ETV Bharat / state

ಡಾ. ಕೆ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ಸಚಿವ ಸಂಪುಟ ಸಭೆ - Kasturi Rangan report rejected - KASTURI RANGAN REPORT REJECTED

ಡಾ. ಕೆ ಕಸ್ತೂರಿ ರಂಗನ್ ವರದಿಯನ್ನು ಸಚಿವ ಸಂಪುಟ ಸಭೆ ಸಂಪೂರ್ಣವಾಗಿ ತಿರಸ್ಕರಿಸಿದೆ.

Minister H K Patil
ಸಚಿವ ಹೆಚ್ ಕೆ ಪಾಟೀಲ್ (ETV Bharat)
author img

By ETV Bharat Karnataka Team

Published : Sep 26, 2024, 6:48 PM IST

Updated : Sep 26, 2024, 7:12 PM IST

ಬೆಂಗಳೂರು : ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ನೀಡಿರುವ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಸಂಬಂಧ ಪ್ರದೇಶಗಳೆಂದು ಘೋಷಿಸುವ ಕೇಂದ್ರ ಸರ್ಕಾರವು 2024, ಜುಲೈ 31 ರಂದು ಹೊರಡಿಸಿರುವ ಕರಡು ಅಧಿಸೂಚನೆಗೆ ಕರ್ನಾಟಕ ಸರ್ಕಾರದ ಅಭಿಪ್ರಾಯ ನೀಡುವ ಬಗ್ಗೆ ಇಂದು ವಿವರವಾಗಿ ಚರ್ಚೆ ಮಾಡಿದ್ದು, ಡಾ. ಕೆ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ ಪಾಟೀಲ್ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ 50 ಎಕರೆ ಜಮೀನಿನಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು (UVCE) 500 ಕೋಟಿ ರೂ. ಗಳ ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತಾತ್ವಿಕ ‌ಅನುಮೋದನೆ ನೀಡಲಾಗಿದೆ ಎಂದರು.

ನಾಮನಿರ್ದೇಶನ, ಸಿಎಂಗೆ ಅಧಿಕಾರ: ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಉಪ ಚುನಾವಣೆ, 2024 ಅನ್ವಯ ಕುರಿತು ಮಾದರಿ ನೀತಿ ಸಂಹಿತೆ, ಭಾರತ ಸಂವಿಧಾನದ ಅನುಚ್ಛೇದ 171(3)(ಇ) ಅನುಸಾರ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ರಾಜ್ಯಪಾಲರಿಂದ ಇಬ್ಬರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ಬಗ್ಗೆ ಪರಿಶೀಲಿಸಿ ಸಿಎಂಗೆ ಅಧಿಕಾರ ಕೊಡಲಾಗಿದೆ ಎಂದು ತಿಳಿಸಿದರು.

ರಾಮಮೂರ್ತಿ, ನಿವೃತ್ತ ಸರ್ಕಾರದ ಉಪ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಸಚಿವಾಲಯ, ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 12(3)ರಡಿ ಇಲಾಖಾ ವಿಚಾರಣೆ ವಹಿಸಲು ಮಾಡಿರುವ ಶಿಫಾರಸನು ಕೈಬಿಡಲಾಗಿದೆ‌.

ಚಂದ್ರಶೇಖರ್, ಸರ್ಕಾರದ ವಿಶೇಷ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಸಚಿವಾಲಯ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 12(3)ರಡಿ ಇಲಾಖಾ ವಿಚಾರಣೆ ವಹಿಸಲು ಮಾಡಿರುವ ಶಿಫಾರಸು ಕೈಬಿಡಲಾಗಿದೆ‌.

"Karnataka Anand Marriages Registration Rules, 2024"ಕ್ಕೆ ಅನುಮೋದನೆ ನೀಡಲಾಗಿದೆ. ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು, ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿದುರುಗೂಡು ಗ್ರಾಮದಿಂದ ರಾಜ್ಯ ಹೆದ್ದಾರಿ - 57ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 29.35 ಕೋಟಿ ರೂ. ಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹ್ಯಾಟ್ - ಹಿಲ್‌ನಲ್ಲಿ ನಿರ್ಮಿಸಿರುವ ನ್ಯಾಯಾಂಗ ಅಧಿಕಾರಿಗಳ ವಸತಿ ನಿಲಯ ಕಟ್ಟಡಗಳ ನಿರ್ಮಾಣದ 11.70 ಕೋಟಿ ರೂ. ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಸಂಪುಟ ಸಭೆಯ ಇತರ ನಿರ್ಣಯಗಳು : ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ, ಹೊಸಕೆರೆಹಳ್ಳಿ ಗ್ರಾಮದ ಸ. ನಂ 75/200 0-20 ಗುಂಟೆ ಜಮೀನನ್ನು ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘ. ಬೆಂಗಳೂರು ಇವರಿಗೆ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಒಪ್ಪಿಗೆ. ರಾಮನಗರ ಜಿಲ್ಲೆ, ರಾಮನಗರ ತಾಲೂಕು, ಜಿಗೇನಹಳ್ಳಿ ಗ್ರಾಮದ ಸ. ನಂ 92 ರಲ್ಲಿನ 0.05 ಗುಂಟೆ "ಗೋಮಾಳ" ಜಮೀನನ್ನು ರಾಮನಗರ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತಕ್ಕೆ ಮಂಜೂರು ಮಾಡಲು ಅನುಮತಿ ನೀಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 15ನೇ ಹಣಕಾಸು ಆಯೋಗದ 30.00 ಕೋಟಿ ರೂ.ಗಳ ಅನುದಾನದಿಂದ 76 ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್​ಗಳನ್ನು (ಪ್ರತಿ ಬಸ್‌ಗೆ 39.08 ಲಕ್ಷ ರೂ.ಗಳ ಸಬ್ಸಿಡಿ ನೀಡಿ) ಪ್ರತಿ ಕಿ. ಮೀ ಗೆ ರೂ. 41.01 ದರದಲ್ಲಿ ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 15ನೇ ಹಣಕಾಸು ಆಯೋಗದ 25.00 ಕೋಟಿ ರೂ.ಗಳ ಅನುದಾನದಿಂದ 51 ಹವಾನಿಯಂತ್ರಣರಹಿತ ಎಲೆಕ್ಟ್ರಿಕ್ ಬಸ್​ಗಳನ್ನು (ಪ್ರತಿ ಬಸ್‌ಗೆ ರೂ. 39.08 ಲಕ್ಷಗಳ ಸಬ್ಸಿಡಿ ನೀಡಿ) ಪ್ರತಿ ಕಿ.ಮೀ.ಗೆ 41.01 ರೂ. ದರದಲ್ಲಿ GCC ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ರಾಜ್ಯ ನಗರ ಸಾರಿಗೆ ನಿಧಿ ಅಡಿಯಲ್ಲೇ ಮಂಜೂರಾಗಿರುವ 29.13 ಕೋಟಿ ರೂ.ಗಳ ಅನುದಾನದಿಂದ 21 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್​ಗಳನ್ನು (ಪ್ರತಿ ಬಸ್ ಗೆ 39.8 ಲಕ್ಷಗಳ ಸಬ್ಸಿಡಿ ನೀಡಿ) ಪ್ರತಿ ಕಿ.ಮೀಗೆ 41.01 ದರದಲ್ಲಿ ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಅನುಮೋದನೆ ನೀಡಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬಡಾವಣೆಯ ನಿವೇಶನ ಸಂಖ್ಯೆ: 823/3 ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ 3000 ಚ. ಮೀ. ಅಳತೆಯ ನಿವೇಶನವನ್ನು ವೀರಶೈವ ಸಮಾಜದ ವಸತಿ ನಿಲಯ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.

ರಾಜ್ಯ ವಿಪತ್ತು ಉಪಶಮನ ನಿಧಿ (SDMF) ಅಡಿ ಕೈಗೆತ್ತಿಕೊಳ್ಳುವ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ/ ಶಾಶ್ವತ ಪರಿಹಾರ ಹಾಗೂ ಪೋಲಾಗಿ ಹರಿದು ಹೋಗುವ ನೀರಿನ ಸದ್ಬಳಕೆ (Flood control and Flood Management for Bennihalla up to confluence of Malaprabha river) ಯೋಜನೆಯ 200.00 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

189 ಸರ್ಕಾರಿ ಪ್ರೌಢ ಶಾಲೆಗಳಲ್ಲಿ TALP (Technology Assisted Learning Program) ಮಾದರಿಯ ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್‌ನೆಟ್ ಸೌಲಭ್ಯಗಳನ್ನು 14.97 ಕೋಟಿ ರೂ.ಗಳ ಮೊತ್ತದಲ್ಲಿ ಟೆಂಡರ್ ಮೂಲಕ ಖರೀದಿಸಿ ಅನುಷ್ಠಾನಗೊಳಿಸಲು ಒಪ್ಪಿಗೆ.

ರಾಜ್ಯದಲ್ಲಿನ 74 ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ರೂ. 40.79 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲು ಸಂಪುಟ ಅನುಮೋದನೆ ನೀಡಿದೆ.

ಇದನ್ನೂ ಓದಿ : ಕಸ್ತೂರಿ ರಂಗನ್ ವರದಿ: ಸಿಎಂ, ಸಚಿವ ಸಂಪುಟ, ಸರ್ವಪಕ್ಷ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ- ಸಚಿವ ಖಂಡ್ರೆ - Kasturi Rangan Report

Last Updated : Sep 26, 2024, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.