ETV Bharat / state

ಬೆಂಗಳೂರು: ಕುಡಿದ ಆಮಲಿನಲ್ಲಿ ಕಟ್ಟಡದಿಂದ ತಳ್ಳಿ ಸ್ನೇಹಿತನ ಕೊಲೆ - bengaluru crime

ಇಬ್ಬರ ಗೆಳೆಯರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಯುವಕನೊಬ್ಬ ಕುಡಿದ ಆಮಲಿನಲ್ಲಿ ಕಟ್ಟಡದಿಂದ ತಳ್ಳಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕೊಲೆಗೀಡಾದ ಯುವಕ
ಕೊಲೆಗೀಡಾದ ಯುವಕ (ETV Bharat)
author img

By ETV Bharat Karnataka Team

Published : Jun 29, 2024, 5:24 PM IST

ಬೆಂಗಳೂರು: ಮದ್ಯ ಸೇವಿಸಿ ಪಾರ್ಟಿ ಮಾಡುವಾಗ ಇಬ್ಬರು ಗೆಳೆಯರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಆಮಲಿನಲ್ಲಿ ಕಟ್ಟಡದಿಂದ ತಳ್ಳಿ ಸ್ನೇಹಿತನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ವಿಶಾಲ್ ಯಾದವ್ (25) ಕೊಲೆಯಾಗಿದ್ದು, ಸ್ನೇಹಿತ ಅಭಿಷೇಕ್ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಉತ್ತರ ಪ್ರದೇಶದ ಮೂಲದವರಾಗಿದ್ದು, ಕೆಲ ತಿಂಗಳಿಂದ ಅಂಜನಾನಗರದಲ್ಲಿ ನೆಲೆಸಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಇದೇ‌ ಕಟ್ಟಡದ ಎರಡನೇ‌ ಮಹಡಿಯಲ್ಲಿ ನಿನ್ನೆ ರಾತ್ರಿ ಇಬ್ಬರು ಮದ್ಯ ಸೇವಿಸಿದ್ದರು. ಹೀಗೆ ಮಾತನಾಡುವಾಗ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿತ್ತು. ನೋಡ ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿ ವಿಶಾಲ್ ಯಾದವ್ ನನ್ನು ಕುಡಿದ ಆಮಲಿನಲ್ಲಿದ್ದ ಅಭಿಷೇಕ್ ಕಟ್ಟಡದ ಮೇಲಿಂದ ತಳ್ಳಿದ್ದಾನೆ.

ಕೆಳಗೆ ಬಿದ್ದ ವಿಶಾಲ್ ಯಾದವ್​ಗೆ ತೀವ್ರ ರಕ್ರಸ್ರಾವವಾಗಿದೆ. ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ಸ್ಟೈಲ್​​​​ನಲ್ಲಿ ಪರಾರಿಗೆ ಯತ್ನಿಸಿದ ದರೋಡೆಕೋರರು: 3 ಆರೋಪಿಗಳು ಸೆರೆ, ಪೊಲೀಸರು ಸೇರಿ ಐವರಿಗೆ ಗಾಯ - Attack on Police

ETV Bharat Logo

Copyright © 2024 Ushodaya Enterprises Pvt. Ltd., All Rights Reserved.