ETV Bharat / state

ಜಗದೀಶ ಶೆಟ್ಟರ್ ಹೊರಗಿನವರು ಅಂತಾ ಜನ ಮರೆತಿದ್ದಾರೆ: ಶಾಸಕ ಬಾಲಚಂದ್ರ ಜಾರಕಿಹೊಳಿ - Balachandra Jarkiholi

ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವುದನ್ನು ಜನ ಮರೆತಿದ್ದಾರೆ. ಚುನಾವಣೆ ಅಷ್ಟೊತ್ತಿಗೆ ಪೂರ್ತಿ ಮರೆತು, ಬೆಳಗಾವಿ ಜನ ಅವರನ್ನು ಸ್ವೀಕರಿಸುತ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

author img

By ETV Bharat Karnataka Team

Published : Apr 17, 2024, 9:43 PM IST

MLA Balachandra Jarkiholi spoke to the media.
ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವ ವಿಷಯ ಈಗ ಮುಗಿದು ಹೋಗಿದೆ. ಈ ಆರೋಪಕ್ಕೆ ಈಗಾಗಲೇ ಶೆಟ್ಟರ್ ಅವರೇ ಉತ್ತರ ಕೊಟ್ಟಿದ್ದಾರೆ‌. ಸ್ಥಳೀಯರು ಟಿಕೆಟ್ ಕೇಳಿದ್ದರಿಂದ ಹೊಗಿನವರು ಎನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಕಾಂಗ್ರೆಸ್ಸಿನವರು ಆರೋಪ ಮಾಡಬೇಕು ಎಂದು ಏನಾದರೂ ಹೇಳುತ್ತಾರೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿರುಗೇಟು ನೀಡಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಸ್ವಾಭಿಮಾನ ಮತ್ತೊಂದು ನೆನಪಾಗುತ್ತದೆ. ಯಾರೇ ಚುನಾವಣೆಗೆ ನಿಂತರೂ ಇದನ್ನು ಹೇಳುತ್ತಾರೆ. ಅದು ತಪ್ಪು ಅಂತಾ ಹೇಳೋಕೆ ಆಗೋದಿಲ್ಲ. ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವುದನ್ನು ಜನ ಮರೆತಿದ್ದಾರೆ. ಚುನಾವಣೆ ಅಷ್ಟೊತ್ತಿಗೆ ಪೂರ್ತಿ ಮರೆತು, ಬೆಳಗಾವಿ ಜನ ಅವರನ್ನು ಸ್ವೀಕರಿಸುತ್ತಾರೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನ ಬಂದಿದ್ದರು. ಮೋದಿ ಅಲೆ ಇರೋದು ಜನರ ಪ್ರತಿಕ್ರಿಯೆ ನೋಡಿದ್ರೆ ಗೊತ್ತಾಗುತ್ತೆ. ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ. ಹಾಗಾಗಿ ಹೆಚ್ಚಿನ ಮತಗಳ ಅಂತರದಿಂದ ಶೆಟ್ಟರ್ ಗೆಲ್ಲುತ್ತಾರೆ. ಜಗದೀಶ್ ಶೆಟ್ಟರ್ ಗೆದ್ದು ಕೇಂದ್ರ ಮಂತ್ರಿ ಆದರೆ ಒಳ್ಳೆಯದು. ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. . ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಇದೇ ವೇಳೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ಅಸ್ತ್ರ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಬಂದಾಗ ಇದೆಲ್ಲ ಸ್ವಾಭಾವಿಕ. ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೋದಿ ಫೇಸ್ ವ್ಯಾಲ್ಯೂ ಜಾಸ್ತಿ ಇದೆ. ಇದೆಲ್ಲ ವರ್ಕ್ ಔಟ್ ಆಗಲ್ಲ. ಚುನಾವಣೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಹಾಗಂತ ಜಿದ್ದಿಗೆ ಬಿದ್ದು ಯಾರದೋ‌ ಜೊತೆಗೂ ಕುಸ್ತಿ ಹಿಡಿದು ಮಾಡುತ್ತಿಲ್ಲ. ನಮ್ಮ ಚುನಾವಣೆ ಹೇಗೆ ಆರಾಮವಾಗಿ, ಶಾಂತಿ, ಸಂಯಮದಿಂದ ಮಾಡುತ್ತೆವೋ, ಅದೇ ರೀತಿ ಮತ ನೀಡುವಂತೆ ಜನರ ಬಳಿ ಕೇಳಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಚಿಕ್ಕೋಡಿಯಲ್ಲೂ ಅಣ್ಣಾಸಾಹೇಬ ಜೊಲ್ಲೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಅಲ್ಲಿ ಅವರು ಓಡಾಡುತ್ತಿದ್ದಾರೆ. ಚಿಕ್ಕೋಡಿಗೆ ಪ್ರಚಾರಕ್ಕೆ ನಮ್ಮನ್ನು ಕರೆದಿಲ್ಲ. ನಾವು ಬೆಳಗಾವಿ ಲೋಕಸಭೆಯಲ್ಲಿ ಬಹಳ ಬ್ಯುಜಿ ಇದ್ದೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಗ್ಯಾರಂಟಿ ವರ್ಕೌಟ್ ಆಗೋದಿಲ್ಲ: ಗ್ಯಾರಂಟಿ ವರ್ಕೌಟ್ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ಯಾವುದೇ ಒಂದು ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ವಿರೋಧಿ ಅಲೆ ಸೃಷ್ಟಿಯಾಗುತ್ತದೆ. ಆದರೆ, ಈ ಸರ್ಕಾರಕ್ಕೆ ಒಂದೇ ವರ್ಷದಲ್ಲಿ ಇಷ್ಟೊಂದು ವಿರೋಧಿ‌ ಅಲೆ ಎದ್ದಿದೆ. ಹಾಗಾಗಿ, ಗ್ಯಾರಂಟಿ ವರ್ಕೌಟ್ ಆಗೋದಿಲ್ಲ. ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದು, ರಾಜ್ಯದ ಒಳ್ಳೆಯ ಭವಿಷ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಗೋವಾ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಈಗ ಅದನ್ನು ಹೇಳಲು ಆಗೋದಿಲ್ಲ. ಅವರು ಮುಖ್ಯಮಂತ್ರಿ ಇದ್ದವರು, ಅವರಿಗೆ ಗೊತ್ತಿದ್ದಷ್ಟು ನಮಗೆ ಗೊತ್ತಿರುವುದಿಲ್ಲ. ಸಮೀಕ್ಷೆಯಲ್ಲಿ ಬಂದಂತೆ 25 ಸ್ಥಾನ ಗೆದ್ದರೆ, ಆಗ ಕಾಂಗ್ರೆಸ್ ಶಾಸಕರಿಗೆ ಮುಂದೆ ಭವಿಷ್ಯ ಹೇಗೆ ಎಂಬ ವಿಚಾರ ಬರಬಹುದು ಎಂದರು.

ಯತ್ನಾಳ ಸಿಎಂ ಆದ್ರೆ ಒಳ್ಳೆಯದು: ಶಾಸಕ ಬಸನಗೌಡ ಯತ್ನಾಳ್ ಅವರು ಸಿಎಂ ಆಗುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲಚಂದ್ರ, ಯತ್ನಾಳ ಸಿಎಂ ಆದರೆ ಒಳ್ಳೆಯದು. ಉತ್ತರ ಕರ್ನಾಟಕದವರು ಸಿಎಂ ಆದರೆ ಒಳ್ಳೆಯದು, ನಾನು ಖುಷಿ ಪಡುತ್ತೇನೆ ಮತ್ತು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಜಗದೀಶ ಶೆಟ್ಟರ್ ನಾಮಪತ್ರ ಸಲ್ಲಿಕೆ: ಮಾಜಿ ಸಿಎಂ ಬಿಎಸ್​ವೈ ಸಾಥ್, ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.