ETV Bharat / state

ಬೆಂಗಳೂರು ಜಲ ಸಮಸ್ಯೆ‌ ನಿವಾರಣೆಗೆ ಫೀಲ್ಡಿಗಿಳಿದ BWSSB ಅಧ್ಯಕ್ಷ; ಕೈಗಾರಿಕೆಗಳಿಗೆ ಶುದ್ಧೀಕರಿಸಿದ ನೀರು ಪೂರೈಕೆ

ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ‌ ನಿವಾರಣೆಗೆ ಕಾರ್ಖಾನೆ ಮತ್ತು ಕೈಗಾರಿಕೆಗಳಿಗೆ ಎಸ್‍ಟಿಪಿಯಲ್ಲಿ ಸಂಸ್ಕರಿಸಿ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿ ರಾಮ್​ಪ್ರಸಾತ್ ಮನೋಹರ್ ತಿಳಿಸಿದರು.

BWSSB President Ramprasath Manohar visited water problem areas in Bengaluru
ಬೆಂಗಳೂರು ಜಲ ಸಮಸ್ಯೆ‌ ನಿವಾರಣೆಗೆ ಫೀಲ್ಡ್​ಗಿಳಿದ BWSSB ಅಧ್ಯಕ್ಷ
author img

By ETV Bharat Karnataka Team

Published : Mar 10, 2024, 9:37 PM IST

ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆ‌ಯನ್ನು ನಿವಾರಣೆಯ ನಿಟ್ಟಿನಲ್ಲಿ ಭಾನುವಾರ ಸ್ವತಃ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ(BWSSB) ಅಧ್ಯಕ್ಷ ರಾಮ್​ಪ್ರಸಾತ್ ಮನೋಹರ್ ಫೀಲ್ಡಿಗಿಳಿದು, ತಮ್ಮ ತಂಡದೊಂದಿಗೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವನಹಳ್ಳಿಯಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್(IISc) ವತಿಯಿಂದ ಅಳವಡಿಸಿರುವ ಫಿಲ್ಟರ್ ಕೊಳವೆ ಬಾವಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಮಾದರಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಳವಡಿಸುವ ಸಂಬಂಧ ತಜ್ಞರು ಹಾಗೂ ಅಧಿಕಾರಿಗಳ ತಂಡದೊಂದಿಗೆ ಅಗರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಎಸ್‍ಟಿಪಿಯಲ್ಲಿ ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿರುವುದನ್ನು ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕಾರ್ಖಾನೆ ಮತ್ತು ಕೈಗಾರಿಕೆಗಳಿಗೆ ಈ ಸಂಸ್ಕರಿಸಿ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು. ಸಂಪೂರ್ಣವಾಗಿ ಕುಡಿಯುವ ನೀರು ಪೂರೈಕೆಯಲ್ಲಿ ಅರ್ಧದಷ್ಟು ನೀರನ್ನು, ನೀರಿಲ್ಲದೆ ಸಮಸ್ಯೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಪೂರೈಸಲು ಚಿಂತನೆ ನಡೆಸಲಾಗಿದೆ. ಇದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ‌ವಿನೂತನ‌ ಚಿಂತನೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ನಾರಾಯಣಪುರ ಜಿಎಲ್‍ಆರ್​ಗೆ ಭೇಟಿ ನೀಡಿ ಪ್ರಸ್ತುತ ಬೇಸಿಗೆ ನೀರಿನ ಬಿಕ್ಕಟ್ಟನ್ನು ಎದುರಿಸಲು ಬೆಂಗಳೂರು ಪೂರ್ವ ವಲಯದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಂಟ್ಯಾಕ್ಸ್​ಗೆ ನೀರು ಒದಗಿಸಲು, ಖಾಸಗಿ ಟ್ಯಾಂಕರ್​ಗಳಿಗೆ ಕಾವೇರಿ ನೀರು ತುಂಬಲು ರಚಿಸಲಾದ ಫಿಲ್ಲಿಂಗ್ ಪಾಯಿಂಟ್‍ಗಳನ್ನು ಪರಿಶೀಲಿಸಿದರು. ವಾಟರ್ ಟ್ಯಾಂಕ್ ಸರಬರಾಜು ಘಟಕಕ್ಕೂ ಭೇಟಿ ನೀಡಿ ನೀರು ಪೂರೈಕೆ ಮಾಡುವ ಟ್ಯಾಂಕ್‍ಗಳ ಪರಿಶೀಲನೆ ನಡೆಸಿದರು. ಈ ಘಟಕದಿಂದ ಎ.ನಾರಾಯಣಪುರ ವಾರ್ಡ್, ಕೆ.ಆರ್.ಪುರಂ ವಾರ್ಡ್,ವಿಜ್ಞಾನ ನಗರ ವಾರ್ಡ್, ಎಚ್‍ಎಎಲ್ ವಾರ್ಡ್‍ಗೆ ಟ್ಯಾಂಕರ್​ನಿಂದ ನೀರು ಪೂರೈಸಲಾಗುತ್ತಿದೆ.

ನಂತರ ಎ.ನಾರಾಯಣಪುರದ ಕೃಷ್ಣನಗರದ ಸ್ಲಂಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಅಹವಾಲುಗಳನ್ನು ರಾಮ್​ಪ್ರಸಾತ್ ಆಲಿಸಿದರು. ನಿವಾಸಿಗಳಿಗೆ ಸಮರ್ಪಕವಾಗಿ ನೀರು ಬರುತ್ತಿದೆಯೇ ಏನಾದರೂ ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದರು. ಈ ಬಿರುಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿದ ಅಧ್ಯಕ್ಷರಿಗೆ ಸ್ಲಂ ನಿವಾಸಿಗಳು ಧನ್ಯವಾದ ಅರ್ಪಿಸಿದರು. ನಿವಾಸಿಗಳು ತಮ್ಮ ಪ್ರದೇಶಕ್ಕೆ ಇನ್ನೂ ಒಂದು ಟ್ಯಾಂಕ್ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿ ಕೊಳಚೆ ಪ್ರದೇಶಕ್ಕೆ ಇನ್ನೂ ಒಂದು ಟ್ಯಾಂಕ್ ವ್ಯವಸ್ಥೆ ಮಾಡಲು ತಿಳಿಸಿದರು. ಇದೇ ಸಂದರ್ಭದಲ್ಲಿ ಮಿನಿ ಸಿಂಟ್ಯಾಕ್ಸ್ ನೀರಿನ ಟ್ಯಾಂಕ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿಸಿ ಕೊಳಚೆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಐಐಎಸ್‍ಸಿ ತಜ್ಞ ಪ್ರೊ.ವಿಶ್ವನಾಥ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜನಿಯರ್​ಗಳು ಮತ್ತು ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ಬೆಂಗಳೂರಿನ ಕೆರೆಗಳಿಗೆ ಸಂಸ್ಕರಿಸಿದ ನೀರು: ಅಂತರ್ಜಲ ಮಟ್ಟ ಹೆಚ್ಚಿಸಲು BWSSB ಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.