ಹಾಸನ: ಗಾಳಿ ಮಳೆ ಮಠದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾಗಿರುವ ಘಟನೆ ಇಂದು ಬೆಳಗ್ಗೆ ಸಂಗಮೇಶ್ವರ ಬಡಾವಣೆಯಲ್ಲಿರುವ ಜವೇನಹಳ್ಳಿ ಮಠದಲ್ಲಿ ನಡೆದಿದೆ. ಬೃಹತ್ ಮರ ಬಿದ್ದ ಪರಿಣಾಮ ಮಠದ ಗೋಡೆಯ ಕಲ್ಲುಗಳಲ್ಲಿ ಬಿರುಕು ಬಿಟ್ಟಿದೆ. ಜವೇನಹಳ್ಳಿ ಮಠದೊಳಗಿರುವ ಈಶ್ವರ ದೇವಾಲಯವಿದ್ದು, ಮಠದಲ್ಲಿ ಯಾರೂ ಇಲ್ಲದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಹಳೆಯ ಮಠ ಮತ್ತು ಮಳೆಗಾದಲ್ಲಿ ಸೋರುತ್ತಿದ್ದರಿಂದ ಮಠದ ಪೀಠಾಧ್ಯಕ್ಷರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಬೇರೆಡೆ ತಂಗುತ್ತಿದ್ದರು. 700 ವರ್ಷ ಹಳೆಯದಾದ ಜವೇನಹಳ್ಳಿ ಮಠಕ್ಕೆ ತನ್ನದೇ ಆದ ಇತಿಹಾಸವಿದ್ದು, ಕೂಡಲೇ ಮಠ ದುರಸ್ತಿ ಮಾಡುವಂತೆ ಭಕ್ತಾಧಿಗಳು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ನೇಪಾಳ ಕಠ್ಮಂಡು ಏರ್ಪೋರ್ಟ್‌ನಲ್ಲಿ ವಿಮಾನ ಪತನ; 18 ಮಂದಿ ಸಾವು, ಪೈಲಟ್ ಬಚಾವ್ - Nepal Plane Crash