ETV Bharat / state

ಮೈಸೂರು: 99 ಆಕರ್ಷಕ ಮತಗಟ್ಟೆಗಳ ನಿರ್ಮಾಣ - Special Polling Booths

ಮೈಸೂರು ಜಿಲ್ಲೆಯಲ್ಲಿ ಈ ಬಾರಿ 99 ಮತಗಟ್ಟೆಗಳು ಮತದಾರರನ್ನು ವಿಶೇಷವಾಗಿ ಆಕರ್ಷಿಸಲಿವೆ.

polling booth
ಮತಗಟ್ಟೆ
author img

By ETV Bharat Karnataka Team

Published : Apr 24, 2024, 9:31 PM IST

ಮೈಸೂರು: ಯುವ, ಸಖಿ, ವಿಶೇಷಚೇತನ, ಮಾದರಿ ಹಾಗೂ ವಿಷಯಾಧಾರಿತ ಮತಗಟ್ಟೆಗಳು ಈ ಬಾರಿ ಮತದಾರರನ್ನು ಕೈ ಬೀಸಿ ಕರೆಯಲಿವೆ. ಜಿಲ್ಲಾ ಸ್ವೀಪ್ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ 55 ಸಖಿ ಬೂತ್, 11 ವಿಶೇಷಚೇತನರ ಮತಗಟ್ಟೆ, 11 ಯುವ ಮತಗಟ್ಟೆ, 12 ಸಾಂಪ್ರದಾಯಿಕ ಮತಗಟ್ಟೆ ಮತ್ತು 10 ಮಾದರಿ ಮತಗಟ್ಟೆಗಳನ್ನು ರೂಪಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಆಕರ್ಷಕವಾಗಿ ಸಿದ್ಧಗೊಳಿಸಲಾಗುತ್ತಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಮತಗಟ್ಟೆಗಳು, ವಿಶೇಷಚೇತನ ಮತದಾರರ ಸಂಖ್ಯೆ ಹೆಚ್ಚಿರುವಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1 ವಿಶೇಷಚೇತನ ಮತಗಟ್ಟೆ, ಹೆಚ್ಚು ಯುವ ಮತದಾರರನ್ನು ಹೊಂದಿರುವಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಯುವ ಮತದಾರರ ಮತಗಟ್ಟೆ, ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಆಕರ್ಷಕವಾಗಿರುವ 1 ವಿಷಯಾಧಾರಿತ ಮತಗಟ್ಟೆ ಹಾಗೂ ಗಿರಿಜನ ಮತದಾರರ ಸಂಖ್ಯೆ ಹೆಚ್ಚಿರುವ ಹುಣಸೂರು 4, ಪಿರಿಯಾಪಟ್ಟಣ ಮತ್ತು ಹೆಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ತಲಾ 3ರಂತೆ ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

sakhi polling booth
ಸಖಿ ಮತಗಟ್ಟೆ

ಬ್ರೈಲ್ ಲಿಪಿಯಲ್ಲಿ ಮಾದರಿ ಮತಪತ್ರ: ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕು ಚಲಾಯಿಸಲು ಚುನಾವಣಾ ಆಯೋಗ ರ್ಯಾಂಪ್ ವ್ಯವಸ್ಥೆ, ವೀಲ್ ಚೇರ್, ಸಹಾಯಕರ ನಿಯೋಜನೆ, ಅಂಧ ಮತದಾರರಿಗೆ ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿರುವ ಮಾದರಿ ಮತಪತ್ರದ ಪ್ರದರ್ಶನ ಹಾಗೂ ಅದರ ವಿವರಣೆಯ ಆಡಿಯೋ ಮತಗಟ್ಟೆಗಳಲ್ಲಿ ಲಭ್ಯವಿರುತ್ತದೆ.

ಮ್ಯಾಗ್ನೈಟ್ ಲೆನ್ಸ್ ಬಳಸಿ ಮತದಾನ: ಭಾಗಶಃ ಅಂಧತ್ವ ಹೊಂದಿರುವ ಮತದಾರರಿಗೆ ಮ್ಯಾಗ್ನೈಟ್ ಲೆನ್ಸ್ ಬಳಸಿ ಮತದಾನ ಮಾಡುವ ಸೌಲಭ್ಯ ದೊರೆಯುತ್ತದೆ. ಕಿವುಡ ಮತ್ತು ಮೂಗ ಮತದಾರರಿಗೆ ಸಂಜ್ಞೆ ಭಾಷೆ ಬಳಸಿ ಮತದಾನ ಮಾಡುವ ವಿಧಾನದ ಬಗ್ಗೆ ಸಹಾಯಕರು ಲಭ್ಯವಿರುತ್ತಾರೆ.
ವಿಶೇಷಚೇತನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ 11 ಕ್ಷೇತ್ರಗಳಲ್ಲಿ 11 ವಿಶೇಷಚೇತನಸ್ನೇಹಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ವೀಲ್ ಚೇರ್, ಸನ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರಗಳನ್ನು ಬರೆದು ಮತಗಟ್ಟೆಯನ್ನು ಅಲಂಕರಿಸಲಾಗಿದೆ.

polling-booth
ವಿಶೇಷ ಮತಗಟ್ಟೆ

ಮತಗಟ್ಟೆಯಲ್ಲಿ ಸೆಲ್ಫಿ ಬೂತ್: ಪ್ರಜಾಪ್ರಭುತ್ವದ ಹಬ್ಬದಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ನವ ಯುವ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಆಕರ್ಷಣೀಯವಾಗಿ ನಿರ್ಮಿಸಿ, ಮತಗಟ್ಟೆಯಲ್ಲಿ ಸೆಲ್ಫಿ ಬೂತ್ ಸ್ಥಾಪಿಸಲಾಗಿದೆ. ಮೊದಲ ಬಾರಿಗೆ ಮತದಾನ ಮಾಡಲು ಆಗಮಿಸುವವರನ್ನು ವಿವಿಧ ರೀತಿಯಲ್ಲಿ ಸ್ವಾಗತಿಸಿ ಅವರ ಮೊದಲ ಅನುಭವವನ್ನು ಅವಿಸ್ಮರಣೀಯನ್ನವನ್ನಾಗಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಸಾಂಪ್ರದಾಯಿಕ ಮತಗಟ್ಟೆಗಳು: ಪಿರಿಯಾಪಟ್ಟಣದ ಮುತ್ತೂರು ಕಾಲೊನಿಯ ಸ.ಹಿ.ಪ್ರಾ.ಶಾಲೆ, ಅಬ್ಬಲತ್ತಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ ಮತ್ತು ರಾಣಿಗೇಟ್​ನ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಹುಣಸೂರಿನ ಶೆಟ್ಟಿಹಳ್ಳಿಯ ಗಿರಿಜನ ಎಡಿಎಲ್ ಆಶ್ರಮ ಶಾಲೆ, ನಾಗಪುರ ಆಶ್ರಮ ಶಾಲೆ, ಉಮತ್ತೂರು ಗಿರಿಜನ ಆಶ್ರಮ ಶಾಲೆ ಮತ್ತು ಸರ್ಕಾರಿ ಬಾಲಕಿಯರ ಜೂನಿರ್ಯ ಕಾಲೇಜು, ಹೆಚ್.ಡಿ.ಕೋಟೆಯ ಬಸವನಗಿರಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಪೆಂಜಹಳ್ಳಿ ಕಾಲೋನಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಭೀಮನಹಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳು ಜನಾಕರ್ಷಿಸಲಿವೆ. ಏ.26ರಂದು ತಪ್ಪದೇ ಮತದಾರರು ಮತದಾನ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶ ಸೇರಿ 171 ಸೂಕ್ಷ್ಮ ಮತಗಟ್ಟೆಗಳು - Lok Sabha election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.