ETV Bharat / state

ಗಣೇಶೋತ್ಸವ ಪ್ರಸಾದ ವಿತರಣೆಗೆ ಪರವಾನಗಿ ಷರತ್ತು ಜಾರಿ ಮಾಡಬೇಡಿ: ಸಿಎಂಗೆ ಪತ್ರ ಬರೆದ ಛಲವಾದಿ ನಾರಾಯಣಸ್ವಾಮಿ - Chalavadi Narayanaswamy letter

author img

By ETV Bharat Karnataka Team

Published : Sep 5, 2024, 8:00 PM IST

ಗಣೇಶೋತ್ಸವ ಪ್ರಸಾದ ವಿತರಣೆಗೆ ಪರವಾನಗಿ ಷರತ್ತು ಜಾರಿ ಮಾಡದಂತೆ ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದಿದ್ದಾರೆ.

CHALAVADI NARAYANASWAMY LETTER
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (ETV Bharat)

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಸ್ಥೆಗಳಿಗೆ ಪ್ರಸಾದ ವಿತರಣೆಗೆ ನಿರ್ಬಂಧ ವಿಧಿಸಿರುವ ನಿರ್ಧಾರ ಸರಿಯಲ್ಲ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಮಾತ್ರವೇ ಸಿದ್ಧಪಡಿಸಿ ಸಾರ್ವಜನಿಕರಿಗೆ ವಿತರಿಸಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬಾರದು, ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಗೌರಿ ಗಣೇಶೋತ್ಸವ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದು, ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್​​ಗಳಲ್ಲಿ ವಿತರಿಸುವ ಪ್ರಸಾದವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಮಾತ್ರವೇ ಸಿದ್ಧಪಡಿಸಿ ಸಾರ್ವಜನಿಕರಿಗೆ ವಿತರಿಸಬೇಕು ಎಂಬುದಾಗಿ ನಿಯಮಗಳನ್ನು ಬಲವಂತವಾಗಿ ಹೇರಿರುವುದು ಗಣೇಶನ ಭಕ್ತರಿಗೆ ಮಾಡಿದ ಅವಮಾನ. ಹಲವಾರು ಭಕ್ತರು ತಮ್ಮ ತಮ್ಮ ಮನೆಗಳಿಂದ ಪ್ರಸಾದಗಳನ್ನು ತಯಾರಿಸಿ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್‌ಗಳಲ್ಲಿ ವಿತರಿಸುತ್ತಿರುವುದು ಸರ್ವೆಸಾಮಾನ್ಯ, ಗಣೇಶನ ಭಕ್ತರು ಸಹ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕೆನ್ನುವುದು ವಿಪರ್ಯಾಸ ಎಂದು ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾಗಿ ಅಂದಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಈ ಹಬ್ಬವು ದೊಡ್ಡ ಮಟ್ಟದಲ್ಲಿ ಆಚರಣೆಯಾಗುತ್ತಿದ್ದು. ಅದೇ ಉತ್ಸಾಹ ಮತ್ತು ಸಂಭ್ರಮದಿಂದ ಆಚರಣೆ ಮಾಡುತ್ತಿರುವ ಈ ಹಬ್ಬಕ್ಕೆ ಅನಾವಶ್ಯಕ ಅನಗತ್ಯ ನಿಯಮಗಳನ್ನು ಹೇರುವ ಮೂಲಕ ಹಬ್ಬದ ಸಂಭ್ರಮವನ್ನು ಕುಗ್ಗಿಸುವ ಪ್ರಯತ್ನ ನಿಜಕ್ಕೂ ಖಂಡನೀಯ. ಬೇರೆ ಯಾವುದೇ ಧರ್ಮದ ಹಬ್ಬಗಳ ಆಹಾರ ವಿತರಣೆಗೆ ಇಲ್ಲದೇ ಇರುವ ನಿಯಮಗಳು ದೇಶದ ಬಹುಸಂಖ್ಯಾತರ ಆರಾಧ್ಯ ದೈವ ಆದ ಗಣೇಶನ ಹಬ್ಬದ ಆಚರಣೆಗೆ ಮಾತ್ರವೇ ಏಕೆ ಎಂಬುದು ಪ್ರಶ್ನೆ? ಈ ರೀತಿ ನಿಯಮಗಳು ಜನಮಾನಸದಲ್ಲಿ ಸಾಮರಸ್ಯ ಸಹಬಾಳ್ವೆ ಮತ್ತು ಸಹಜೀವನದ ಉನ್ನತ ಧೈಯಕ್ಕೆ ಧಕ್ಕೆ ಉಂಟು ಮಾಡಿದಂತಾಗಿದೆ. ಅಲ್ಲದೇ ರಾಜ್ಯದ ಕಾನೂನು ಸುವ್ಯವಸ್ಥೆಗೆ ಕೂಡ ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ದೂರಿದ್ದಾರೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಮಾತ್ರವೇ ಸಿದ್ಧಪಡಿಸಿ ಸಾರ್ವಜನಿಕರಿಗೆ ವಿತರಿಸಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸದಂತೆ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗಣೇಶನ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ - Ganesha idols demand increased

ETV Bharat Logo

Copyright © 2024 Ushodaya Enterprises Pvt. Ltd., All Rights Reserved.