ETV Bharat / state

ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಯಡಿಯೂರಪ್ಪ - B S YEDIYURAPPA

ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಉಪಚುನಾವಣೆ ಕುರಿತು ಮಾತನಾಡಿ, ಎಲ್ಲ ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

b-s-yediyurappa
ಬಿ‌.ಎಸ್.ಯಡಿಯೂರಪ್ಪ (ETV Bharat)
author img

By ETV Bharat Karnataka Team

Published : Oct 24, 2024, 10:43 PM IST

ಹುಬ್ಬಳ್ಳಿ: ರಾಜ್ಯದ ಮೂರೂ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿಯಾಗಿ ಯಾರೇ ನಿಂತರೂ ಗೆಲುವು ಖಚಿತ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರ ಮಗ ಚುನಾವಣೆಗೆ ನಿಂತಿರುವ ಕಾರಣ ಅವರು ಗೆಲುತ್ತಾರೆ ಎಂದು ಹೇಳಿದರು.

ಬಿಜೆಪಿ ಹಿರಿಯ ನಾಯಕ ಬಿ‌.ಎಸ್.ಯಡಿಯೂರಪ್ಪ ಹೇಳಿಕೆ (ETV Bharat)

ಕುಟುಂಬ ರಾಜಕಾರಣದ ವಿಚಾರವಾಗಿ ಪ್ರತಿಕ್ರಿಯಿಸಿ, ಬಸವರಾಜ ಬೊಮ್ಮಾಯಿ ಅವರು ಯಾವುದೇ ಕಾರಣಕ್ಕೂ ತಮ್ಮ ಮಗನಿಗೆ ಟಿಕೆಟ್ ಬೇಡ ಎಂದು ತಿಳಿಸಿದ್ದರು. ಆದರೆ, ಕೇಂದ್ರದ ನಾಯಕರು ನಮಗೆ ಬಂದಿರುವ ರಿಪೋರ್ಟ್ ಪ್ರಕಾರ ನಿಮ್ಮ ಮಗ ಗೆಲ್ಲುತ್ತಾರೆ. ಹಾಗಾಗಿ, ಅವರಿಗೆ ನಾವು ಟಿಕೆಟ್​ ನೀಡುತ್ತೇವೆ ಎಂದು ಹೇಳಿ, ಬೊಮ್ಮಾಯಿ ಅವರ ಅಭಿಪ್ರಾಯ ಕೇಳದೇ ಭರತ್ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ನಿಖಿಲ್​ ಗೆಲುವಿಗೆ ಒಟ್ಟಿಗೆ ಶ್ರಮಿಸಿ, ದೊಡ್ಡ ಅಂತರದ ಜಯ ಪಡೆಯುತ್ತೇವೆ: ಬಿಎಸ್​ವೈ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.