ETV Bharat / state

ಅದೃಷ್ಟ ಪರೀಕ್ಷೆಗಿಳಿದ ಅಣ್ಣ-ತಂಗಿ; ಬಳ್ಳಾರಿಯಿಂದ ಶ್ರೀರಾಮುಲು, ಹಿಂದೂಪುರದಿಂದ ಜೆ.ಶಾಂತಾ ಕಣಕ್ಕೆ - B Shriramulu - B SHRIRAMULU

ಬಳ್ಳಾರಿಯಿಂದ ಶ್ರೀರಾಮುಲು, ಹಿಂದೂಪುರದಿಂದ ಜೆ.ಶಾಂತಾ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ.

ಶ್ರೀರಾಮುಲು ಹಾಗೂ ಜೆ. ಶಾಂತಾ
ಶ್ರೀರಾಮುಲು ಹಾಗೂ ಜೆ. ಶಾಂತಾ
author img

By ETV Bharat Karnataka Team

Published : Apr 3, 2024, 10:59 PM IST

ಬಳ್ಳಾರಿ: ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳ ಬಲಾಬಲ ಪರೀಕ್ಷೆಗೆ ಸಾಕ್ಷೀಭೂತವಾಗಿ ನಡೆಯುತ್ತಿರುವ ಲೋಕಸಭೆ ಚುನಾವಣೆ ವಿವಿಧ ಕಾರಣಗಳಿಗೆ ಗಮನ ಸೆಳೆದಿದೆ. ಕರ್ನಾಟಕದಲ್ಲಿಯೂ ಚುನಾವಣಾ ಕಾವು ರಂಗೇರಿದೆ. ಈ ನಡುವೆ ಅಣ್ಣ ತಂಗಿ ಜೋಡಿ ಪ್ರಸಕ್ತ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ವಿಶೇಷ. ಅಣ್ಣ ಕರ್ನಾಟಕದಿಂದ ಸ್ಪರ್ಧಿಸುತ್ತಿದ್ದರೆ, ತಂಗಿ ಆಂಧ್ರದಿಂದ ಕಣಕ್ಕಿಳಿದಿದ್ದಾರೆ. ಇಬ್ಬರು ಭಿನ್ನಭಿನ್ನ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಶ್ರೀರಾಮುಲು ಹಾಗೂ ಜೆ.ಶಾಂತಾ ಅವರೇ ಅದೃಷ್ಟ ಪರೀಕ್ಷೆಗಿಳಿದಿರುವ ಅಣ್ಣ ತಂಗಿ ಜೋಡಿ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀ ರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಜೆ. ಶಾಂತಾ ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಿಂದೂಪುರದಿಂದ ಕಣಕ್ಕಿಳಿದಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ. ಶಾಂತಾ, ಕಾಂಗ್ರೆಸ್‌ನ ಎನ್.ವೈ.ಹನುಮಂತಪ್ಪ ಅವರ ವಿರುದ್ದ 2243 ಮತಗಳ ಅಂತರದಿಂದ ವಿಜಯಿಯಾಗಿದ್ದರು. ಆ ವೇಳೆ ರಾಜಕೀಯಕ್ಕೆ ಹೊಸ ಮುಖವಾಗಿದ್ದರೂ ರೆಡ್ಡಿ ಸಹೋದರರೇ ವರ್ಚಸ್ಸಿನಿಂದ ಗೆಲುವು ತಮ್ಮದಾಗಿಸಿಕೊಂಡಿದ್ದರು. 2014 ರಲ್ಲಿ ತಮ್ಮ ಸೋದರ ಶ್ರೀರಾಮುಲು ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟರು.

2018ರಲ್ಲಿ ಶ್ರೀರಾಮುಲು ರಾಜ್ಯ ರಾಜಕಾರಣಕ್ಕೆ ಮರಳಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಜೆ. ಶಾಂತಾ ಅವರನ್ನು ಉಪ ಚುನಾವಣೆಯಲ್ಲಿ ಕಣಕ್ಕಿಳಿಸಲಾಯಿತು. ಆದರೆ, ಚುನಾವಣೆಯಲ್ಲಿ ಸೋಲುಂಡರು. ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಈ 2023ರ ಬಿಜೆಪಿ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದರು.

ಆದರೆ, ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಉಮೇದಿನೊಂದಿಗೆ ಆಂಧ್ರಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಹಿಂದೂಪುರ ಕ್ಷೇತ್ರದಲ್ಲಿ ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಜೆ. ಶಾಂತಾ ಅವರ ತವರು ಮನೆ ಬಳ್ಳಾರಿ. ಆಂಧ್ರದ ಗುಂತಕಲ್ಲು ನಗರ ಅವರ ಪತಿಯ ಊರು. ಹಿಂದೂಪುರ ಲೋಕಸಭಾ ಕ್ಷೇತ್ರವು ಅನಂತಪುರ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರ ಹಾಗೂ ಶ್ರೀಸತ್ಯಸಾಯಿ ಜಿಲ್ಲೆಯ ಆರು ಕ್ಷೇತ್ರಗಳನ್ನು ಒಳಗೊಂಡಿದೆ. 15 ಲಕ್ಷ ಮತದಾರರಿದ್ದಾರೆ. 1957ರಿಂದ ಈವರೆಗೆ 10 ಬಾರಿ ಕಾಂಗ್ರೆಸ್, 5 ಬಾರಿ ಟಿಡಿಪಿ ಹಾಗೂ 1 ಬಾರಿ ವೈಎಸ್‌ಆರ್ ಕಾಂಗ್ರೆಸ್ ಇಲ್ಲಿ ಗೆದ್ದಿದೆ.

ಆಂಧ್ರದಲ್ಲಿ ಲೋಕಸಭೆಯೊಂದಿಗೆ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು, ರಾಜಕೀಯ ಕಣ ರಂಗೇರಿದೆ. ಹಿಂದುಪುರ ಕ್ಷೇತ್ರದಲ್ಲಿ ಜೆ.ಶಾಂತಾ ಅವರಿಗೆ ಟಿಡಿಪಿಯ ಮಾಜಿ ಸಂಸದ ಬಿ.ಕೆ.ಪಾರ್ಥಸಾರಥಿ ಎದುರಾಳಿಯಾಗಿದ್ದಾರೆ. ಅಲ್ಲಿ ಏ.18ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮೇ 13ಕ್ಕೆ ಮತದಾನ ನಡೆಯಲಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ: ಬಿ. ಶ್ರೀರಾಮುಲು - B Sriramulu

ETV Bharat Logo

Copyright © 2025 Ushodaya Enterprises Pvt. Ltd., All Rights Reserved.