ETV Bharat / state

ಸೈಬರ್​​ ವಂಚನೆ: 1.60 ಕೋಟಿ ರೂ ಕಳೆದುಕೊಂಡ ಮಂಗಳೂರಿನ ವ್ಯಕ್ತಿ - Cyber fraud - CYBER FRAUD

ಹಿರಿಯ ವ್ಯಕ್ತಿಯೊಬ್ಬರು ಸೈಬರ್​​​ ವಂಚಕರ ಜಾಲಕ್ಕೆ ಬಿದ್ದು 1.60ಕೋಟಿ ರೂ. ಕಳೆದುಕೊಂಡಿದ್ದಾರೆ.

ಮಂಗಳೂರಿನಲ್ಲಿ ಸೈಬರ್​​ ವಂಚನೆ
ಮಂಗಳೂರಿನಲ್ಲಿ ಸೈಬರ್​​ ವಂಚನೆ (ETV Bharat)
author img

By ETV Bharat Karnataka Team

Published : May 10, 2024, 11:05 AM IST

ಮಂಗಳೂರು: ನಗರದ 72 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಸೈಬರ್​​​ ವಂಚಕರ ಜಾಲಕ್ಕೆ ಬಿದ್ದು, 1.60 ಕೋಟಿ ರೂ. ಕಳೆದುಕೊಂಡಿದ್ದಾರೆ. ತಮ್ಮ ಹೆಸರಲ್ಲಿ ಥಾಯ್ಲೆಂಡಿಗೆ ಕಳುಹಿಸಲಾಗಿರುವ ಪಾರ್ಸೆಲ್​ನಲ್ಲಿ ಡ್ರಗ್ಸ್ ಇದೆಯೆಂದು ಹೇಳಿ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಸೋಗಿನಲ್ಲಿ ಫೋನ್ ಮಾಡಿ ಬೆದರಿಸಿದ್ದಲ್ಲದೆ, ಕೋಟಿ ಮೊತ್ತದ ಹಣ ವಂಚನೆಗೈದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಅಪರಿಚಿತನೊಬ್ಬ ಇವರಿಗೆ ಕರೆ ಮಾಡಿ, ತನ್ನ ಹೆಸರನ್ನು ರಾಜೇಶ್​​​​ ಕುಮಾ‌ರ್​​ ಎಂದು ಪರಿಚಯಿಸಿದ್ದಾನೆ. ತಾವು ಮುಂಬೈನಿಂದ ಥಾಯ್ಲೆಂಡ್​​​ ದೇಶಕ್ಕೆ ಕಳುಹಿಸಿರುವ ಪಾರ್ಸೆಲ್​ನ್ನು ಅಲ್ಲಿನ ಕಸ್ಟಮ್ಸ್​​ನವರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪಾರ್ಸೆಲ್​ನಲ್ಲಿ ಕೆಲವು ಅಕ್ರಮ, ನಿಷಿದ್ಧ ವಸ್ತುಗಳು ಇರುವುದಾಗಿ ಹೇಳಿದ್ದು, ಈ ಬಗ್ಗೆ ಮುಂಬೈ ಕ್ರೈಮ್ ಬ್ರಾಂಚ್​ನಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ನಿಮಗೆ ಹೆಚ್ಚುವರಿ ಮಾಹಿತಿಯನ್ನು ಸಿಬಿಐ ಅಧಿಕಾರಿ ರುದ್ರ ರಾಥೋಡ್​ ನೀಡುತ್ತಾರೆ ಎಂದಿದ್ದಾನೆ.

ಅದೇ ದಿನ ರುದ್ರ ರಾಥೋಡ್ ಎಂದು ತನ್ನನ್ನು ಪರಿಚಯಿಸಿದ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಪ್ರಕರಣದಲ್ಲಿ ನೀವು ನಮಗೆ ಸಹಕರಿಸದೆ ಇದ್ದಲ್ಲಿ ವಿದೇಶದಲ್ಲಿರುವ ಇಂಟರ್ಪೊಲ್ ಮೂಲಕ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸಬೇಕಾಗುತ್ತದೆ ಎಂದು ಭಯ ಹುಟ್ಟಿಸಿದ್ದಾನೆ. ಬಳಿಕ Skype ಆ್ಯಪ್ ಮೂಲಕ ಖಾತೆ ತೆರೆಯುವಂತೆ ಒತ್ತಾಯಪಡಿಸಿ ಬಂಧನದಿಂದ ತಪ್ಪಿಸಿಕೊಳ್ಳಬೇಕಿದ್ದರೆ ಬಾಂಡ್ ರೂಪದಲ್ಲಿ ಹಣವನ್ನು ಪಾವತಿ ಮಾಡಲೇಬೇಕು ಎಂದು ಒತ್ತಾಯಿಸಿದ್ದಾನೆ.

ಇದರಿಂದಾಗಿ ತಮ್ಮ ಐಸಿಐಸಿಐ ಬ್ಯಾಂಕ್​ ಖಾತೆಯಿಂದ ಮೇ 2 ರಂದು 1.10 ಕೋಟಿ ರೂಪಾಯಿ ಪಾವತಿಸಿದ್ದಾರೆ. ಬಳಿಕ, ಮೇ 6 ರಂದು ಕ್ರೈಂ ಬ್ರಾಂಚ್​​ ಕಡೆಯಿಂದ ಫೋನ್​ ಮಾಡಿದ್ದಕ್ಕಾಗಿ ಮತ್ತೆ 50 ಲಕ್ಷ ರೂಪಾಯಿ ಮೊತ್ತವನ್ನು ಅವರು ಹೇಳಿದ ಖಾತೆಗೆ ಪಾವತಿ ಮಾಡಿದ್ದಾರೆ. ಬಳಿಕ ತಾವು ಮೋಸ ಹೋಗಿರುವುದು ತಿಳಿದು ಸೆನ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದುಪ್ಪಟ್ಟು ಹಣದ ಹೆಸರಲ್ಲಿ ಮಹಿಳೆಗೆ ₹2.66 ಕೋಟಿ ಮೋಸ: ಸೈಬರ್ ವಂಚಕರಿಂದ ₹2.20 ಕೋಟಿ ರಿಕವರಿ! - Cyber Crime

ETV Bharat Logo

Copyright © 2025 Ushodaya Enterprises Pvt. Ltd., All Rights Reserved.