಸಿಆರ್​ಪಿ ಅರೆಸ್ಟ್ - Chamarajanagara bribe case

ಇಎಲ್ ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್​ಪಿ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

Chamarajanagara BEO, CRP arrest under bribe case
ಇಎಲ್ ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ: ಬಿಇಓ, ಸಿಆರ್​ಪಿ ಅರೆಸ್ಟ್
author img

By ETV Bharat Karnataka Team

Published : Mar 14, 2024, 8:52 AM IST

ಚಾಮರಾಜನಗರ: ನಿವೃತ್ತ ಶಿಕ್ಷಕನ ಗಳಿಕೆ ರಜೆ (ಇಎಲ್) ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್​ಪಿ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ನಿವೃತ್ತ ಶಿಕ್ಷಕ ವಿಜಯ್ ಕುಮಾರ್ 139 ದಿನಗಳ ಗಳಿಕೆ ರಜೆಯ (ಎನ್​ಕ್ಯಾಶಮೆಂಟ್) ಹಣ ಮಂಜೂರು ಮಾಡಲು 15 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವಿಜಯ್ ಕುಮಾರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದರು.

ಬುಧವಾರ ಹನೂರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿವೃತ್ತ ಶಿಕ್ಷಕ ವಿಜಯ್ ಕುಮಾರ್ ಲಂಚದ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಇನ್ಸ್​​​ಪೆಕ್ಟರ್​ ಲೋಹಿತ್ ಕುಮಾರ್ ಹಾಗೂ ತಂಡ ಲಂಚ ಪಡೆಯುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್​ಪಿ ಮುನಿರಾಜುರವರನ್ನು ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೈಕೋರ್ಟ್ ಆದೇಶ ಉಲ್ಲಂಘಿಸಿ ರಸ್ತೆ ನಿರ್ಮಾಣ: ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.