ETV Bharat / state

'ನಿಗಮ, ಮಂಡಳಿಗಳಿಗೆ ಒಟ್ಟು 75 ಹೆಸರು ಅಂತಿಮ, ಸಿಎಂ ಕಚೇರಿಯಿಂದ ವಿಳಂಬ' - corporation boards

ನಿಗಮ ಮಂಡಳಿಗಳಿಗೆ ಒಟ್ಟು 75 ಹೆಸರುಗಳು ಅಂತಿಮವಾಗಿವೆ. ಆದರೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅದ್ಯಾಕೋ ತಡವಾಗುತ್ತಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

MLA Shivalingegowda  ನಿಗಮ ಮಂಡಳಿ  75 ಹೆಸರುಗಳು ಅಂತಿಮ  corporation boards  ಲೋಕಾಸಭೆ ಚುನಾವಣೆ
ನಿಗಮ ಮಂಡಳಿಗಳಿಗೆ ಒಟ್ಟು 75 ಹೆಸರುಗಳು ಅಂತಿಮ: ಶಾಸಕ ಶಿವಲಿಂಗೇಗೌಡ
author img

By ETV Bharat Karnataka Team

Published : Jan 21, 2024, 10:31 AM IST

ಕಾಂಗ್ರೆಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಸುದ್ದಿಗೋಷ್ಠಿ

ಹಾಸನ: ''ಇವತ್ತು ಲಿಂಗಾಯತರಿಗೆ ಅನ್ಯಾಯ ಆಯ್ತು ಅನ್ನೋರು ಅವತ್ತು ಬೇಲೂರಲ್ಲಿ ನಿಂತ್ಕೊಂಡು ಲಿಂಗಾಯತ ಅಭ್ಯರ್ಥಿಗೆ ಅನ್ಯಾಯ ಮಾಡಲಿಲ್ಲವೇ'' ಎಂದು ಈ ಹಿಂದೆ ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಶಿಧರ್ ಅವರಿಂದ ಸ್ಥಾನ ಬಿಡಿಸಿಕೊಟ್ಟೆವು ಎಂಬ ಬಿ.ಶಿವರಾಂ ಹೇಳಿಕೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿರುಗೇಟು ನೀಡಿದರು. ಇದೇ ವೇಳೆ, ''ರಾಜ್ಯದಲ್ಲಿ ನಿಗಮ, ಮಂಡಳಿಗಳಿಗೆ ಒಟ್ಟು 75 ಜನರ ಹೆಸರು ಅಂತಿಮವಾಗಿದೆ. ಆದರೆ, ಸಿಎಂ ಕಚೇರಿಯಲ್ಲಿ ತಡವಾಗುತ್ತಿದೆ'' ಎಂದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಯಾರೂ ಕೂಡ ಅವರ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ನನ್ನ ಪಕ್ಷ ಸೇರ್ಪಡೆ ವೇಳೆ, ಅವರು ಮತ್ತೆ ಚುನಾವಣೆಗೆ ನಿಲ್ಲೋದಿಲ್ಲ ಎಂದೇ ಹೇಳಿದ್ದರು. ಸ್ವತಃ ನಮ್ಮ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರೇ ಶಶಿಧರ್​ಗೆ ಫೋನ್‌ ಮಾಡಿ ಖಾತ್ರಿ ಮಾಡಿಕೊಂಡರು. ಜಿಲ್ಲೆಯಲ್ಲಿ ಲಿಂಗಾಯತರಿಗೆ ಅನ್ಯಾಯ ಆಯ್ತು ಅಂತೀರಾ, ಲಿಂಗಾಯತರಿಗೆ ಟಿಕೆಟ್ ಕೊಡದ ಕಾರಣಕ್ಕೆ ಎರಡು ಮೂರು ಕಡೆ ಸೋಲಾಯ್ತು. ಇದನ್ನು ಯಾಕೆ ಹೇಳಲಿಲ್ಲ. ಲಿಂಗಾಯತರಿಗೆ ಅನ್ಯಾಯ ಆಗಿದ್ದರೆ ಇವರು ಸ್ಪರ್ಧೆ ಮಾಡಿದ ಬೇಲೂರಿನಲ್ಲೇ ಸ್ಥಾನ ಬಿಟ್ಟು ಕೊಡಬೇಕಿತ್ತು. ಈಗ ಇದ್ದಕ್ಕಿದ್ದ ಹಾಗೆ ಲಿಂಗಾಯತರ ಮೇಲೆ ಅಭಿಮಾನ ಉಕ್ಕಿ ಹರಿಯುತ್ತಿದೆಯೇ?'' ಎಂದು ಗರಂ ಆದರು.

ಎಂಪಿ ಚುನಾವಣೆ ಅಭ್ಯರ್ಥಿ ಅಲ್ಲ: ''ನಾನು ಲೋಕಾಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ತಮ್ಮ ವಿರುದ್ಧ ಟೀಕೆ ಬಗ್ಗೆ ಹೈಕಮಾಂಡ್​ಗೆ ಪತ್ರ ಬರೆಯುತ್ತೇನೆ. ಒಂದು ಕಡೆ ನೀತಿಗೆಟ್ಟಿರುವವರು ಅಂತೀರಾ, ಇನ್ನೊಂದು ಕಡೆ ನನ್ನನ್ನೇ ಎಂಪಿ ಕ್ಯಾಂಡೇಟ್ ಆಗಲಿ ಅಂತೀರಾ? ಯಾಕಾಗಿ ಇದನ್ನೆಲ್ಲಾ ಮಾಡುತ್ತಿದ್ದೀರಿ? ಇದನ್ನೇ ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಕೇಳುತ್ತೇನೆ. ವಲಸೆ ಬಂದೋರು ಅಂತೀರಲ್ಲಾ? ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ನಾನು, ಸೇರಿ ಹಲವರು ಬಂದೆವಲ್ಲ, ಅದರಿಂದಲೇ ಪಕ್ಷ ಗೆದ್ದಿದೆ. ಸುಮ್ಮನೆ ನಮ್ಮನ್ನು ವಲಸಿಗರು ನೀತಿಗೆಟ್ಟೋರು ಅಂತಾ ಹೇಳಿದ್ರೆ ಹೇಗೆ? ಸಾರ್ವಜನಿಕವಾಗಿ ಪಕ್ಷದ ಘನತೆ ಹಾಳು ಮಾಡುತ್ತಿದ್ದೀರಿ'' ಎಂದು ಟೀಕಿಸಿದರು.

''ಬೇಲೂರಲ್ಲಿ ಹೋಗಿ ಹೊಡೆದಾಡಿಸಿದ್ರಿ. ನನ್ನ ಕ್ಷೇತ್ರಕ್ಕೆ ಬಂದು ನನಗೆ ಹೇಳದೇ ಸಭೆ ಮಾಡಿದ್ರಿ. ಇದು ಪಕ್ಷ ಗೆಲ್ಲಿಸೋ ರೀತಿಯೇ? ನನ್ನನ್ನು ಅವಿರೋಧವಾಗಿ ಕಳಿಸಿದ್ರು. ನಾನು ಪಾರ್ಲಿಮೆಂಟ್​ಗೆ ಹೋಗೋದಿಲ್ಲ. ತಾವು ಲೋಕಸಭಾ ಚುನಾವಣೆ ಅಭ್ಯರ್ಥಿ ಆಗೋದಿಲ್ಲ. ಬೇಕಾದ್ರೆ ಅವರನ್ನೇ ಅಭ್ಯರ್ಥಿಯಾಗೋಕೆ ಹೇಳಿ'' ಎಂದರು.

''ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನಾಯಕರು ಪುಲ್ವಾಮಾ ವಿಚಾರ ಇಟ್ಟುಕೊಂಡು ಗೆದ್ದರು. ಈ ಬಾರಿ ರಾಮ ಮಂದಿರ ಮುಂದಿಟ್ಟು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಾನೂ ರಾಮನ ಪರಮ ಭಕ್ತ. ಹತ್ತಾರು ವರ್ಷ ರಾಮನ ಫೋಟೋ ಇಟ್ಟುಕೊಂಡು ಭಜನೆ ಮಾಡಿದ್ದೇನೆ. ನಾವೇನು ರಾಮನನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ. ನಾವು ರಾಮನ ಭಕ್ತರೇ ಆಗಿದ್ದೇವೆ. ನಾವೂ ಜೈ ಶ್ರೀರಾಮ್ ಅಂತೀವಿ. ಅಲ್ಲಿ ಅವರು ಉದ್ಘಾಟನೆ ಮಾಡಿದ್ರೆ ನಾವು ಮನೆಯಲ್ಲಿ ಫೋಟೊ ಇಟ್ಟು ಪೂಜೆ ಮಾಡ್ತೇವೆ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಯಾಯ್ದರು.

ಇದನ್ನೂ ಓದಿ: 20 ವರ್ಷದ ಹಿಂದೆ ಮನೆ ಹೆಬ್ಬಾಗಿಲಿನಲ್ಲಿ ಶ್ರೀರಾಮ ಮಂದಿರ ನಿರ್ಮಿಸಿ ನಿತ್ಯ ಪೂಜೆ.. ಭಕ್ತ ಮಹಾದೇವಪ್ಪನ ಕಾರ್ಯಕ್ಕೆ ಶ್ಲಾಘನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.