ETV Bharat / state

ಕಾರ್ಮಿಕರ ಮಕ್ಕಳಿಗೆ ಹಂಚಲು ತಂದಿದ್ದ 101 ಲ್ಯಾಪ್​ಟಾಪ್​ ಕಳವು: ದೂರು ದಾಖಲು - laptops stolen

author img

By ETV Bharat Karnataka Team

Published : 3 hours ago

Updated : 2 hours ago

ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಲು ತಂದಿದ್ದ ಲ್ಯಾಪ್​ಟಾಪ್​ಗಳು ಕಳವಾಗಿರುವ ಘಟನೆ ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ನಡೆದಿದೆ.

ಕಾರ್ಮಿಕ ಭವನ
ಕಾರ್ಮಿಕ ಭವನ (ETV Bharat)

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿದ್ದ ಲ್ಯಾಪ್​ಟಾಪ್​ಗಳು ಕಳವಾಗಿರುವ ಘಟನೆ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಕಾರ್ಮಿಕ ಭವನ ಕಚೇರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು 250 ಲ್ಯಾಪ್‌ಟಾಪ್‌ಗಳನ್ನು ಇಲ್ಲಿ ಇರಿಸಲಾಗಿತ್ತು. ಈ ಪೈಕಿ 101 ಲ್ಯಾಪ್‌ಟಾಪ್‌ಗಳನ್ನು ಮೇ 22 ರಿಂದ ಆಗಸ್ಟ್ 30ರ ನಡುವೆ ಕೊಠಡಿಯ ಕಿಟಕಿ ತೆರೆದು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿಸಿ ಕ್ಯಾಮರಾ ವೈರ್ ಕತ್ತರಿಸಿ, ಹಾರ್ಡ್ ಡಿಸ್ಕ್​ ಹಾಗೂ ಡಿವಿಆ‌ರ್ ಸಹ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ ಹಳೇ ಹುಬ್ಬಳ್ಳಿ ‌ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ (ETV Bharat)

ಅಧಿಕಾರಿ ಹೇಳಿದ್ದೇನು?: ಈ ಕುರಿತು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ ಪ್ರತಿಕ್ರಿಯಿಸಿ, ‌"ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳಿಗೆ 250 ಲ್ಯಾಪ್‌ಟಾಪ್​ಗಳನ್ನು ಮೀಸಲಿಡಲಾಗಿತ್ತು. ಹಾವೇರಿ ಜಿಲ್ಲೆಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಅಲ್ಲಿ ಸ್ಥಳಾವಕಾಶ ಕೊರತೆ ಕಾರಣದಿಂದ ಇಲ್ಲಿಗೆ ತಂದು ಇರಿಸಿದ್ದರು" ಎಂದರು.

"ಎಲ್ಲ ಲ್ಯಾಪ್‌ಟಾಪ್​ಗಳನ್ನು ಕೊಠಡಿಯಲ್ಲಿ ಇರಿಸಿ ಅದರ ಬೀಗವನ್ನು ಅಧಿಕಾರಿಗಳೇ ತಗೆದುಕೊಂಡು ಹೋಗಿದ್ದಾರೆ. ಆಗಸ್ಟ್ 30ರಂದು ಕಿಟಕಿ ತೆರೆದಿರುವುದು ಗಮನಕ್ಕೆ ಬಂದಿದೆ. ಆಗ ಹಾವೇರಿ ಜಿಲ್ಲೆಯ ಎಕ್ಸಿಕ್ಯೂಟಿವ್ ಹರೀಶ್​ ಶೆಟ್ಟಿ ಅವರ ಸಮ್ಮುಖದಲ್ಲಿ ಕೊಠಡಿ ಬೀಗ ತಗೆದು ಲ್ಯಾಪ್‌ಟಾಪ್ ಎಣಿಕೆ ಮಾಡಿದಾಗ 101 ಲ್ಯಾಪ್‌ಟಾಪ್​ಗಳು ಕಳ್ಳತನವಾಗಿರುವ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ‌ಪೊಲೀಸ್ ಠಾಣೆಯಲ್ಲಿ ದೂರು‌ ನೀಡಲಾಗಿದೆ. ಸೆ.6 ರಂದು ಎಫ್​ಐಆರ್ ಸಹ ದಾಖಲಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್​ಟೇಬಲ್​ ಸೇರಿ ಏಳು ಆರೋಪಿಗಳ ಬಂಧನ - Robbery Case

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.