ETV Bharat / state

'ನನ್ನನ್ನು ಗೆಲ್ಲಿಸಬೇಕು ಎಂದು ಜನತೆಯ ಹೃದಯ ಮಿಡಿಯುತ್ತಿದೆ': ಡಾ.ಸಿ.ಎನ್.ಮಂಜುನಾಥ್ ವಿಶ್ವಾಸ - C N Manjunath - C N MANJUNATH

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

bjp-candidate-cn-manjunath
ಡಾ.ಸಿ.ಎನ್.ಮಂಜುನಾಥ್
author img

By ETV Bharat Karnataka Team

Published : Apr 6, 2024, 7:48 AM IST

ಬೆಂಗಳೂರು: ''ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನತೆ ಬದಲಾವಣೆ ಬಯಸಿದ್ದಾರೆ. ನನ್ನನ್ನು ಗೆಲ್ಲಿಸಲು ಕ್ಷೇತ್ರದ ಜನತೆಯ ಹೃದಯ ಮಿಡಿಯುತ್ತಿದೆ'' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಹೇಳಿದರು.

BJP JDS MEETING
ಬಿಜೆಪಿ - ಜೆಡಿಎಸ್ ನಾಯಕರ ಸಮನ್ವಯ ಸಮಿತಿ ಸಭೆ

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಬಿಜೆಪಿ - ಜೆಡಿಎಸ್ ನಾಯಕರ ಸಮನ್ವಯ ಸಮಿತಿ ಸಭೆ ನಡೆಯಿತು. ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಹಾಗೂ ಕ್ಷೇತ್ರದ ಉಭಯ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗೆಲ್ಲುವ ಕುರಿತು ರಣತಂತ್ರ ರೂಪಿಸುವ ಚರ್ಚೆ ನಡೆಯಿತು. ಅಪರಾಹ್ನ ಆರಂಭಗೊಂಡ ಸಭೆ ಮಧ್ಯಾಹ್ನದವರೆಗೂ ನಡೆಯಿತು. ಸಭೆ ಬಳಿಕ ಒಟ್ಟಿಗೆ ಊಟ ಮಾಡಿದ ಉಭಯ ನಾಯಕರು ನಂತರ ಪ್ರತ್ಯೇಕವಾಗಿ ಮತ್ತೆ ಸಭೆ ನಡೆಸಿದರು. ಡಿಕೆ ಬ್ರದರ್ಸ್​ಗೆ ಟಕ್ಕರ್ ಕೊಡಲು ರಣತಂತ್ರ ಹೆಣೆಯುವ ಕುರಿತು ಚರ್ಚಿಸಲಾಯಿತು.

ಸಭೆ ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್, ''ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಚುನಾವಣಾ ಪ್ರಚಾರ ಪ್ರವಾಸದ ಕಾರ್ಯಕ್ರಮವನ್ನು ನಿಗದಿ ಮಾಡಿದ್ದೇವೆ. ಜೆಡಿಎಸ್ - ಬಿಜೆಪಿ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎರಡು ದಿನಕ್ಕೆ ಒಂದು ವಿಧಾನಸಭಾ ಕ್ಷೇತ್ರ ಕವರ್ ಮಾಡುವ ಬಗ್ಗೆ ಚರ್ಚೆ ಮಾಡಲಾಯಿತು. ಯಾವುದೇ ಗೊಂದಲ ಇಲ್ಲ, ನಾವೆಲ್ಲ ಒಟ್ಟಾಗಿ ಹೋಗುತ್ತಿದ್ದೇವೆ'' ಎಂದರು.

''ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಬರುತ್ತಿದೆ, ಜನರು ಮೋದಿ ನಾಯಕತ್ವ ಬಯಸಿದ್ದಾರೆ. ಈ ಬಾರಿ ಬದಲಾವಣೆ ನಿರೀಕ್ಷೆ ಇದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರ ಹೃದಯ ಡಾ.ಸಿ.ಎನ್.ಮಂಜುನಾಥ್ ಅವರನ್ನ ಗೆಲ್ಲಿಸಲು ಮಿಡಿಯುತ್ತಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು: ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ''ಯಾವುದೇ ತಂತ್ರಗಾರಿಕೆ ಇಲ್ಲ. ಚುನಾವಣೆ ಗೆಲ್ಲಬೇಕು ಅಷ್ಟೇ. ಡಾ.ಮಂಜುನಾಥ್ ಇಡೀ ಕ್ಷೇತ್ರದಲ್ಲಿ ವಿದ್ಯುತ್ ಸಂಚಲನ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಸಂಚಲನ ಆರಂಭ ಆಗಿದೆ. ಮೋದಿ ಕೈ ಬಲಪಡಿಸಲು ಮಂಜುನಾಥ್ ಗೆಲ್ಲಿಸಿಕೊಂಡು ಬರಲು ಜನರು ಮನಸ್ಸು ಮಾಡಿದ್ದಾರೆ. ಚುನಾವಣೆಯಲ್ಲಿ ಅವರ ದುಡ್ಡಿನ ಮುಂದೆ ನಮ್ಮ ರಾಜಕೀಯ ಏನಿಲ್ಲ. ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು. ಇದೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತದೆ. ನಮ್ಮಿಂದ ಮತ ಕೊಂಡುಕೊಂಡ ಬಳಿಕ ಆ ಮತ ಪರಿವರ್ತನೆ ಆಗಲಿದೆ ಅಂದುಕೊಂಡಿದ್ದಾರೆ. ಅವರ ದುಡ್ಡಿನ ಮದ ಇಳಿಸಲು ಡಾಕ್ಟರ್ ಎನ್ನುವ ಅಂಕುಶ ನಮ್ಮ ಬಳಿ ಇದೆ'' ಎಂದರು.

ಬಂಡೆ ಕರಗಲಿದೆ: ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಮಾತನಾಡಿ, ''ಯಾವ ರೀತಿ ಬೆಂಗಳೂರು ಗ್ರಾಮಾಂತರ ಚುನಾವಣೆ ಮಾಡಬೇಕು ಅಂತ ಚರ್ಚೆ ಮಾಡಲಾಗಿದೆ. ನಮ್ಮ ಎಲ್ಲ ನಾಯಕರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಅಭ್ಯರ್ಥಿ ಯಾವ ರೀತಿ ಎಲ್ಲಿ ಪ್ರಚಾರ ಮಾಡಬೇಕು ಎನ್ನುವ ನಿರ್ಧಾರ ಆಗಿದೆ. ಇದು ದೇಶದ ಚುನಾವಣೆ ಮೋದಿಯವರ ಚುನಾವಣೆ, ಇದು ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಅವರ ಚುನಾವಣೆ ಅಲ್ಲ. ಈ ಚುನಾವಣೆಯಲ್ಲಿ ಅವರು ಗೆದ್ದರೂ ಪ್ರಯೋಜನ ಇಲ್ಲ. ಯಾತಕ್ಕಾಗಿ ಅವರಿಗೆ ವೋಟ್ ಹಾಕಬೇಕು, ಎಲ್ಲ ಕಡೆ ಕುಕ್ಕರ್ ಕೂಗ್ತಿದೆ. ಹಣ ಹಂಚುತ್ತಿದ್ದಾರೆ. ಈ ಬಾರಿ ಬಂಡೆ ಒಡೆಯಲ್ಲ, ಕರಗಿ ಹೋಗುತ್ತದೆ'' ಎಂದು ಭವಿಷ್ಯ ನುಡಿದರು.

ಚನ್ನಪಟ್ಟಣ ಆಪರೇಷನ್ ಹಸ್ತ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ''ಎಲ್ಲ ದುಡ್ಡಿಗೋಸ್ಕರ ಹೋಗಿದ್ದಾರೆ. ಎರಡು ವರ್ಷದಲ್ಲಿ ಏನ್ ಕೆಲಸ ಮಾಡಿದ್ದಾರೆ ಎಂದು ಗೊತ್ತು. ಇವರ ದುರಹಂಕಾರ ಇಳಿಸೋದಕ್ಕೆ ಡಾ.ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಿದ್ದೇವೆ. ಕಾಸು ಕೊಟ್ಟು ಕಾಲಿಗೆ ಬೀಳುತ್ತಿದ್ದಾರೆ. 25 ವೋಟ್ ಇದ್ರೂ‌ ಮನೆಗೆ ಹೋಗಿ ಗೋಗರೆಯುತ್ತಿದ್ದಾರೆ. ಗ್ಯಾರಂಟಿ ‌ಯೋಜನೆಗಳಿಂದ ಯಾರ ಮೇಲೆ ಹೊರೆ ಹೊರೆಸಿದ್ದಾರೆ? ಅದಕ್ಕಾಗಿ ಎಷ್ಟು ಸಾಲ‌ ಮಾಡಿದ್ದೀರಿ? 1.52 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈಗ ಸಾಲ ಮಾಡಿ ಜನರ ಮೇಲೆ ಹಾಕುತ್ತಿದ್ದಾರೆ. ಕೂಪನ್ ಕಾರ್ಡ್ ತಂದಿದ್ದಾರೆ. ರಾಜ್ಯದಲ್ಲಿ ನೀರಿನ ಸಮಸ್ಯೆ‌ ಇದೆ'' ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಜ್ಯದ 13 ಕ್ಷೇತ್ರಗಳ ನಾಮಪತ್ರ ಪರಿಶೀಲನೆ: 276 ಕ್ರಮಬದ್ಧ, 60 ತಿರಸ್ಕೃತ - Lok Sabha Elections

ETV Bharat Logo

Copyright © 2025 Ushodaya Enterprises Pvt. Ltd., All Rights Reserved.