ETV Bharat / state

"ಬಜೆಟ್ ಬರೀ ಓಳು": ಪರಿಷತ್​​ನಲ್ಲಿ ಬಿಜೆಪಿ ಸದಸ್ಯರಿಂದ ಭಿತ್ತಿಪತ್ರ ಪ್ರದರ್ಶನ - ಭಿತ್ತಿಪತ್ರ ಪ್ರದರ್ಶನ

ಬಿಜೆಪಿ ಸದಸ್ಯರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಿತ್ತಪತ್ರ ಪ್ರದರ್ಶಿಸಿದರು.

Poster display by BJP members
ಬಿಜೆಪಿ ಸದಸ್ಯರಿಂದ ಭಿತ್ತಿಪತ್ರ ಪ್ರದರ್ಶನ
author img

By ETV Bharat Karnataka Team

Published : Feb 16, 2024, 11:05 AM IST

Updated : Feb 16, 2024, 1:36 PM IST

ಬೆಂಗಳೂರು: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25 ನೇ ಸಾಲಿನ ಆಯವ್ಯಯ ಮಂಡಿಸುತ್ತಿದ್ದರೆ, ಅತ್ತ ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯರು ಬಜೆಟ್​ ಬರೀ ಓಳು ಎಂದು ಬಿತ್ತಿ ಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಸದನ ಮುಂದೂಡಿಕೆಯಾಗುತ್ತಿದ್ದಂತೆ ಬಜೆಟ್ ವಿರೋಧಿಸಿ ಬಿಜೆಪಿ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು.

ಪರಿಷತ್​​ನಲ್ಲಿ ಬಿಜೆಪಿ ಸದಸ್ಯರಿಂದ ಭಿತ್ತಿಪತ್ರ ಪ್ರದರ್ಶನ

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾನಾಯಕ ಬೋಸರಾಜ್, ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡಿಸಿದ ಪ್ರಸಕ್ತ ವರ್ಷದ ಆರ್ಥಿಕ ಮುಂಗಡ ಬಜೆಟ್ ಅನ್ನು ಪರಿಷತ್​ನಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಬ್ಯಾಗ್ ನಿಮಗೆ ಮಾತ್ರವೇ, ನಮಗಿಲ್ಲವೇ, ಕಾಂಗ್ರೆಸ್​ಗೆ ಮಾತ್ರ ಬ್ಯಾಗ್​ನಲ್ಲಿ ಬಜೆಟ್ ಪ್ರತಿಯೇ ಎಂದು ಕಾಲೆಳೆದರು.

ನಂತರ ಮಾತನಾಡಲು ಪ್ರತಿಪಕ್ಷ ಸಚೇತಕ ರವಿಕುಮಾರ್ ಮುಂದಾಗುತ್ತಿದ್ದಂತೆ, ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು. ಸದನ ಮುಂದೂಡಿಕೆ ಬಳಿಕ ಸದನದಲ್ಲಿ, ಬಜೆಟ್ ಸುಳ್ಳಿನ ಕಂತೆ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.

ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಭಿತ್ತಿಪತ್ರ ಪ್ರದರ್ಶಿಸಿದರು. ಖಾಲಿ ಖಾಲಿ ಖಜಾನೆ ಖಾಲಿ.. ಇದು ಸುಳ್ಳಿನ ಬಜೆಟ್ ಎಂದು ಟೀಕೆ ಮಾಡಿದರು. ಸಿದ್ದರಾಮಯ್ಯ ಬಜೆಟ್ ಬರೀ ಓಳು ಎನ್ನುತ್ತಾ, ಭಾರತ್ ಮಾತಾಕಿ ಜೈ, ಪ್ರಧಾನಿ ಮೋದಿಗೆ ಜೈ, ಜೈ ಶ್ರೀರಾಮ್ ಎನ್ನುವ ಘೋಷಣೆ ಮೊಳಗಿಸಿದರು.

ರೈತರಿಗೆ ಪರಿಹಾರ ಕೊಡದ ಸಿಎಂ‌ ಸಿದ್ದರಾಮಯ್ಯಗೆ ಧಿಕ್ಕಾರ ಎನ್ನುವ ಘೋಷಣೆ ಹಾಕಿದ ಬಿಜೆಪಿ ಸದಸ್ಯರು 'ಬರ ಪರಿಹಾರ ಕೊಡದ ಸಿಎಂ', 'ಬರೀ ಭಾಷಣ ಮಾಡುತ್ತಿರುವ ಓಳು ಸಿದ್ದರಾಮಯ್ಯ', 'ಬಕೆಟ್ ಓಳು ಓಳು ಬರೀ ಓಳು' ಎನ್ನುತ್ತಾ ಸದನದಿಂದ ನಿರ್ಗಮಿಸಿದರು.

ಇದನ್ನೂ ಓದಿ: ಸೂಟ್​​​​ಕೇಸ್​​​ಗೆ ಬೈಬೈ; ಚರ್ಮದ ಬ್ಯಾಗ್​ಗೆ ಹಾಯ್​​ ಹಾಯ್, ಹೊಸ ಸಂಪ್ರದಾಯಕ್ಕೆ ಸಿದ್ದರಾಮಯ್ಯ ಮುನ್ನುಡಿ

Last Updated : Feb 16, 2024, 1:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.