ETV Bharat / state

ಮಲಿನವಾದ ಹೆಸರಘಟ್ಟ ಕೆರೆ, ವಿಷಕಾರಿ ನೀರು ಬೆಂಗಳೂರಿನ ಜನರಿಗೆ ಕೊಡುವುದಿಲ್ಲ ಎಂದ ಹೋರಾಟಗಾರರು - Hesaraghatta Lake

ದೊಡ್ಡಬಳ್ಳಾಪುರ ನಗರದ ಚರಂಡಿ ನೀರು ಹೆಸರಘಟ್ಟ ಕೆರೆಗೆ ಹರಿದು ಹೋಗುತ್ತಿದ್ದು, ಇದೇ ವಿಷಕಾರಿ ನೀರನ್ನು ಬೆಂಗಳೂರಿನ ಜನರಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ದೂರಲಾಗಿದೆ.

BENGALURU PEOPLE  POISONOUS WATER  BENGALURU
ಹೆಸರಘಟ್ಟ ಕೆರೆ ಸುತ್ತ ಸ್ವಚ್ಛತೆಯ ಕೆಲಸ (ETV Bharat)
author img

By ETV Bharat Karnataka Team

Published : May 26, 2024, 2:11 PM IST

ಮಲಿನವಾದ ಹೆಸರಘಟ್ಟ ಕೆರೆ (ETV Bharat)

ಬೆಂಗಳೂರು: ಕಾವೇರಿ ನದಿಯ ಉಪನದಿ ಅರ್ಕಾವತಿ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಪ್ರಮುಖ ನದಿಯಾಗಿರುವ ಅರ್ಕಾವತಿ ಈಗ ವಿಷವಾಗಿ ಮಾರ್ಪಡುತ್ತಿದೆ. ದೊಡ್ಡಬಳ್ಳಾಪುರ ನಗರದ ಚರಂಡಿ ನೀರು ಮತ್ತು ಸುತ್ತಮುತ್ತಲಿನ ಕೈಗಾರಿಕಾ ತ್ಯಾಜ್ಯದ ನೀರು ಹೆಸರಘಟ್ಟ ಕೆರೆಯೊಡಲು ಸೇರುತ್ತಿದೆ. ಇದೇ ಹೆಸರಘಟ್ಟ ಕೆರೆ ನೀರು ಬೆಂಗಳೂರಿನ ಜನರಿಗೆ ಪೂರೈಕೆಯಾಗುತ್ತಿರುವ ವಿಚಾರ ಹರಿದಾಡುತ್ತಿದ್ದು, ರೈತ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ‌ಹೆಸರಘಟ್ಟ‌ ಕೆರೆ ಸಾವಿರಾರು ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಕೆರೆ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ದಾಹ ತಣಿಸಲು 1890ರಲ್ಲಿ ಜೀರ್ಣೋದ್ಧಾರ ಮಾಡಿ ಮೈಸೂರಿನ ದಿವಾನರು ಬಳಸಿಕೊಳ್ಳುತ್ತಿದ್ದರು. ಇದು 1960-70ರ ದಶಕದಲ್ಲಿ ಬೆಂಗಳೂರಿನ 10 ಲಕ್ಷ ಜನರ ಕುಡಿಯುವ ನೀರಿನ‌ ಮೂಲವಾಗಿತ್ತು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ ತಿಳಿಸಿದರು.

ಹೆಸರಘಟ್ಟ ಕೆರೆಯನ್ನು ನಾವು ಖಾಲಿ ಮಾಡುತ್ತೇವೆ. ಬೆಂಗಳೂರಿಗೆ ನೀರು ಕೊಡುತ್ತೇವೆ ಎಂದು ಘೋಷಣೆಯಾಯ್ತು. ಇಲ್ಲಿನ ಜನರಿಗೆ ಭಯವಾಯ್ತು. ಇಂದಿನ ದಿನಗಳಲ್ಲಿ ಕುಡಿಯಲು ಜನರಿಗೆ ಮಾತ್ರವಲ್ಲ ಪಕ್ಷಿಗಳಿಗೂ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ನೀರನ್ನು ಬೇರೆ ಕಡೆ ತೆಗೆದುಕೊಂಡು ಹೋಗುತ್ತಾರಲ್ಲ, ಮುಂದೆ ಹೆಂಗೆ ಅಂತಾ ನಾನು ಪರಿಶೀಲನೆಗೆ ಬಂದೆ. ಆದ್ರೆ ಇಲ್ಲಿ ಬಂದು ನೋಡಿದಾಗ ಈ ನೀರು ಸಹ ವಿಷವಾಗಿ ಮಾರ್ಪಡುತ್ತಿರುವುದು ಗೊತ್ತಾಯಿತು. ಏಕೆಂದರೆ ಕೆರೆ ಸುತ್ತಮುತ್ತಲಿನ ನಗರಗಳಲ್ಲಿರುವ ಕಾರ್ಖನೆ ತ್ಯಾಜ್ಯದ ನೀರು ಮತ್ತು ಚರಂಡಿ ನೀರು ಕೆರೆ ಸೇರುತ್ತಿದೆ. ಈ ವಿಷಕಾರಿ ನೀರನ್ನು ಬೆಂಗಳೂರಿನ ಜನರಿಗೆ ಕುಡಿಸಲು ಹೋಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ನಾಚಿಕೆ ಆಗಬೇಕು ಎಂದು ಅವರು ಹರಿಹಾಯ್ದರು.

ಕೆರೆ ಸುತ್ತಮುತ್ತಲಿನ ಪ್ರದೇಶ ತ್ಯಾಜ್ಯದಿಂದ ತುಂಬಿತ್ತು. ಯಾವುದೇ ರಾಜಕಾರಣಿಗಳು ಬಂದು ಇಲ್ಲಿ ಸ್ವಚ್ಛಗೊಳಿಸಲಿಲ್ಲ. ನಮ್ಮ ಹೋರಾಟಗಾರರು ಈ ಸ್ಥಳವನ್ನು ಸ್ವಚ್ಛ​ ಮಾಡಿದ್ದಾರೆ. ನಾವು ಬೆಂಗಳೂರಿಗೆ ನೀರು ಕೊಡಲು ಸಿದ್ಧರಿದ್ದೇವೆ. ಆದ್ರೆ ನಮ್ಮ ಬೆಂಗಳೂರು ಜನ ಸ್ವಚ್ಛತೆ ನೀರು ಕುಡಿಯಬೇಕು. ಹೀಗಾಗಿ ಎಲ್ಲ ಶಾಸಕರು ಕೆರೆ ನೀರು ಉಳಿಸಿ. ಈ ಕೆರೆಗೆ ಹೇಮಾವತಿ ಮತ್ತು ಕೆಆರ್​ಎಸ್​ ನೀರನ್ನು ಡಂಪ್​ ಮಾಡಿ. ಈ ಕೆರೆಯಲ್ಲಿ ನೀರನ್ನು ಸಂಗ್ರಹ ಮಾಡಿಕೊಳ್ಳಿ. ಇಲ್ಲಿಂದ ನೇರ ಇಡೀ ಬೆಂಗಳೂರಿಗೆ ನೀರು ಕೊಡಿ. ಹೋರಾಟಗಾರರು ನಾವೆಲ್ಲರೂ ಸಂತೋಷಪಡುತ್ತೇವೆ ಎಂದು ಮಂಜೇಗೌಡ ಆಗ್ರಹಿಸಿದರು.

ಈಗ ಈ ಕೆರೆ ಬೆಂಗಳೂರು ಜನರ ಅಚ್ಚುಮೆಚ್ಚಿನ ವಾಕಿಂಗ್ ಮತ್ತು ಪ್ರವಾಸಿಗರ ತಾಣವಾಗಿ‌ ಮಾರ್ಪಟ್ಟಿದೆ. ನಮ್ಮ ಜನರಿಗೆ ಪರಿಸರದ ಮೇಲೆ ಕಾಳಜಿ ಕಡಿಮೆಯಾಗಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕುಡಿದು ಬಿಸಾಕಿರುವ ಮದ್ಯದ ಬಾಟಲ್​ಗಳು ಸೇರಿದಂತೆ ಇತರೆ ತ್ಯಾಜ್ಯದಿಂದ ಕೆರೆ ಪರಿಸರ ನಾಶವಾಗುತ್ತಿದೆ. ಇದನ್ನು ಗಮನಿಸಿದ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಲಮಂಡಳಿ ಅಧಿಕಾರಿಗಳ ಜೊತೆ ಸೇರಿ ಕಳೆದ ಒಂದು ವಾರದಿಂದ ಕೆರೆ ಪರಿಸರ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಮೂರು ಲೋಡ್ ಮದ್ಯದ ಬಾಟಲ್ ಮತ್ತು ಪ್ಲಾಸ್ಟಿಕ್ ಸಂಗ್ರಹಿಸಿ ಹೊರಹಾಕಿದ್ದಾರೆ. ಯಾವಾಗ ರೈತಸಂಘ ಸ್ವಚ್ಛತಾ ಅಭಿಯಾನ ಪ್ರಾರಂಭಿಸಿತೋ ಬೆಂಗಳೂರು ಜಲಮಂಡಳಿ ಸಹ ಕೈಜೋಡಿಸಿ ಗಿಡಗಂಟೆಗಳನ್ನು ತೆರವುಗೊಳಿಸಿ ಮೂರ್ನಾಲ್ಕು ಎಕರೆ ಪ್ರದೇಶದಲ್ಲಿ ಸಾವಿರಾರು ಗಿಡನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಿದೆ.

ಬೆಂಗಳೂರು ಜಲಮಂಡಳಿಯ ಮುಖ್ಯ ಇಂಜಿನಿಯರ್ ಹೇಳಿಕೆ: ಹೆಸರಘಟ್ಟ ಕೆರೆ ಸುತ್ತಮುತ್ತ ಪರಿಸರ ಸಂರಕ್ಷಣೆ ಮಾಡಬೇಕೆಂದು ರೈತ ಪರ ಹೋರಾಟಗಾರರು ಮನವಿ ಮಾಡಿಕೊಂಡಿದ್ದರು. ಇದಕ್ಕಾಗಿ ಪರಿಸರ ರಕ್ಷಣೆ ಆಂದೋಲನ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಹೇಳಿದ್ದರು. ಆ ನಿಟ್ಟಿನಲ್ಲಿ ನಾವು ಇಲ್ಲಿಗೆ ಬಂದು ಕೆರೆಯ ಸುತ್ತಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿದ್ದೇವೆ. ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ರೈತ ಪರ ಹೋರಾಟಗಾರರು ಕೈ ಜೋಡಿಸಿದ್ದಾರೆ. ಅವರೆಲ್ಲರಿಗೂ ಬೆಂಗಳೂರ ಜಲಮಂಡಳಿಯ ವತಿಯಿಂದ ಧನ್ಯವಾದ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಇಲ್ಲಿ ಸಾವಿರಾರು ಗಿಡಗಳನ್ನು ನೆಡುತ್ತೇವೆ ಎಂದು ಬೆಂಗಳೂರು ಜಲಮಂಡಳಿಯ ಮುಖ್ಯ ಇಂಜಿನಿಯರ್ ರಾಜಶೇಖರ್ ಹೇಳಿದರು.

ವರ್ಷಕ್ಕೆ ಒಂದ್ಸಲ ಅಥವಾ ಎರಡ್ಸಲ ಇತ್ತ ಮುಖ ಮಾಡುವ ಅಧಿಕಾರಿಗಳು ಹೆಸರಘಟ್ಟ ಕೆರೆ ಪರಿಸರ ಸಂರಕ್ಷಣೆಗೆ ಇನ್ನಷ್ಟು ಮನಸ್ಸು ಮಾಡಬೇಕಿದೆ. ಪರಿಸರ ಸಂರಕ್ಷಣೆಯನ್ನು ರೈತರು ಮತ್ತು ರೈತಸಂಘ ಮತ್ತು ಯಾವುದೋ ಸಂಘ ಸಂಸ್ಥೆಗಳೇ ಮಾಡಬೇಕೆಂದಿಲ್ಲ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ಪ್ರತಿಯೊಬ್ಬ ಬೆಂಗಳೂರಿನ ‌ನಾಗರಿಕ ಪರಿಸರದ ಬಗ್ಗೆ ಗಮನಹರಿಸಬೇಕು. ಇದು ನಮ್ಮ ಊರು, ಇದು ನಮ್ಮ ಕೆರೆ ಎಂಬ ಕಾಳಜಿ‌ ಬಂದಾಗ ನಮ್ಮ ಸುತ್ತಮುತ್ತಲ ಪರಿಸರ ಚೆನ್ನಾಗಿರುತ್ತದೆ. ಆಗ ನಮ್ಮ ಜನ ಪ್ರಾಣಿಪಕ್ಷಿಗಳ ಜೊತೆ ನೆಮ್ಮದಿಯ‌ ಜೀವನ ನಡೆಸುತ್ತಾರೆ ಎಂಬುದು ಹೋರಾಟಗಾರರ ಅಂಬೋಣ.

ಇಗನ್ನೂ ಓದಿ: 902 ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಡಿಸಿದ ಕೆಪಿಟಿಸಿಎಲ್‌ - KPTCL Appointment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.