ಹೈದರಾಬಾದ್: ಐಪಿಎಲ್ನ 62ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ತುಂಬಾ ವಿಶೇಷವಾಗಿದೆ. ತಮ್ಮ ಹೆಸರಿನಲ್ಲಿ ಎರಡು ದೊಡ್ಡ ದಾಖಲೆಗಳನ್ನು ಅವರು ಬರೆಯಲಿದ್ದು, ಐಪಿಎಲ್ ಇತಿಹಾಸದಲ್ಲಿ ಯಾವೊಬ್ಬ ಆಟಗಾರನೂ ಮಾಡದ ದಾಖಲೆ ಮಾಡುವ ತವಕದಲ್ಲಿದ್ದಾರೆ.
ಕೊಹ್ಲಿ ದಾಖಲೆ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಇಂದಿನ ಪಂದ್ಯ ವಿರಾಟ್ ಕೊಹ್ಲಿ ವೃತ್ತಿ ಜೀವನದ 250ನೇ ಪಂದ್ಯವಾಗಲಿದೆ. ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ನಾಲ್ಕನೇ ಆಟಗಾರ ಎಂಬ ದಾಖಲೆ ಕೊಹ್ಲಿ ಬರೆಯಲಿದ್ದಾರೆ. ಮತ್ತೊಂದೆಡೆ ಐಪಿಎಲ್‌ನಲ್ಲಿ ಒಂದೇ ತಂಡಕ್ಕಾಗಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಮಾಡಲಿದ್ದಾರೆ. ಈ ಮೊದಲು ಐಪಿಎಲ್‌ನಲ್ಲಿ ಯಾವುದೇ ಆಟಗಾರರು ಒಂದೇ ತಂಡಕ್ಕಾಗಿ ಇಷ್ಟು ಪಂದ್ಯಗಳನ್ನು ಆಡಿಲ್ಲ.
ಕೊಹ್ಲಿ ಐಪಿಎಲ್ ದಾಖಲೆ: 2008ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕೊಹ್ಲಿ ಆರ್ಸಿಬಿಯ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೂ ಅವರು 38.71 ಸರಾಸರಿಯಲ್ಲಿ 7897 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 55 ಅರ್ಧ ಶತಕ ಹಾಗೂ 8 ಶತಕಗಳನ್ನು ಅವರು ಸಿಡಿಸಿದ್ದಾರೆ. 113* ಹೈಸ್ಕೋರ್ ಆಗಿದೆ. ಪ್ರಸಕ್ತ ಋತುವಿನಲ್ಲಿ 12 ಪಂದ್ಯಗಳನ್ನು ಆಡಿರುವ ಕೊಹ್ಲಿ 634 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕ ಮತ್ತು 1 ಶತಕ ಸೇರಿದೆ. ಸದ್ಯ ಸೀಸನ್ನ ಹೈಸ್ಕೋರ್ ಆಗಿ ಆರೆಂಜ್ ಕ್ಯಾಪ್ ಅನ್ನು ಹೊಂದಿದ್ದಾರೆ.
ಅತಿಹೆಚ್ಚು ಐಪಿಎಲ್ ಪಂದ್ಯಗಳಾಡಿದ ಆಟಗಾರರು: ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಇದುವರೆಗೂ 262 ಪಂದ್ಯಗಳನ್ನು ಆಡಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ (256), ದಿನೇಶ್ ಕಾರ್ತಿಕ್ (254), ವಿರಾಟ್ ಕೊಹ್ಲಿ (249), ರವೀಂದ್ರ ಜಡೇಜಾ (238) ನಂತರ ಸ್ಥಾನಗಳಲ್ಲಿದ್ದಾರೆ.
ಇದನ್ನೂ ಓದಿ: IPL: ಆರ್ಸಿಬಿ VS ಡೆಲ್ಲಿ ಕಾದಾಟ: ಮಾಡು ಇಲ್ಲ ಮಡಿ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ - RCB VS DC