ETV Bharat / state

ಮೈಸೂರು: ಲೋಕಸಭಾ ಚುನಾವಣೆಗೆ 'ಮೈಲ್ಯಾಕ್' ನಿಂದ 26.55 ಲಕ್ಷ ಇಂಕ್​ ಬಾಟಲ್​ ಸರಬಾರಾಜು

author img

By ETV Bharat Karnataka Team

Published : Feb 17, 2024, 8:45 PM IST

ಲೋಕಸಭಾ ಚುನಾವಣೆಗಾಗಿ ಎಲ್ಲಾ ರಾಜ್ಯಗಳಿಗೂ ಅಳಿಸಲಾಗದ ಇಂಕ್​ ಬಾಟಲ್​ಗಳನ್ನು ಮೈಲ್ಯಾಕ್ ಸರಬಾರಾಜು ಮಾಡುತ್ತಿದೆ.

ಮೈಲ್ಯಾಕ್
ಮೈಲ್ಯಾಕ್
ಲೋಕಸಭಾ ಚುನಾವಣೆಗೆ ಮೈಲ್ಯಾಕ್ ನಿಂದ ಇಂಕ್​ ಬಾಟಲ್​ ಸರಬಾರಾಜು

ಮೈಸೂರು : ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗದ ಬೇಡಿಕೆಯ ಮೇರೆಗೆ ಮೈಸೂರಿನ ಪೇಂಟ್ ಅಂಡ್ ವಾರ್ನಿಷ್ ಲಿಮಿಟೆಡ್ ಅಂದರೆ ಮೈಲ್ಯಾಕ್ ನಿಂದ 26.55 ಲಕ್ಷ ಅಳಿಸಲಾಗದ 10 ಎಂಎಲ್ ಶಾಯಿಯ ಬಾಟಲ್ ಗಳನ್ನು ಪೂರೈಸಲು ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಕೆಲವು ರಾಜ್ಯಗಳಿಗೆ ಅಳಿಸಲಾಗದ ಶಾಯಿಯನ್ನು ಪೂರೈಸಲಾಗಿದೆ ಎಂದು ಮೈಲ್ಯಾಕ್​ನ ವ್ಯವಸ್ಥಾಪಕ ನಿರ್ದೇಶಕ ಕೆ. ಮಹಮ್ಮದ್ ಇರ್ಫಾನ್ ಈಟಿವಿ ಭಾರತ್​ ಗೆ ಮಾಹಿತಿ ನೀಡಿದರು.

ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಮತದಾನ ಮಾಡಿದ ಗುರುತಿಗಾಗಿ ಮತದಾರರ ಕೈಬೆರಳಿಗೆ ಅಳಿಸಲಾಗದ ಶಾಯಿಯ ಮಾರ್ಕ್ ಅನ್ನು ಹಾಕಲಾಗುತ್ತದೆ. ಇಂತಹ ಶಾಯಿಯನ್ನು ಮೈಸೂರು ಪೇಂಟ್ ಅಂಡ್ ವಾರ್ನಿಷ್ ಲಿಮಿಟೆಡ್ ಪೂರೈಸುತ್ತಿದೆ. ಮಾರ್ಚ್ 15 ರೊಳಗೆ ಎಲ್ಲಾ ರಾಜ್ಯಗಳಿಗೂ 10 ಎಂಎಲ್​ ನ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಇವುಗಳನ್ನು ಕೊನೆಯ ಹಂತದಲ್ಲಿ ಮಾಡಿಕೊಳ್ಳುತ್ತೇವೆ. ಒಂದು 10 ಎಂಎಲ್ ಬಾಟಲಿನಿಂದ 700 ಮಂದಿ ಮತದಾರರ ಬೆರಳಿಗೆ ಶಾಯಿಯನ್ನು ಹಾಕಬಹುದಾಗಿದ್ದು, ಈ ಬಾರಿ 26.55 ಲಕ್ಷ ಅಳಿಸಲಾಗದ ಬಾಟಲ್​ಗಳಿಂದ 55 ಕೋಟಿ ರೂ. ಆದಾಯ ಬಂದಿದೆ ಎಂದು ಮಹಮ್ಮದ್ ಇರ್ಫಾನ್ ತಿಳಿಸಿದರು.

ಮೈಲ್ಯಾಕ್​ ಇತಿಹಾಸ : ಮೈಲ್ಯಾಕ್ ಅಂದರೆ ಮೈಸೂರು ಪೇಂಟ್ ಅಂಡ್ ವಾರ್ನಿಷ್ ಲಿಮಿಟೆಡ್. ಇದು ಕರ್ನಾಟಕ ಸರ್ಕಾರದ ಅಧೀನ ಉದ್ಯಮವಾಗಿದೆ. ಈಗ 75 ವರ್ಷಗಳ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿದೆ. 1937 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ಬನ್ನಿ ಮಂಟಪದಲ್ಲಿ ಸ್ಥಾಪಿಸಿದರು. 1947 ರ ನಂತರದಲ್ಲಿ ಮೈಲ್ಯಾಕ್ ಕರ್ನಾಟಕ ಸರ್ಕಾರದ ಸ್ವಾಧೀನಕ್ಕೆ ಬಂದು ಮೈಸೂರು ಲ್ಯಾಕ್ ಅಂಡ್ ಪೇಂಟ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಬಳಿಕ 1989ರಲ್ಲಿ ವಾರ್ನಿಷ್ ಉತ್ಪಾದನೆ ಮಾಡಲು ಆರಂಭಿಸಿದ್ದರು. ಕಳೆದ 75 ವರ್ಷಗಳಿಂದಲೂ ಲಾಭದಲ್ಲೇ ನಡೆಯುತ್ತಿರುವ ಸರ್ಕಾರದ ಉದ್ಯಮ ಎಂಬುದು ಹೆಮ್ಮೆಯ ವಿಚಾರವಾಗಿದೆ.

ನಾವೇ ಶಾಯಿಯನ್ನು ನೀಡಲು ಮಾರ್ಚ್ 28 ಕ್ಕೆ ಡೆಡ್ ಲೈನ್ ಹಾಕಿಕೊಂಡಿದ್ದೇವೆ. ಚುನಾವಣಾ ಆಯೋಗವು ಮಾರ್ಚ್ ಒಳಗೆ ತಲುಪಿಸಬೇಕು ಎಂದು ಹೇಳಿದೆ. ನಾವು ಸಹ ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ತಲುಪಿಸಲು ಪ್ರಯತ್ನ ಮಾಡುತ್ತೇವೆ. 75 ವರ್ಷದಿಂದ ಉದ್ಯಮ ಉತ್ತಮವಾಗಿ ನಡೆಯುತ್ತಾ ಬಂದಿದೆ. ಕಡಿಮೆ ಬೆಲೆಯಲ್ಲಿ ಯಾವತ್ತೂ ಹೋಗಿಲ್ಲ. ತನ್ನ ಹೆಗ್ಗಳಿಕೆಯನ್ನು ಉಳಿಸಿಕೊಂಡು ಬಂದಿದೆ. ಈಗ ನಮ್ಮ ಡಿಫೆಂಡೇಬಲ್ ಮತ್ತು ಇಟಾಲಿಯನ್ ಇಂಕುಗಳ ಮೇಲೆ ಆಗಿದೆ. ಕೊನೆಯ ಬಾರಿ ಸಚಿವರು ಡೈವರ್ಸಿಟಿ ಮೀಟಿಂಗ್ ನಮಗೆ ಸಲಹೆ ನೀಡಿದ್ದಾರೆ. ಅದರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಚುನಾವಣಾ ಆಯೋಗದವರು ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ಅವರ ಎಸ್​ಒಪಿ ಪ್ರಕಾರವೇ ಕೆಲಸ ನಡೆಯುತ್ತಿದೆ. ಇದರ ಗುಣಮಟ್ಟದ ಬಗ್ಗೆ ಅವರು ಇಲ್ಲಿಯೇ ಪರೀಕ್ಷೆಗಳನ್ನು ನಡೆಸುತ್ತಾರೆ. ಇದಾದ ನಂತರ ಕೇಂದ್ರದಲ್ಲೂ ಪರೀಕ್ಷೆ ನಡೆಸಲಾಗುತ್ತದೆ. ಭಾರತದ ಎಲ್ಲಾ ರಾಜ್ಯಗಳಿಗೂ ಸ್ಯಾಂಪಲ್ ಕಳುಹಿಸಿಕೊಡುತ್ತೇವೆ. ದೇಶದೆಲ್ಲೆಡೆ ಶಾಯಿಯನ್ನು ಕಳುಹಿಸುವ ಏಕೈಕ ಸಂಸ್ಥೆ ಇದಾಗಿದೆ. ನಾವು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಖಾಸಗಿ ಸಂಸ್ಥೆಗಳಿಂದ ನಮ್ಮ ಸಂಸ್ಥೆಗೆ ಕಾಂಪಿಟೇಷನ್ ಕೊಡಲು ಸಾಧ್ಯವಿಲ್ಲ. ಏಕೆಂದರೆ ಇದಕ್ಕೆ ಪೇಟೆಂಟ್ ಇದೆ. ನ್ಯಾಷನಲ್ ಫಿಷಿಕಲ್ ಲ್ಯಾಬೋರೇಟರಿ ಇಂದ ಪೇಟೆಂಟ್ ಪಡೆದಿದೆ. ಅವರು ನಮ್ಮೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ನಾ‌ನು ಇಲ್ಲಿಗೆ ಬಂದು 6 ತಿಂಗಳು ಆಗಿದೆ. ಇಲ್ಲಿಗೆ ಬಂದಿರುವುದು ಬಹಳ ಹೆಮ್ಮೆಯ ವಿಷಯವಾಗಿದ್ದು, ಕೆಲವಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದೇನೆ. ಇನ್ನೂ ಬಹಳಷ್ಟು ಬದಲಾವಣೆಗಳನ್ನು ತರುವಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಮಹಮ್ಮದ್ ಇರ್ಫಾನ್ ಹೇಳಿದರು.

ಇದನ್ನೂ ಓದಿ : 89ನೇ ವಯಸ್ಸಿನಲ್ಲಿ ಪಿಎಚ್​ಡಿ ಪಡೆದ ಹಿರಿಯಜ್ಜ: ಯುವಕರಿಗೆ ಮಾದರಿಯಾದ ಅಜ್ಜನ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.