ETV Bharat / state

ದೇಶದಲ್ಲಿರುವ ಎಲ್ಲಾ ಭ್ರಷ್ಟರು ಬಿಜೆಪಿಯಲ್ಲಿದ್ದಾರೆ: ಸಚಿವ ರಾಮಲಿಂಗಾ ರೆಡ್ಡಿ - Ramalinga Reddy - RAMALINGA REDDY

ಲೋಕಸಭಾ ಚುನಾವಣೆಯ ಪ್ರಚಾರ ಭರಾಟೆ ಜೋರಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ವಿರುದ್ಧ ಟೀಕಾಸಮರ ನಡೆಸಿದ್ದಾರೆ.

CORRUPT PEOPLE  BJP PARTY  RAMALINGA REDDY ALLEGES  BAGALKOT
ಸಚಿವ ರಾಮಲಿಂಗಾ ರೆಡ್ಡಿ
author img

By ETV Bharat Karnataka Team

Published : Apr 30, 2024, 6:59 PM IST

ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ

ಬಾಗಲಕೋಟೆ: ದೇಶದಲ್ಲಿರುವ ಎಲ್ಲಾ ಭ್ರಷ್ಟರು ಬಿಜೆಪಿಯಲ್ಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ವಾಗ್ದಾಳಿ ನಡೆಸಿದರು. ವಿದ್ಯಾಗಿರಿಯಲ್ಲಿ ಇಂದು ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನಕ್ಕೆ ಭೇಟಿ ನೀಡಿದ ವೇಳೆ 'ಈಟಿವಿ ಭಾರತ'ದೊಂದಿಗೆ ಅವರು ಮಾತನಾಡಿದರು.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ಭ್ರಷ್ಟಾಚಾರ ಗಂಗೋತ್ರಿಯೇ ಬಿಜೆಪಿ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ರೂ ಬರಗಾಲದ ಪರಿಹಾರ ಧನ ಕೇಳಿದರೆ ಕೇವಲ 3,454 ಕೋಟಿ ನೀಡಿದ್ದಾರೆ. ಅದೂ ಕೂಡಾ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆ ನೀಡಿದ್ದಾರೆ. ಬಿಜೆಪಿಯವರಿಗೆ ರಾಜ್ಯದ ರೈತರ ಬಗ್ಗೆ ಇರುವ ಅಸಡ್ಡೆ ಇದರಲ್ಲಿ ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: ನಾವು ಸರ್ಕಾರಿ ನೌಕರರ ಸಂಬಳ ನಿಲ್ಲಿಸಿಲ್ಲ, ಹತಾಶೆಯಿಂದ ಮೋದಿ ಭಯಾನಕ ಸುಳ್ಳು: ಸಿಎಂ ಸಿದ್ದರಾಮಯ್ಯ - Siddaramaiah Campaign

ETV Bharat Logo

Copyright © 2025 Ushodaya Enterprises Pvt. Ltd., All Rights Reserved.