ETV Bharat / state

ಕಡಬದ ದೋಂತಿಲದಲ್ಲಿ 800 ವರ್ಷ ಹಿಂದಿನ ಕನ್ನಡ ಶಿಲಾಶಾಸನ ಪತ್ತೆ - 800 year old inscription found - 800 YEAR OLD INSCRIPTION FOUND

ಇತ್ತೀಚಿನವೆರೆಗ ಈ ಶಿಲಾಶಾಸನಕ್ಕೆ ಗರ್ಭಗುಡಿಯಲ್ಲಿ ಸರ್ವರೀತಿಯ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಆದರೆ ಶಾಸನವೆಂದು ತಿಳಿದ ಬಳಿಕ ಅದನ್ನು ಬಾಲಾಲಯದ ಹೊರಗೋಡೆಗೆ ತಗುಲಿಸಿ ಇಡಲಾಗಿದೆ.

An 800-year-old Kannada inscription was found in Donthila, Kadaba
ಕಡಬದ ದೋಂತಿಲದಲ್ಲಿ 800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ (ETV Bharat)
author img

By ETV Bharat Karnataka Team

Published : Jul 4, 2024, 11:27 AM IST

ಕಡಬ (ದಕ್ಷಿಣ ಕನ್ನಡ): ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ನಡೆಸಲ್ಪಡುವ "ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ" ಯೋಜನೆಯಡಿಯಲ್ಲಿ ಯೋಜನೆಯ ಪ್ರಮುಖ ಅಧ್ಯಯನಕಾರ, ಇತಿಹಾಸ ತಜ್ಞ ಡಾ.ಉಮಾನಾಥ ಶೆಣೈ ವೈ. ಅವರ ನೇತೃತ್ವದಲ್ಲಿ ಶಾಸನವನ್ನು ಅಧ್ಯಯನ ಮಾಡಲಾಯಿತು. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ್ ಭಟ್, ವಿವೇಕಾನಂದ ಬಿ.ಇಡಿ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ರಾಜೀವಿ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಅವರು ಅಧ್ಯಯನ ತಂಡಕ್ಕೆ ಸಹಕರಿಸಿದರು.

ಶಾಸನದ ಸ್ವರೂಪ ಹೇಗಿದೆ?: ಈ ಶಿಲಾಶಾಸನವು ಸುಮಾರು 30 ಇಂಚು ಎತ್ತರ ಹಾಗೂ 16 ಇಂಚು ಅಗಲ, 4 ಇಂಚು ದಪ್ಪ ಇದೆ. ಶಾಸನದ ಮುಖ್ಯ ಪಠ್ಯವನ್ನು 14 ಇಂಚು ಅಗಲ ಹಾಗೂ 17 ಇಂಚು ಎತ್ತರದ ಅಳತೆಯಲ್ಲಿ ಶಿಲೆಯನ್ನು ಅರ್ಧ ಇಂಚು ಒಳಭಾಗಕ್ಕೆ ಕೊರೆದು ಹೊರ ಭಾಗದಲ್ಲಿ ಚೌಕ ಆಕಾರದ ಉಬ್ಬು ಪಟ್ಟಿ ನೀಡಿ ಒಳ ಭಾಗವನ್ನು ಸಮತಟ್ಟಾಗಿ ಮಾಡಿ ಅಕ್ಷರಗಳನ್ನು ಕೆತ್ತಲಾಗಿದೆ. ಶಾಸನದ ಕೆಳಭಾಗವು ಅಂದರೆ ಭೂಮಿಯ ಒಳಗೆ ಹೂತು ಹಾಕುವ ಭಾಗವು 15 ಇಂಚು ಇದೆ. ಶಾಸನದ 17 ಇಂಚು ಮೇಲೆ ಹೋದಂತೆ ಶಾಸನವು ಅರ್ಧಚಂದ್ರಾಕೃತಿ ಆಕಾರವನ್ನು ಪಡೆದಿದ್ದು, ಅದರ ಶಿರೋಭಾಗದ ಮಂಟಪದ ಮಧ್ಯದಲ್ಲಿ ಒಂದು ನವಿಲಿನ ಆಕೃತಿಯನ್ನು, ಅದರ ಬಲ ಭಾಗದಲ್ಲಿ ಸೂರ್ಯ ಹಾಗೂ ಸಣ್ಣ ದೀಪ, ಎಡ ಭಾಗದಲ್ಲಿ ಅರ್ಧಚಂದ್ರ ಹಾಗೂ ಸ್ವಲ್ಪ ದೊಡ್ಡದಾದ ಉರಿಯುತ್ತಿರುವ ದೀಪದ ಆಕೃತಿಯನ್ನು ಕೆತ್ತಲಾಗಿದೆ.

ಶಾಸನ ಬೆಳಕಿಗೆ ಬಂದಿದ್ದು ಹೇಗೆ?: ನೂರಾರು ವರ್ಷಗಳಿಂದ ಈ ಸ್ಥಳದಲ್ಲಿ ಒಂದು ಪುಟ್ಟ ಗುಡಿ ಇದ್ದು, ಅದರ ಗರ್ಭಗುಡಿಯಲ್ಲಿರುವ ಪಾಣಿಪೀಠದ ಮಧ್ಯದಲ್ಲಿ ಈಗ ಬೆಳಕಿಗೆ ಬಂದ ಶಿಲಾ ಶಾಸನದ ಮೇಲ್ಭಾಗ ಮಾತ್ರ ಕಾಣುತ್ತಿತ್ತು. ಇಲ್ಲಿನ ಸ್ಥಳೀಯರು ಸುಬ್ರಮಣ್ಯ ಸ್ವಾಮಿಯ ವಾಹನ ಮಯೂರ ರೂಪದಲ್ಲಿದ್ದ ಈ ಶಾಸನವನ್ನೇ ವಿಗ್ರಹವೆಂದು ತಿಳಿದು ಪೂಜಿಸುತ್ತಿದ್ದರು. 2024ರಲ್ಲಿ ಜೀರ್ಣೋದ್ಧಾರ ಮಾಡುವ ಸಲುವಾಗಿ ಗರ್ಭಗುಡಿಯ ಒಳಗಿದ್ದ ವಿಗ್ರಹವನ್ನು ಬಾಲಾಲಯಕ್ಕೆ ಸ್ಥಳಾಂತರಿಸುವ ಸಂದರ್ಭ ಮಯೂರ ರೂಪದಲ್ಲಿದ್ದ, ದೇವರ ವಿಗ್ರಹವೆಂದು ಭಾವಿಸಿದ್ದ ಈ ಶಿಲಾಕಲ್ಲನ್ನು ಮೇಲೆತ್ತುವಾಗ ಸುಮಾರು ಮೂರೂವರೆ ಅಡಿ ಗಾತ್ರದ ಪುರಾತನ ಶಿಲಾಶಾಸನ ಬೆಳಕಿಗೆ ಬಂದಿದೆ. ಅಲ್ಲಿಯವರೆಗೆ ಈ ಶಿಲಾ ಶಾಸನಕ್ಕೆ ಸರ್ವ ರೀತಿಯ ಪೂಜೆ ಪುರಸ್ಕಾರ, ಅಭಿಷೇಕಗಳು ನಡೆಯುತ್ತಿತ್ತು ಎಂಬುದು ಅಚ್ಚರಿಯ ಸಂಗತಿ. ಇದು ಮೂರ್ತಿಯಲ್ಲ ಶಾಸನ ಎಂದು ತಿಳಿದ ಬಳಿಕ ಪ್ರಸ್ತುತ ಇದನ್ನು ಬಾಲಾಲಯದ ಹೊರ ಗೋಡೆಗೆ ತಗುಲಿಸಿ ಇಡಲಾಗಿದೆ. ಪ್ರಸ್ತುತ ಈ ಶಾಸನಕ್ಕೆ ಪೂಜೆ ಪುರಸ್ಕಾರಗಳು ನಡೆಯುತ್ತಿಲ್ಲ.

ಶಾಸನದಲ್ಲಿವೆ ಪಠ್ಯಗಳು: "ಈ ಶಾಸನದಲ್ಲಿ ಸುಮಾರು 15 ಸಾಲುಗಳಿದ್ದು, ಕನ್ನಡ ಲಿಪಿಯಲ್ಲಿ ಶಾಸನವನ್ನು ಕೆತ್ತಲಾಗಿದೆ. ಲಿಪಿಯು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಸ್ವಸ್ತಿ ಶ್ರೀ ಎಂದು ಪ್ರಾರಂಭವಾಗುವ ಈ ಶಾಸನದಲ್ಲಿ ನೀರು ಲಭ್ಯವಾಗಲು ಮಹಾಯಾಗವನ್ನು ನಡೆಸಿದ ಉಲ್ಲೇಖವಿದೆ. ಹಾಗೂ ಕುಕ್ಕೆಯ ದೈವಗಳು ಎಂಬ ಪದದ ಉಲ್ಲೇಖವಿದೆ. ಮಾತ್ರವಲ್ಲದೆ, ಶಾಸನದಲ್ಲಿ 'ತುಳು ರಾಜ್ಯ' ಎಂಬ ಪದದ ಪ್ರಯೋಗವಾಗಿದ್ದು, ಇದು ತುಳು ನಾಡಿನ ಭವ್ಯ ಪರಂಪರೆಯನ್ನು ಪುಷ್ಟೀಕರಿಸುವ ಮಹತ್ವದ ದಾಖಲೆ ಇದಾಗಿದೆ ಎನ್ನಬಹುದು. ಈ ಶಿಲಾ ಶಾಸನವು ವಿಜಯನಗರ ಸಾಮ್ರಾಜ್ಯ ಕಾಲಕ್ಕೆ ಸಂಬಂಧಿಸಿದ್ದು, ಸುಮಾರು 800 ವರ್ಷ ಹಳೆಯದಾಗಿದೆ. ಈ ಕ್ಷೇತ್ರದ ಬಗ್ಗೆ ಆಳವಾದ ಹಾಗೂ ವಿಚಾರನಿಷ್ಠವಾದ ಅಧ್ಯಯನ ನಡೆಸಿದರೆ ಇನ್ನೂ ಅನೇಕ ಐತಿಹಾಸಿಕ ಹಾಗೂ ಪದ್ಧತಿ ಪರಂಪರೆಯ ವಿಚಾರಗಳು ಬೆಳಕಿಗೆ ಬರಬಹುದು. ಮಾತ್ರವಲ್ಲದೆ ಈ ಕ್ಷೇತ್ರವು ಇನ್ನೊಮ್ಮೆ ಐತಿಹಾಸಿಕ ವೈಭವದಿಂದ ಕಂಗೊಳಿಸಬಹುದು" ಎಂದು ಇತಿಹಾಸ ತಜ್ಞ ಡಾ.ಉಮಾನಾಥ ಶೆಣೈ ವೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಸನ ಅಧ್ಯಯನದ ಸಮಯದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸ ಸುಬ್ರಹ್ಮಣ್ಯ ಬಾಳ್ತಿಲ್ಲಾಯ, ಅರ್ಚಕ ಎನ್.ಕೆ.ಅನಂತಪದ್ಮನಾಭ ನೂಜಿನ್ನಾಯ, ಪತ್ರಕರ್ತ ಸುಧೀರ್ ಕುಮಾರ್, ಭಜಕರಾದ ಸತೀಶ್ ಕೆ.ಎನ್, ಅನುದೀಪ ಬಾಳ್ತಿಲ್ಲಾಯ, ರವಿ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಗೋವಾದ ಬ್ರಾಹ್ಮಿ ಶಾಸನದಲ್ಲಿ ಹೊಸ ರಾಜಮನೆತನ ಬೆಳಕಿಗೆ: ಮಂಗಳೂರಿನ ನಿವೃತ್ತ ಪ್ರೊಫೆಸರ್​ ಮಾಹಿತಿ - Haihaya dynasty ruled Goa

ETV Bharat Logo

Copyright © 2025 Ushodaya Enterprises Pvt. Ltd., All Rights Reserved.