ETV Bharat / state

ಜೂನ್ 10ರಿಂದ 3 ದಿನ ಹಸಿ ಕರಗ ಉತ್ಸವ, ಗಂಗಮ್ಮ ದೇವಿ ಜಾತ್ರೆ: ಬಿ.ಕೆ.ಶಿವರಾಂ - B K Shivaram

author img

By ETV Bharat Karnataka Team

Published : Jun 7, 2024, 9:27 PM IST

ಜೂನ್ 10ರಿಂದ ಮೂರು ದಿನಗಳ ಕಾಲ ಶ್ರೀ ಗಂಗಮ್ಮ ದೇವಿಯ ಜಾತ್ರೆ ಮತ್ತು ಹಸಿ ಕರಗ ಮಹೋತ್ಸವ ಜರುಗಲಿದೆ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಹೇಳಿದರು.

bk-shivaram
ಬಿ ಕೆ ಶಿವರಾಂ (ETV Bharat)

ಬೆಂಗಳೂರು: ನಗರದ ಕೋದಂಡರಾಮಪುರದಲ್ಲಿ ಶ್ರೀ ಗಂಗಮ್ಮ ದೇವಿಯ ಜಾತ್ರೆ ಮತ್ತು ಹಸಿ ಕರಗ ಮಹೋತ್ಸವ ಸಮಾರಂಭ ಜೂನ್ 10ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ತಿಳಿಸಿದ್ದಾರೆ.

ಶುಕ್ರವಾರ ಉತ್ಸವದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ಕೆ.ಶಿವರಾಂ, ಮುಂದಿನ ಪೀಳಿಗೆ ನಮ್ಮ ಸಂಪ್ರದಾಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಮಹೋತ್ಸವಗಳ ಅವಶ್ಯಕತೆ ಇದೆ. ಆದ್ದರಿಂದ ಗಂಗಮ್ಮ ದೇವಿ ಜಾತ್ರೆ ಮಹೋತ್ಸವ ಮತ್ತು ಹಸಿ ಕರಗ ಮಹೋತ್ಸವ ಕಾರ್ಯಕ್ರಮಗಳು ಜೂನ್ 10, 11 ಮತ್ತು 12ರಂದು ಜರುಗಲಿವೆ ಎಂದರು.

ಶ್ರೀ ಗಂಗಮ್ಮ ದೇವಿ ಆರಾಧನೆಗೆ 96 ವರ್ಷಗಳ ಇತಿಹಾಸವಿದೆ. ಚಂಗವಲ್ಲ ನಾಯಕರ್ ಕುಟುಂಬ ಗಂಗಮ್ಮ ದೇವಿಯ ಪೂಜೆ ಪುನಸ್ಕಾರಗಳ ಜವಾಬ್ದಾರಿ ಹೊತ್ತು ನಡೆಸುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಜನರು ಪ್ಲೇಗ್ ಮಹಾಮಾರಿಗೆ ತುತ್ತಾಗಿದ್ದಾಗ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತಮುತ್ತಲು ವಾಸಿಸುತ್ತಿದ್ದ ಜನರು ಗಂಗಮ್ಮ ದೇವಿಯ ಪೂಜೆ ಪ್ರಾರಂಭಿಸಿದರು. ನಂತರ ಭಕ್ತಾಧಿಗಳ ಆಶಯದಂತೆ 2004ರಲ್ಲಿ ದೇವಿಗೆ ಶಾಶ್ವತ ದೇವಸ್ಥಾನ ನಿರ್ಮಿಸಲಾಯಿತು ಎಂದು ಮಾಹಿತಿ ನೀಡಿದರು.

10ನೇ ತಾರೀಖು ಸಂಜೆ 5 ಗಂಟೆಗೆ ಕ್ಷೀರಕುಂಭ ಮೆರವಣಿಗೆ ನಡೆಯಲಿದೆ. ಅಂದು ಸಾವಿರಾರು ಮಹಿಳೆಯರು ಕಳಸ ಹೊತ್ತು ಸರ್ಕಲ್ ಮಾರಮ್ಮ ದೇವಸ್ಥಾನದಿಂದ ಹೊರಟು ಕೋದಂಡರಾಮಪುರವನ್ನು ತಲುಪುವರು. 11ನೇ ತಾರೀಖು ಬೆಳಗ್ಗೆ 6ಗಂಟೆಗೆ ಶ್ರೀ ಗಂಗಮ್ಮ ದೇವಿಗೆ ಮಾಂಗಲ್ಯ ಸೂತ್ರಧಾರಣೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆ ಕುಂಭನೈವೇದ್ಯ ಹಾಗೂ ಮಹಾಮಂಗಳಾರತಿ, ಸಂಜೆ 7 ಗಂಟೆಗೆ ಹಸಿ ಹೂವಿನ ಕರಗ ದೇವಸ್ಥಾನದಿಂದ ಹೊರಟು ಕೋದಂಡರಾಮಪುರ, ವೈಯಾಲಿಕಾವಲ್, ಮಲ್ಲೇಶ್ವರಂ ರಸ್ತೆಗಳ ಮೂಲಕ ಬೆಳಗಿನ ಜಾವ 2 ಗಂಟೆಗೆ ದೇವಸ್ಥಾನ ತಲುಪಲಿದೆ ಎಂದರು.

12ನೇ ತಾರೀಖು ಬೆಳಗ್ಗೆ 9.30ಕ್ಕೆ ಸುಮಂಗಲಿ ಪೂಜೆ, ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆಯನ್ನು ಕೋದಂಡರಾಮಪುರ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ. ಸಂಜೆ 5.30ಕ್ಕೆ ದೇವಿಯ ರಥೋತ್ಸವ ಕೋದಂಡರಾಮಪುರ, ಮಲ್ಲೇಶ್ವರಂ, ವೈಯ್ಯಾಲಿಕಾವಲ್ ಮತ್ತು ಗುಟ್ಟಹಳ್ಳಿ ರಸ್ತೆಗಳ ಮುಖಾಂತರ ಬೆಳಗ್ಗೆ 4 ಗಂಟೆಗೆ ದೇವಸ್ಥಾನ ತಲುಪಲಿದೆ ಎಂದು ಹೇಳಿದರು.

ಬೆಂಗಳೂರು ಧರ್ಮಸ್ವಾಮಿ ದೇವಸ್ಥಾನದಲ್ಲಿ ಜರುಗುವ ಕರಗದಲ್ಲಿರುವ ಆಚರಣೆ, ಸಂಪ್ರದಾಯ, ಪೂಜೆ ಶೈಲಿ ಗಂಗಮ್ಮ ದೇವಿ ಹಸಿ ಕರಗದಲ್ಲಿಯೂ ಇರಲಿದೆ. ರೋಗ-ರುಜಿನಗಳು ಬರಬಾರದು, ನಾಡಿನ ಜನರಿಗೆ ಸುಖ, ಶಾಂತಿ ನೆಮ್ಮದಿ ಲಭಿಸಲಿ ಎಂದು ಗಂಗಮ್ಮ ದೇವಿಯ ಪೂಜೆ ಮಾಡಲಾಗುತ್ತಿದೆ. ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳಿಂದ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.

ಇನ್ನು ವಿಶ್ವಪರಿಸರ ದಿನಾಚರಣೆ ಅಂಗವಾಗಿ ಬರುವ ಭಕ್ತಾದಿಗಳಿಗೆ ಹತ್ತು ಸಾವಿರ ಬೇವಿನ ಮತ್ತು ತುಳಸಿ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸ್ಥಳೀಯ ಸಂಘ, ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಸಹಕಾರ ನೀಡುತ್ತಿದ್ದಾರೆ. ದೇಶಿಯ ಕಲಾತಂಡಗಳಿಗೆ ವಿಶೇಷ ಅವಕಾಶ ನೀಡಲಾಗಿದೆ. ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ, ಮೈಸೂರು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್, ಗಂಗಮ್ಮ ದೇವಿಯ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ನಟರಾಜ್ ಇದ್ದರು.

ಇದನ್ನೂ ಓದಿ : ಐತಿಹಾಸಿಕ ಬೆಂಗಳೂರು ಕರಗಕ್ಕೆ ಸಾಕ್ಷಿಯಾದ ಭಕ್ತ ಸಮೂಹ: 'ಗೋವಿಂದ ಗೋವಿಂದ’ ನಾಮಸ್ಮರಣೆ - Bengaluru Karaga Utsav

ETV Bharat Logo

Copyright © 2024 Ushodaya Enterprises Pvt. Ltd., All Rights Reserved.