ETV Bharat / state

ವಿಜಯಪುರ: ಮನನೊಂದ ವೃದ್ಧ ಆತ್ಮಹತ್ಯೆಗೆ ಶರಣು - OLD MAN SUICIDE - OLD MAN SUICIDE

ವೃದ್ಧನೊಬ್ಬ ಹಿಪ್ಪರಗಿ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೂವಿನ ಹಿಪ್ಪರಗಿ ಬಸ್‌ ನಿಲ್ದಾಣ
ಹೂವಿನ ಹಿಪ್ಪರಗಿ ಬಸ್‌ ನಿಲ್ದಾಣ
author img

By ETV Bharat Karnataka Team

Published : Apr 3, 2024, 4:53 PM IST

ವಿಜಯಪುರ: ಮನನೊಂದ ವೃದ್ಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಹೂವಿನ ಹಿಪ್ಪರಗಿ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಸುಕಿನ ಜಾವ ಈ ಘಟನೆ ನಡೆದಿದ್ದು, ಮೃತನನ್ನು ಹುಣಶ್ಯಾಳ ಗ್ರಾಮದ 76 ವರ್ಷದ ಭೀಮಪ್ಪ ಗಿರಿಯಪ್ಪ ಡೊಣೂರ (ಹಳ್ಳಿ) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ 17 ಕುರಿಗಳು ಸಾವನ್ನಪ್ಪಿರುವ ಘಟನೆ ಸಿಂದಗಿ ತಾಲೂಕಿನ ಡಂಬಳ ತಾಂಡಾದ ತೋಟದಲ್ಲಿ ನಡೆದಿದೆ. ತಾಂಡಾದ ನಿವಾಸಿ ಕಾಂತವ್ವ ರಾಠೋಡ ಎಂಬುವರಿಗೆ ಸೇರಿದ ಕುರಿಗಳು ಇವಾಗಿವೆ. ಇವುಗಳ ಸಾಕಾಣಿಕೆಯನ್ನೇ ನಂಬಿ ನಾವು ಬದುಕು ಸಾಗಿಸುತ್ತಿದ್ದು, ಸೂಕ್ತ ಪರಿಹಾರ ಒದಗಿಸಬೇಕೆಂದು ಕಾಂತವ್ವ ಕುಟುಂಬ ಮನವಿ ಮಾಡಿದೆ. ಈ ಹಿನ್ನೆಲೆ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಜಮೀನಿನ ದಾಖಲೆಗಳು ಬೇರೆಯವರ ಹೆಸರಿಗೆ ಬದಲಾವಣೆ: ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು - Three People Commit Suicide

ETV Bharat Logo

Copyright © 2025 Ushodaya Enterprises Pvt. Ltd., All Rights Reserved.