ದೇವನಹಳ್ಳಿ: ಕಳೆದ ರಾತ್ರಿ 10 ಗಂಟೆ ಸಮಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಹವಾಮಾನ ವೈಪರೀತ್ಯದಿಂದಾಗಿ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ಸಾಧ್ಯವಾಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದ 8 ವಿಮಾನಗಳನ್ನು ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ಇದರಲ್ಲಿ ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ ಎಂದು ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಮುಂಬೈನಿಂದ ಆಕಾಶ ಏರ್ ವಿಮಾನ (QP1341), ದೆಹಲಿಯಿಂದ ವಿಸ್ತಾರಾ ವಿಮಾನ (UK 807), ಬ್ಯಾಂಕಾಕ್‌ನಿಂದ ಥಾಯ್ (TG 325) ಮತ್ತು ಥಾಯ್ ಲಯನ್ ಏರ್ (SL 216), ಗುವಾಹಟಿಯಿಂದ ಏರ್ ಏಷ್ಯಾ ಇಂಡಿಯಾ ವಿಮಾನ (I5 821), ಮುಂಬೈನಿಂದ ಏರ್ ಇಂಡಿಯಾ ವಿಮಾನ (AI 585), ಪ್ಯಾರಿಸ್‌ನಿಂದ ಏರ್ ಫ್ರಾನ್ಸ್ (AF 194) ಮತ್ತು ಆಮ್‌ಸ್ಟರ್‌ಡ್ಯಾಮ್‌ನಿಂದ KLM ವಿಮಾನ (KL 879)ಗಳನ್ನು ಕಳೆದ ರಾತ್ರಿ ಚೆನ್ನೈಗೆ ಡೈವರ್ಟ್ ಮಾಡಲಾಗಿದೆ.
ನಗರದಲ್ಲಿ ಮಧ್ಯರಾತ್ರಿ ಮಳೆಯ ಪ್ರಭಾವ ಕಡಿಮೆಯಾದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಪುನರಾರಂಭಗೊಂಡಿದೆ.
ಇದನ್ನೂ ಓದಿ: ಬೆಂಗಳೂರು: ಡ್ರೈವಿಂಗ್ ತಿಳಿಯದ ಯುವಕ ಎಕ್ಸ್ಲೆಟರ್ ತುಳಿದ: ಕಾರು ಹರಿದು 5 ವರ್ಷದ ಬಾಲಕ ಸಾವು - car accident