ಮಂಡ್ಯ: ಇಬ್ಬರು ಯುವಕರ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿರುವ ದುಷ್ಕರ್ಮಿಗಳ ಗುಂಪೊಂದು ಓರ್ವನನ್ನು ಕೊಲೆಗೈದು, ಮತ್ತೊಬ್ಬನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಂತ (28) ಹತ್ಯೆಗೀಡಾದ ಯುವಕ. ತೀವ್ರವಾಗಿ ಗಾಯಗೊಂಡಿರುವ ಕುಮಾರ ಅಲಿಯಾಸ್ ಕುಮ್ಮಿ ಎಂಬಾತನನ್ನು ಸಾತನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ಮಳೆಯಿಂದಾಗಿ ಮನೆ ಮುಂದೆ ಕುಳಿತಿದ್ದ ಕಾಂತ ಹಾಗೂ ಕುಮಾರನ ಮೇಲೆ ಏಕಾಏಕಿ ದಾಳಿ ಮಾಡಿರುವ 3-4 ಮೂವರು ಯುವಕರ ಗುಂಪು, ಮಚ್ಚು ಹಾಗು ಲಾಂಗ್ಗಳಿಂದ ಕೊಚ್ಚಿ ಕಾಂತನನ್ನು ಕೊಲೆಗೈದಿದ್ದಾರೆ. ನಂತರ ಕುಮಾರನ ಮೇಲೂ ದಾಳಿ ನಡೆಸಿದ್ದು, ಆತ ತಪ್ಪಿಸಿಕೊಂಡು ಮನೆಯೊಂದನ್ನು ಸೇರಿಕೊಂಡು ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಗಾಯಾಳುವಿಗೆ ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾರೋಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಹಳೇ ವೈಷಮ್ಯ ಕಾರಣ ಎನ್ನಲಾಗುತ್ತಿದೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ, ಹಲಗೂರು ಸಿಪಿಐ ಶ್ರೀಧರ್, ಪಿಎಸ್ಐ ಮಹೇಂದ್ರ ಘಟನಾ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಹಾಸನ: ಮಾರಣಾಂತಿಕ ಹಲ್ಲೆಗೊಳಗಾದ ಯುವಕ ಸಾವು; ಆರೋಪಿಗೆ ಪೊಲೀಸರ ಗುಂಡೇಟು - Hassan Murder Accused Arrest