ETV Bharat / state

ಯಲಹಂಕ, ದಾಸರಹಳ್ಳಿ ವ್ಯಾಪ್ತಿಯ ನಾಗರಿಕರಿಗೆ ನೀರಿನ ಸಮಸ್ಯೆೆ ಆಗದಂತೆ ಸೂಕ್ತ ಕ್ರಮ: ತುಷಾರ್ ಗಿರಿನಾಥ್ - prevent water problems for citizens - PREVENT WATER PROBLEMS FOR CITIZENS

ಬಿಬಿಎಂಪಿ ಅಧಿಕಾರಿಗಳು ಜಲಮಂಡಳಿಯ ಅಧಿಕಾರಿಗಳ ಜತೆ ಸಮನ್ವಯತೆ ಸಾಧಿಸಿ ನೀರಿನ ವ್ಯವಸ್ಥೆೆ ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.

appropriate-measures-should-be-taken-to-prevent-water-problems-for-citizens-of-yalahanka-and-dasarahalli
ಯಲಹಂಕ, ದಾಸರಹಳ್ಳಿ ವ್ಯಾಪ್ತಿಯ ನಾಗರಿಕರಿಗೆ ನೀರಿನ ಸಮಸ್ಯೆೆ ಆಗದಂತೆ ಸೂಕ್ತ ಕ್ರಮ: ತುಷಾರ್ ಗಿರಿನಾಥ್
author img

By ETV Bharat Karnataka Team

Published : Mar 26, 2024, 10:59 PM IST

ಬೆಂಗಳೂರು: ನಗರದ ಯಲಹಂಕ ಹಾಗೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ನಾಗರಿಕರಿಗೆ ನೀರಿನ ಸಮಸ್ಯೆೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯಲಹಂಕ ಹಾಗೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಕುಡಿವ ನೀರಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿ, ಪಾಲಿಕೆಯ ಅಧಿಕಾರಿಗಳು ಜಲಮಂಡಳಿಯ ಅಧಿಕಾರಿಗಳ ಜತೆ ಸಮನ್ವಯತೆ ಸಾಧಿಸಿಕೊಂಡು ನೀರಿನ ಸಮಸ್ಯೆೆಯ ಕುರಿತು ಗಮನಹರಿಸಿ ಕೂಡಲೇ ನೀರಿನ ವ್ಯವಸ್ಥೆೆ ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

Appropriate measures should be taken to prevent water problems for  citizens of Yalahanka and Dasarahalli
ತುಷಾರ್ ಗಿರಿನಾಥ್

ಶುದ್ಧ ಕುಡಿವ ನೀರಿನ ಘಟಕ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ನೀರಿನ ಕೊರತೆಯಿರುವ ಘಟಕಗಳಿಗೆ ತಾತ್ಕಾಲಿಕ ನೀರಿನ ವ್ಯವಸ್ಥೆೆ ಮಾಡಿಕೊಂಡು ನೀರಿನ ಪೂರೈಕೆ ಮಾಡಬೇಕು ಹಾಗೂ ನೀರಿನ ಅಭಾವ ಹೆಚ್ಚಿರುವ ಕಡೆ ಸಿಂಟೆಕ್ಸ್ ಟ್ಯಾಂಕ್​ಗಳನ್ನು ಅಳವಡಿಸಿ ನೀರಿನ ಪೂರೈಕೆಯನ್ನು ಮಾಡಬೇಕು. ಎರಡೂ ವಲಯಗಳಿಗೆ ಕೊಳವೆ ಬಾವಿಗಳ ನಿರ್ವಹಣೆ, ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಈಗಾಗಲೇ ಅನುದಾನ ನೀಡಲಾಗಿದೆ. ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ರೀ ಡ್ರಿಲ್ ಮಾಡುವುದು ಹಾಗೂ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ವ್ಯವಸ್ಥೆೆ ಮಾಡಬೇಕು ಹಾಗೂ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿ ನಿಯೋಜನೆ ಮಾಡಿರುವ ಟ್ಯಾಂಕರ್​ಗಳು ಎಷ್ಟು ಬಾರಿ ನೀರಿನ ಪೂರೈಕೆ ಮಾಡಲಿವೆ ಎಂಬುದನ್ನು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದರು.

ಎಲ್ಲಿಯೂ ನೀರಿನ ಸಮಸ್ಯೆೆ ಎದುರಾಗದಂತೆ ನೋಡಿಕೊಳ್ಳಬೇಕು: ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿರುವ ಪಂಪ್​ಸೆಟ್​ಗಳನ್ನು ಹೊರತೆಗೆದು ಯಾವುದಾದರು ಯಂತ್ರ ಹಾಳಾಗಿರುವ ಸ್ಥಿತಿಯಲ್ಲಿದ್ದರೆ ಅದನ್ನು ದುರಸ್ತಿಪಡಿಸಿಕೊಂಡು ಒಂದು ಕಡೆ ಸಂಗ್ರಸಿಟ್ಟುಕೊಳ್ಳಬೇಕು. ಯಾವುದಾದರು ಕೊಳವೆ ಬಾವಿಯಲ್ಲಿ ಪಂಪ್ ಸೆಟ್ ಹಾಳಾದಲ್ಲಿ ಕೂಡಲೇ ಸಂಗ್ರಹಿಸಿಟ್ಟಿರುವ ಯಂತ್ರಗಳನ್ನು ಕೊಳವೆ ಬಾವಿಗೆ ಅಳವಡಿಸಿ ನೀರಿನ ಪೂರೈಕೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳ ಪೈಕಿ ಯಲಹಂಕ ವಲಯಕ್ಕೆೆ 16 ಹಳ್ಳಿ ಹಾಗೂ ದಾಸರಹಳ್ಳಿ ವಲಯಕ್ಕೆೆ 5 ಹಳ್ಳಿಗಳು ಬರಲಿವೆ. ಈ ಹಳ್ಳಿಗಳಿಗೆ ಪಾಲಿಕೆಯಿಂದ ನೀರಿನ ವ್ಯವಸ್ಥೆೆ ಮಾಡಲಾಗುತ್ತಿದೆ. ಮಳೆಗಾಲ ಪ್ರಾರಂಭವಾಗುವವರೆಗೆ ಎಲ್ಲಿಯೂ ನೀರಿನ ಸಮಸ್ಯೆೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಯಲಹಂಕ ವಲಯ ವ್ಯಾಪ್ತಿಯ ಥಣಿಸಂದ್ರ ವಾರ್ಡ್ ವ್ಯಾಪ್ತಿಯ ಮುಖ್ಯ ರಸ್ತೆೆಯ ಬಳಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆದು ಪಂಪ್​ಸೆಟ್ ಅಳವಡಿಸಿ ನೀರು ಪೂರೈಕೆ ಮಾಡುತ್ತಿರುವ ಸ್ಥಳಕ್ಕೆೆ ಖುದ್ದು ಭೇಟಿ ನೀಡಿ ವೀಕ್ಷಿಸಿದರು. ಈ ವೇಳೆ ವಲಯ ಆಯುಕ್ತ ಕರೀಗೌಡ, ಪ್ರೀತಿ ಗೆಹ್ಲೋಟ್, ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಬಾಲಶೇಖರ್, ಮುಖ್ಯ ಅಭಿಯಂತರರಾದ ರಂಗನಾಥ, ರವಿ, ಕಾರ್ಯಪಾಲಕ ಅಭಿಯಂತರರು, ಜಲಮಂಡಳಿ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ಜಲಮಂಡಳಿ ವತಿಯಿಂದ ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌: ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ - Rainwater Harvesting

ETV Bharat Logo

Copyright © 2025 Ushodaya Enterprises Pvt. Ltd., All Rights Reserved.