ETV Bharat / state

ಬೆಂಗಳೂರಿನಲ್ಲಿ ಮಾನವ ಕಳ್ಳ ಸಾಗಣೆ ಆರೋಪ: ಎನ್​​ಸಿಪಿಸಿಆರ್​​ ಅಧಿಕಾರಿಗಳ ದಾಳಿ - 20 ಬಾಲಕಿಯರ ರಕ್ಷಣೆ - 20 girls found during raid by ncpcr

ಮಾನವ ಕಳ್ಳ ಸಾಗಣೆ ಆರೋಪ ಹಿನ್ನೆಲೆ ಎನ್​​ಸಿಪಿಸಿಆರ್ ಅಧ್ಯಕ್ಷ ಮತ್ತು ಸಿಬ್ಬಂದಿ ಧಾರ್ಮಿಕ ಶಿಕ್ಷಣ ಕೇಂದ್ರವೊಂದರ ಮೇಲೆ ದಾಳಿ ನಡೆಸಿ, 20 ಬಾಲಕಿಯರನ್ನು ರಕ್ಷಿಸಿದ್ದಾರೆ.

alleged-human-trafficking-in-bengaluru-20-girls-found-during-raid-by-ncpcr-officials
ಬೆಂಗಳೂರಿನಲ್ಲಿ ಮಾನವ ಕಳ್ಳ ಸಾಗಣೆ ಆರೋಪ: ಮದರಸಗಳ ಮೇಲೆ ಎನ್​​ಸಿಪಿಸಿಆರ್​​ ಅಧಿಕಾರಿಗಳ ದಾಳಿ - 20 ಬಾಲಕಿಯರು ಪತ್ತೆ
author img

By ETV Bharat Karnataka Team

Published : Mar 15, 2024, 10:43 PM IST

ಬೆಂಗಳೂರು: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ನೇತೃತ್ವದ ತಂಡ ನಗರದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ, 20 ಬಾಲಕಿಯರನ್ನು ರಕ್ಷಣೆ ಮಾಡಿದೆ. ನಗರದಲ್ಲಿ ಮಾನವ ಕಳ್ಳ ಸಾಗಾಣಿಕೆ ಆರೋಪ ಕೇಳಿಬಂದ ಸಂಬಂಧ ಈ ದಾಳಿ ನಡೆದಿದೆ.

ಪತ್ತೆಯಾದ ಬಾಲಕಿಯರನ್ನು ಗಲ್ಫ್ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ದಕ್ಷಿಣ ಭಾರತದಲ್ಲಿ ಈ ರೀತಿಯ ಪ್ರಕರಣಗಳು ಈಗಾಗಲೇ ವರದಿಯಾಗುತ್ತಲೇ ಇವೆ. ಹಾಗಾಗಿ ಎನ್‌ಸಿಪಿಸಿಆರ್‌ನಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ಎನ್‌ಸಿಪಿಸಿಆರ್ ದೂರನ್ನು ಆಧರಿಸಿ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಸ್ಥಳದಲ್ಲಿ ಸುಮಾರು 10 ರಿಂದ 20 ಮಕ್ಕಳಿದ್ದಾರೆ. ಅವರಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ, ಅಲ್ಲದೇ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಈ ಶಿಕ್ಷಣ ಕೇಂದ್ರ ನಡೆಸಲು ಯಾವುದೇ ಪರವಾನಗಿ ಪಡೆದಿಲ್ಲ ಎಂದು ಪ್ರಿಯಾಂಕ್ ಕಂಗೂನ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಟೂರಿಸ್ಟ್​ ವೀಸಾದಡಿ ಬಂದಿದ್ದ ವಿದೇಶಿ ಮಹಿಳೆ ಹೋಟೆಲ್​ನಲ್ಲಿ ಶವವಾಗಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.