ETV Bharat / sports

ಒಲಿಂಪಿಕ್ ಪದಕ ವಿಜೇತರು ಪಡೆಯುವ ಬಹುಮಾನದ ಮೊತ್ತ ಎಷ್ಟು ಗೊತ್ತಾ?! - Olympic Medal Winners Prize Money

author img

By ETV Bharat Karnataka Team

Published : Jul 24, 2024, 2:34 PM IST

ಭಾರತ ಸೇರಿ ಇತರ ದೇಶಗಳಲ್ಲಿ ಒಲಿಂಪಿಕ್​ ಪದಕ ವಿಜೇತರಿಗೆ ಬಹುಮಾನವಾಗಿ ನೀಡುವ ಮೊತ್ತ ಎಷ್ಟು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ಯಾರಿಸ್​ ಒಲಿಂಪಿಕ್ 2024
ಪ್ಯಾರಿಸ್​ ಒಲಿಂಪಿಕ್ಸ್‌ 2024 (ETV Bharat)

ನವದೆಹಲಿ: ಜು.26ರಿಂದ ಪ್ಯಾರಿಸ್​ ಒಲಿಂಪಿಕ್​ ಆರಂಭಗೊಳ್ಳಲಿದೆ. ಈ ಬಾರಿ ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ಸಲ ಟೊಕಿಯೋ ಒಲಿಂಪಿಕ್​ನಲ್ಲಿ ಭಾರತ 7 ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಒಂದು ಚಿನ್ನದ ಪದಕ ಸೇರಿತ್ತು. ಈ ಬಾರಿಯೂ ಹೆಚ್ಚು ಪದಕಗಳನ್ನು ಗೆಲ್ಲುವು ನಿರೀಕ್ಷೆಯೊಂದಿಗೆ ಭಾರತ ಕಣಕ್ಕಿಳಿಯಲಿದೆ.

ಆದರೆ, ನಿಮಗೆ ಗೊತ್ತಾ? ಒಲಿಂಪಿಕ್ ಪದಕ ವಿಜೇತರಿಗೆ ಭಾರತ ಸೇರಿ ಪ್ರಮುಖ ದೇಶಗಳಲ್ಲಿ ಬಹುಮಾನವಾಗಿ ಎಷ್ಟು ನಗದು ಸಿಗುತ್ತದೆ ಗೊತ್ತೇ?.

ಕ್ರೀಡೆಯನ್ನು ಆಯೋಜಿಸುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಪದಕ ವಿಜೇತರಿಗೆ ಪದಕ ಹೊರತುಪಡಿಸಿ ಯಾವುದೇ ರೀತಿಯ ಹಣ ಆಗಲಿ ಬಹುಮಾನವಾಗಲಿ ನೀಡುವುದಿಲ್ಲ. ಆದರೆ ರಾಷ್ಟ್ರೀಯ ಸರ್ಕಾರಗಳು ಅಥವಾ ಸಂಸ್ಥೆಗಳು ಅಥವಾ ಕ್ರೀಡಾ ಒಕ್ಕೂಟಗಳು ಕ್ರೀಡಾಪಟುಗಳಿಗೆ ನಗದು ಅಥವಾ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುವುದನ್ನು ಇದು ತಡೆಯುವುದಿಲ್ಲ.

ವಿವಿಧ ದೇಶಗಳ ಸರ್ಕಾರಗಳು ಮತ್ತು ಖಾಸಗಿ ಪ್ರಾಯೋಜಕರು ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ನಗದು, ಆಸ್ತಿ, ಮತ್ತು ಜಾನುವಾರುಗಳಂತಹ ಕೋಟ್ಯಂತರ ರೂ ಬಹುಮಾನಗಳನ್ನು ನೀಡುತ್ತಾರೆ. ಕೆಲವು ದೇಶಗಳಲ್ಲಿ, ಸಾಮಾನ್ಯವಾಗಿ ನಗದು ಜೊತೆಗೆ, ವಿಜೇತ ಕ್ರೀಡಾಪಟುಗಳಿಗೆ ಐಷಾರಾಮಿ ಕಾರುಗಳಿಂದ ಹಿಡಿದು ಅಪಾರ್ಟ್‌ಮೆಂಟ್‌ಗಳವರೆಗೆ ಅದ್ದೂರಿ ಬಹುಮಾನಗಳನ್ನೂ ನೀಡಲಾಗುತ್ತದೆ.

ಯಾವ ದೇಶದಲ್ಲಿ ಎಷ್ಟು ಬಹುಮಾನ?

ಭಾರತ: ಕಳೆದ ಒಲಿಪಿಂಕ್​ನಲ್ಲಿ ಪದಕ ಗೆದ್ದು ಬಂದಿದ್ದ ವಿಜೇತರಿಗೆ ಭಾರತ ಸರ್ಕಾರ ಗೌರವಿಸಿತ್ತು. ಅಲ್ಲದೇ ರಾಜ್ಯವಾರು ಸರ್ಕಾರಗಳು ತಮ್ಮ ತಮ್ಮ ಒಲಿಪಿಂಕ್​ ಪದಕ ವಿಜೇತರಿಗೆ ಭರ್ಜರಿ ಬಹುಮಾನಗಳನ್ನು ನೀಡಿದ್ದರು. ಕೇಂದ್ರ ಸರ್ಕಾರವು ಒಲಿಂಪಿಕ್ ಚಿನ್ನದ ಪದಕ ವಿಜೇತರಿಗೆ ರೂ 75 ಲಕ್ಷ ರೂ, ಬೆಳ್ಳಿ ಪದಕ ವಿಜೇತರು ರೂ 50 ಲಕ್ಷ ಮತ್ತು ಕಂಚಿನ ಪದಕ ವಿಜೇತರು ರೂ 10 ಲಕ್ಷ ನೀಡಿ ಗೌರವಿಸಿತ್ತು. ಇದಲ್ಲದೇ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಪ್ರತ್ಯೇಕವಾಗಿ 1 ಕೋಟಿಗೂ ಅಧಿಕ ಮೊತ್ತವನ್ನು ನೀಡುತ್ತದೆ.

ಯುಎಸ್​ಎ: ಯುಎಸ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿಯ ಆಪರೇಷನ್ ಗೋಲ್ಡ್ ಕಾರ್ಯಕ್ರಮದ ಅಡಿಯಲ್ಲಿ, ಒಲಿಂಪಿಕ್ ಚಿನ್ನದ ಪದಕ ವಿಜೇತರಿಗೆ $37,500 ನೀಡಿದರೇ ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು ಕ್ರಮವಾಗಿ $22,500 ಮತ್ತು $15,000 ಪಡೆಯುತ್ತಾರೆ.

ಇಂಡೋನೇಷ್ಯಾ: ರಾಯಿಟರ್ಸ್ ವರದಿಯ ಪ್ರಕಾರ, 2021ರಲ್ಲಿ ಟೋಕಿಯೊ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಇಂಡೋನೇಷ್ಯಾದ ಬ್ಯಾಡ್ಮಿಂಟನ್ ಅಥ್ಲೀಟ್‌ಗಳಾದ ಗ್ರೇಸಿಯಾ ಪೋಲಿ ಮತ್ತು ಅಪ್ರಿಯಾನಿ ರಹಾಯು ಅವರಿಗೆ 5 ಹಸುಗಳು, 1 ಮೀಟ್‌ಬಾಲ್ ರೆಸ್ಟೋರೆಂಟ್ ಮತ್ತು ಹೊಸ ಮನೆ ಕೊಡುವುದಾಗಿ ಘೋಷಿಸಿತ್ತು. ಈ ಜೋಡಿಗೆ ಸರಿಸುಮಾರು $350,000 ನಗದು ಪ್ರಶಸ್ತಿಯನ್ನು ನೀಡಿತು.

ಹಾಂಗ್ ಕಾಂಗ್: ಹಾಂಗ್‌ಕಾಂಗ್ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ತನ್ನ ಕ್ರೀಡಾಪಟುಗಳಿಗೆ ಅವರು ಸ್ಪರ್ಧೆಗಳಲ್ಲಿ ಹೇಗೆ ಸ್ಥಾನ ಪಡೆಯುತ್ತಾರೆ ಎಂಬುದರ ಆಧಾರದ ಮೇಲೆ ಬಹುಮಾನದ ಹಣವನ್ನು ಸಹ ನೀಡುತ್ತದೆ. ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ $768,000 ಡಾಲರ್​ ಘೋಷಣೆ ಮಾಡಿದೆ.

ಮಲೇಷ್ಯಾ: ಇಲ್ಲಿಯ ಕ್ರೀಡಾ ಸಚಿವಾಲಯ ಫೆಬ್ರವರಿಯಲ್ಲಿ ಪ್ಯಾರಿಸ್​ ಒಲಿಂಪಿಕ್​ಗೆ ತಲುಪುವ ರಾಷ್ಟ್ರೀಯ ಕ್ರೀಡಾಪಟುಗಳು ಬಯಸಿದ ವಾಹನಗಳು ಮತ್ತು ವಿದೇಶಿ ನಿರ್ಮಿತ ಕಾರನ್ನು ಬಹುಮಾನವಾಗಿ ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದೆ.

ರಷ್ಯಾ: ಚಿನ್ನದ ಪದಕ ವಿಜೇತರಿಗೆ 61 ಸಾವಿರ ಯುಎಸ್​ ಡಾಲರ್​ ನೀಡುವುದರ ಜೊತೆಗೆ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಿಗೆ ಕ್ರಮವಾಗಿ 38 ಸಾವಿರ ಮತ್ತು 26 ಸಾವಿರ ಯುಎಸ್​ ಡಾಲರ್​ ನೀಡಿ ಗೌರವಿಸಲಾಗುತ್ತದೆ.

ಜಪಾನ್​: ಚಿನ್ನದ ಪದಕ ವಿಜೇತರಿಗೆ 45,200 USD, ಬೆಳ್ಳಿಗೆ 18,100 USD, ಕಂಚಿಗೆ 9,045 ಯುಎಸ್​ ಡಾಲರ್​ ನೀಡಲಾಗುತ್ತದೆ.

ಆಸ್ಟ್ರೇಲಿಯಾ: ಚಿನ್ನ 15,000 USD, ಬೆಳ್ಳಿ 11,400 USD, ಕಂಚು 7,600 USD ನೀಡಲಾಗುತ್ತದೆ.

ಇದನ್ನೂ ಓದಿ: ವಿದೇಶಗಳಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಕ್ರೀಡಾಪಟುಗಳಿವರು: ಕರ್ನಾಟಕದ ಆಟಗಾರನಿಗೂ ಅವಕಾಶ - Indian origin in Paris Olympic

ETV Bharat Logo

Copyright © 2024 Ushodaya Enterprises Pvt. Ltd., All Rights Reserved.