ETV Bharat / state

ಹಾವೇರಿ: ದೇವಸ್ಥಾನದಲ್ಲಿ ಬೋರ್​ವೆಲ್​​ ಕೊರೆಯಿಸಿದ ಯುವಕರ ತಂಡ, ಬರಗಾಲದಲ್ಲೂ 4 ಇಂಚು ನೀರು - borewell in haveri temple

ಅರಳೇಶ್ವರ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ನೀರಿನ ಕೊರತೆಗೆ ದೇವಾಲಯದ ಸಮಿತಿ ಹಾಗೂ ಯುವಕರ ತಂಡವೊಂದು ಹಣ ಸಂಗ್ರಹಿಸಿ ಬೋರ್​ವೆಲ್ ತೆಗೆಸಿದ್ದು ಉತ್ತಮ ನೀರು ದೊರಕಿದೆ.

haveri news
ದೇವಸ್ಥಾನದಲ್ಲಿ ಕೊರೆಸಿದ ಬೋರ್ವೆಲ್​ನಲ್ಲಿ 4 ಇಂಚು ನೀರು
author img

By ETV Bharat Karnataka Team

Published : Apr 22, 2024, 12:36 PM IST

Updated : Apr 22, 2024, 1:23 PM IST

ಬೋರ್​ವೆಲ್ ಕುರಿತು ಗ್ರಾಮಸ್ಥರ ಅಭಿಪ್ರಾಯ

ಹಾವೇರಿ: ಜಿಲ್ಲೆಯ ಅರಳೇಶ್ವರ ಗ್ರಾಮದಲ್ಲಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕಾಗಿ ದೇವಳ ಸಮಿತಿಯೇ ಬೋರ್​​ವೆಲ್​ ತೆಗೆದಿದ್ದು ಬರಗಾಲದಲ್ಲೂ 4 ಇಂಚು ನೀರು ಸಿಕ್ಕಿದೆ.

ಹಾನಗಲ್​​ ತಾಲೂಕಿನ ಮಧ್ಯಮ ಗಾತ್ರದ ಗ್ರಾಮಗಳಲ್ಲಿ ಅರಳೇಶ್ವರ ಗ್ರಾಮವೂ ಒಂದು. ಇಲ್ಲಿ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಆದರೆ ಈ ವರ್ಷ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ನೀರಿನ ಆಭಾವ ತಲೆದೋರಿದ್ದರಿಂದ ಊರಿನ ಯುವಕರ ತಂಡ, ದೇವಳದ ಸಮಿತಿ ಸೇರಿ ಬೋರ್ವೆಲ್​ ಕೊರೆಯಿಸಿ ನೀರು ಕಂಡುಕೊಂಡಿದ್ದಾರೆ.

ಈ ಬಗ್ಗೆ ಗ್ರಾಮಸ್ಥ ಬಸವರಾಜ್​ ಮಾತನಾಡಿ, "ಗ್ರಾಮಸ್ಥರು ಎಂಟು ದಿನಗಳ ಕಾಲ ನಡೆಯುವ ರುದ್ರಾಭಿಷೇಕ, ಅನ್ನದಾಸೋಹಕ್ಕೆ ಟ್ಯಾಂಕರ್ ನೀರು ಹಾಕಿಸುವ ವಿಚಾರದಲ್ಲಿದ್ದರು. ಆದರೆ ದೇವಸ್ಥಾನ ಸಮಿತಿಯವರು ಕುಳಿತು ವಿಚಾರ ಮಾಡಿ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲಾ. ಬಳಿಕ ದೇವಸ್ಥಾನ ಸಮಿತಿಯವರೇ ಕುಳಿತುಕೊಂಡು ಯುವಕರ ತಂಡ ಮಾಡಿದರು. ದೇವಸ್ಥಾನದ ಕಾರ್ಯಕ್ರಮದಲ್ಲಿ ಈ ರೀತಿ ಕೊಳವೆ ಬಾವಿ ಕೊರೆಸುವ ಚಿಂತನೆ ಬಗ್ಗೆ ಪ್ರಸ್ತಾಪಿಸಿದರು. ಅಲ್ಲಿದ್ದ ಯುವಕರು ಹಿರಿಯರ ಅಣತಿ ಮೇರೆಗೆ ಮಲ್ಲಿಕಾರ್ಜುನ ಯುವಬಳಗ ರಚಿಸಿಕೊಂಡು ಕೊಳವೆಬಾವಿ ಕೊರೆಸಲು ಮುಂದಾದರು. ಈ ಸಂಘದ ಸದಸ್ಯರು ತಮ್ಮ ಕೈಲಾದ ಹಣ ಹಾಕಿ, ಸುಮಾರು 76 ಸಾವಿರ ರೂಪಾಯಿ ಸೇರಿಸಿದರು. ಅದರಿಂದ ಉತ್ತೇಜಿತರಾದ ಯುವಕರು ಕೇವಲ 12 ಗಂಟೆಯಲ್ಲಿಯೇ ಹಣ ಸೇರಿಸಿ ಪಕ್ಕದ ಗ್ರಾಮದ ಬಾಲಕನಿಂದ ನೀರಿನ ನೆಲೆ ಕಂಡುಕೊಂಡು ಅಲ್ಲಿಯೇ ಕೊಳವೆಬಾವಿ ಕೊರೆಸಲು ಮುಂದಾದರು. ಯುವ ಬಳಗದ ಅದೃಷ್ಟಕ್ಕೆ ದೇವಸ್ಥಾನದ ಪಕ್ಕದ ಹೊಂಡದ ದಂಡೆಯ ಮೇಲೆ ತೆಗೆಯಿಸಿದ ಕೊಳವೆಬಾವಿಯಲ್ಲಿ ಸುಮಾರು ನಾಲ್ಕು ಇಂಚು ನೀರು ಸಿಕ್ಕಿದೆ" ಎಂದು ತಿಳಿಸಿದರು.

ಇದೀಗ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದ ಎಲ್ಲ ಕಾರ್ಯಕ್ರಮಗಳಿಗೆ ಈ ಕೊಳವೆಬಾವಿ ನೀರು ಬಳಕೆ ಮಾಡಲಾಗುತ್ತಿದೆ. ಇಲ್ಲಿ ನಡೆಯುವ ಮದುವೆ, ನಿಶ್ಚಿತಾರ್ಥ, ಜವಳ ಸೇರಿದಂತೆ ವಿವಿಧ ಕಾರ್ಯಗಳಿಗೆ ಸಹ ಈ ಕೊಳವೆಬಾವಿ ನೀರು ಬಳಕೆಯಾಗುತ್ತಿದೆ. ಗ್ರಾಮಸ್ಥರು ಸಹ ಈ ಕೊಳವೆಬಾವಿ ನೀರನ್ನೇ ಉಪಯೋಗಿಸುತ್ತಿದ್ದಾರೆ. ಆರಂಭದಲ್ಲಿ ಕೇವಲ 7 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದ್ದ ಪರಿಣಾಮ ನೀರು ಕೇವಲ ಏಳು ಗಂಟೆ ಮಾತ್ರ ಸಿಗುತ್ತಿತ್ತು. ಇದೀಗ ಕೊಳವೆಬಾವಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ದಿನದ 24 ಗಂಟೆ ಈ ನೀರು ಗ್ರಾಮದ ಜನರಿಗೆ ಉಪಯೋಗವಾಗುತ್ತಿದೆ.

ಬೋರ್ವೆಲ್​ ಕೊರೆಯಿಸಿದ ಯುವಕರ ತಂಡ
ಬೋರ್ವೆಲ್​ ಕೊರೆಯಿಸಿದ ಯುವಕರ ತಂಡ

ಇನ್ನು ಮಲ್ಲಿಕಾರ್ಜುನ ಯುವಬಳಗ ಸಂಘದ ಮಹೇಶ್​ ಮಾತನಾಡಿ, ಬೋರ್​ವೆಲ್​​ ಕೊರೆಸಿದ್ದಕ್ಕೆ ಹಣದ ಕೊರತೆಯಾದಾಗ ಏಜೆಂಟ್ ಜೊತೆ ಇದು ಮನೆಗೆ ಅಲ್ಲ ದೇವಾಲಯಕ್ಕೆ ಎಂದು ಹೇಳಿದಾಗ 15 ಸಾವಿರ ಕಡಿಮೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ​

ಗ್ರಾಮದ ಜನರಿಗೆ ಇಲ್ಲಿ ಉಚಿತವಾಗಿ ನೀರು ಪೂರೈಸಲಾಗುತ್ತದೆ. ಗ್ರಾಮಸ್ಥರು ತಮಗೆ ಬೇಕಾದ ನೀರನ್ನು ಇಲ್ಲಿ ಬಂದು ಟ್ಯಾಂಕರ್ ಮೂಲಕ, ಸೈಕಲ್ ಗಾಡಿ ಮೂಲಕ ತೆಗೆದುಕೊಂಡು ಹೋಗಬಹುದು. ಆದರೆ ಮೊದಲ ಆದ್ಯತೆಯನ್ನು ದೇವಸ್ಥಾನಕ್ಕೆ ನೀಡಲಾಗಿದೆ. ಉಳಿದಂತೆ ಎಲ್ಲರೂ ಈ ನೀರನ್ನು ಬಳಿಸಬಹುದಾಗಿದೆ. ಬರಗಾಲದಲ್ಲಿ ಗ್ರಾಮಸ್ಥರಿಗೆ ಈ ಬೋರ್ ನೀರಿನ ದಾಹ ತೀರಿಸುತ್ತಿದೆ. ಮಲ್ಲಿಕಾರ್ಜುನ ಯುವಬಳಗದ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅಪಾರ್ಟ್​ಮೆಂಟ್​ಗಳಲ್ಲಿ ಬಳಸಿದ ನೀರು ಸಂಸ್ಕರಿಸಿ ಮಾರಲು ಮುಂದಾದ ಜಲಮಂಡಳಿ - Water Recycling

Last Updated : Apr 22, 2024, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.