ETV Bharat / state

ಮುಡಾದಲ್ಲಿ ನಿವೇಶನಕ್ಕಾಗಿ 85 ಸಾವಿರ ಜನ ಅರ್ಜಿ ಹಾಕಿ ಕಾಯುತ್ತಿದ್ದಾರೆ; ಶಾಸಕ ಶ್ರೀವತ್ಸ - MUDA Case

author img

By ETV Bharat Karnataka Team

Published : Aug 29, 2024, 7:41 PM IST

ಮುಡಾದಲ್ಲಿ ಕಾನೂನು ಉಲ್ಲಾಂಘನೆ ಮಾಡಿರುವ ಮತ್ತು ಬೇಕಾಬಿಟ್ಟಿ ನಿವೇಶನ ಹಂಚಿರುವ ನಿವೇಶನಗಳನ್ನು ಮತ್ತೆ ವಾಪಸ್‌ ಪಡೆದು ಬಡವರಿಗೆ ಹಂಚುವ ಗುರಿ ಹೊಂದಿದ್ದೇವೆ ಎಂದು ನಗರದ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ.

MUDA CASE
ಶಾಸಕ ಶ್ರೀವತ್ಸ (ETV Bharat)
ಬಿಜೆಪಿ ಶಾಸಕ ಶ್ರೀವತ್ಸ (ETV Bharat)

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 85 ಸಾವಿರ ಜನ ನಿವೇಶನಕ್ಕಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಆದರೆ, ಕಳೆದ 15 ವರ್ಷಗಳಿಂದ ಮುಡಾದಿಂದ ಯಾರೊಬ್ಬರಿಗೂ ಒಂದೇ ಒಂದು ಸೈಟ್‌ ನೀಡಿಲ್ಲ. ಆದರೆ, ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವುದರಲ್ಲಿ ಮುಡಾ ಮುಂದಿದೆ. ಆದ್ದರಿಂದ ಇಲ್ಲಿ ಆಗಿರುವ ಅವ್ಯವಹಾರಗಳ ಕುರಿತು ತನಿಖೆ ಮಾಡಿಸಬೇಕು. ಕಾನೂನು ಉಲ್ಲಾಂಘನೆ ಮಾಡಿರುವ ಮತ್ತು ಬೇಕಾಬಿಟ್ಟಿ ನಿವೇಶನ ಹಂಚಿರುವ ನಿವೇಶನಗಳನ್ನು ಮತ್ತೆ ವಾಪಸ್‌ ಪಡೆದು ಬಡವರಿಗೆ ಹಂಚುವ ಗುರಿ ಹೊಂದಿದ್ದೇವೆ ಎಂದು ನಗರದ ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ವಿವರಿಸಿದರು.

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಜನಸಾಮಾನ್ಯರಿಗೆ ಮುಡಾದಿಂದ ಒಂದೇ ಒಂದು ನಿವೇಶನ ನೀಡಿಲ್ಲ. ಸುಮಾರು 85 ಸಾವಿರ ಜನ ಮುಡಾ ನಿವೇಶನಕ್ಕಾಗಿ ಮೆರಿಟ್‌ ಮೇಲೆ ಅರ್ಜಿ ಹಾಕಿದ್ದಲ್ಲದೆ ಹಣ ಕಟ್ಟಿ ಕಾಯುತ್ತಿದ್ದಾರೆ. ಆದರೆ, ಯಾರಿಗೂ ಇಲ್ಲಿಯವರೆಗೂ ನಿವೇಶನ ನೀಡಲಾಗಿಲ್ಲ. ಈಗ ಮುಡಾ ರಿಯಲ್‌ ಎಸ್ಟೇಟ್‌ ತಾಣವಾಗಿದೆ. ಇದರಿಂದ ಯಾವುದೇ ದಾಖಲೆಗಳು ಇಲ್ಲದೆ ಸೈಟ್‌ ಪಡೆದುಕೊಳ್ಳುತ್ತಿರುವ ಹಾಗೂ ಕಾನೂನು ಬಾಹಿರವಾಗಿ ನಿವೇಶನ ಹಂಚುವ ಬಗ್ಗೆ ಜನಸಾಮಾನ್ಯರಿಗೆ ಆಕ್ರೋಶವಿದೆ. ಆದ್ದರಿಂದ ಮುಡಾ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು. ಹಾಗೂ ಹಿಂದಿನ ಇಬ್ಬರು ಮುಡಾ ಆಯುಕ್ತರ ಮೇಲೆ ಯಾವುದೇ ಕ್ರಿಮಿನಲ್‌ ಕೇಸ್‌ ಹಾಕದೆ ಸರ್ಕಾರ ಸುಮ್ಮನೆ ಕುಳಿತಿದೆ. ಇದರ ಹಾಗೂ ಮುಡಾ ಹಗರಣದ ವಿರುದ್ಧ ಶುಕ್ರವಾರ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ವಿವರಿಸಿದರು.

ಮುಡಾದಲ್ಲಿ ಮೂಲ ದಾಖಲಾತಿಗಳೇ ಮಾಯವಾಗಿದ್ದು, ಅವುಗಳ ಬಗ್ಗೆ ತನಿಖೆಯಾಗಬೇಕು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪ್ರಕರಣ ಸೇರಿದಂತೆ ಮುಡಾದ ಎಲ್ಲಾ ಅವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸಬೇಕು. ಹಗರಣದಲ್ಲಿ ಯಾವುದೇ ಪಕ್ಷದವರಿದ್ದರೂ ತಪ್ಪಿತಸ್ಥರಿದ್ದರೆ ಶಿಕ್ಷೆಯಾಗಬೇಕು. ಅಕ್ರಮವಾಗಿ ಹಂಚಿರುವ ನಿವೇಶನಗಳನ್ನು ವಾಪಸ್‌ ಪಡೆದು ಮುಡಾ ನಿವೇಶನಕ್ಕಾಗಿ ಅರ್ಜಿ ಹಾಕಿರುವ ಸುಮಾರು 85 ಸಾವಿರ ಆಕಾಂಕ್ಷಿಗಳಿಗೆ ನಿವೇಶನ ಹಂಚಬೇಕು ಎಂದು ವಿವರಿಸಿದರು.

ಇದನ್ನೂ ಓದಿ: ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್: ಆ.31ಕ್ಕೆ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಮತ್ತೆರಡು ದಿನ ರಿಲೀಫ್ - Muda Scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.