ETV Bharat / sports

ಕಠಿಣ 4ನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು: 2ನೇ ಸ್ಥಾನದಲ್ಲಿ ಕನ್ನಡಿಗ! - HIGHEST SCORE 4TH INNINGS - HIGHEST SCORE 4TH INNINGS

ಟೆಸ್ಟ್​ ಪಂದ್ಯದ ಕಠಿಣ ಇನ್ನಿಂಗ್ಸ್​ ಎನಿಸಿಕೊಂಡಿರುವ 4ನೇ ಇನ್ನಿಂಗ್ಸ್​ನಲ್ಲಿ ಭಾರತೀಯ ಈ ಆಟಗಾರರು ಅತೀ ಹೆಚ್ಚು ರನ್​ಗಳಿಸಿ ಗಮನ ಸೆಳೆದಿದ್ದಾರೆ. ಈ ಪಟ್ಟಿಯ 2ನೇ ಸ್ಥಾನದಲ್ಲಿ ಕನ್ನಡಿ ಕ್ರಿಕೆಟರ್ ಕೂಡ​ ಇದ್ದಾರೆ. ಅವರು ಯಾರೆಂದು ಈ ಕೆಳಗೆ ತಿಳಿಯಿರಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Getty Images)
author img

By ETV Bharat Sports Team

Published : Sep 30, 2024, 6:04 PM IST

Updated : Sep 30, 2024, 6:26 PM IST

ಹೈದರಾಬಾದ್​: ಟೆಸ್ಟ್ ಪಂದ್ಯಗಳು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ನ ಕೌಶಲ್ಯ, ತಂತ್ರ ಮತ್ತು ತಾಳ್ಮೆ ಪರೀಕ್ಷಿಸುತ್ತವೆ. ಅದರಲ್ಲೂ ಟೆಸ್ಟ್​ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗೆ ಬ್ಯಾಟಿಂಗ್ ಮಾಡುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆಟದ ಪರಿಸ್ಥಿತಿಗಳು, ಪಿಚ್‌ನ ಸವೆತ ಮತ್ತು ಬೌಲ್​ ತಿರುಗುವಿಕೆ ಹೆಚ್ಚಾಗಿರುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಷ್ಟಕರವಾಗಿರುತ್ತದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೇ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಆಡಿರುವ ಸ್ಮರಣೀಯ ಇನ್ನಿಂಗ್ಸ್‌ಗಳು ಇಂದಿಗೂ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆನಪಿನಲ್ಲಿ ಅಚ್ಚೊತ್ತಿವೆ. ಹಾಗಾದರೆ ಬನ್ನಿ ನಾಲ್ಕನೇ ಇನ್ನಿಂಗ್ಸ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್​ ಯಾರೆಂದು ಇದೀಗ ತಿಳಿದುಕೊಳ್ಳೋಣ.

1. ಸುನಿಲ್​ ಗಾವಸ್ಕರ್: ಭಾರತ ಕ್ರಿಕೆಟ್​ ಕಂಡ ಲೆಜೆಂಡರಿ ಆಟಗಾರರಲ್ಲಿ​ ಸುನಿಲ್ ಗಾವಸ್ಕರ್ ಕೂಡ ಒಬ್ಬರಾಗಿದ್ದಾರೆ. ಇವರು 1979ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆಸ ಟೆಸ್ಟ್​ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 221 ರನ್​ಗಳನ್ನು ಚಚ್ಚಿದ್ದರು. ಇದು ಅವರ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಈ ಇನ್ನಿಂಗ್ಸ್​ನಲ್ಲಿ ಮೊದಲು ಚೇತನ್ ಚೌಹಾಣ್ (80) ಜೊತೆಗೂಡಿ ಮೊದಲ ವಿಕೆಟ್‌ಗೆ 213 ರನ್ ಸೇರಿಸಿದರು ಮತ್ತು ನಂತರ ಎರಡನೇ ವಿಕೆಟ್‌ಗೆ ದಿಲೀಪ್ ವೆಂಗ್‌ಸರ್ಕರ್ (52) ಜೊತೆ ಸೇರಿ 153 ರನ್ ಕಲೆಹಾಕಿದರು. ಅವರ ಈ 490 ನಿಮಿಷಗಳ ಇನ್ನಿಂಗ್ಸ್​ನಲ್ಲಿ 21 ಬೌಂಡರಿಗಳು ಸೇರಿವೆ.

ಸುನಿಲ್​ ಗಾವಸ್ಕರ್​
ಸುನಿಲ್​ ಗಾವಸ್ಕರ್​ (ANI)

2. ಕೆಎಲ್​ ರಾಹುಲ್​: ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ಕನ್ನಡಿಗ ಕೆಎಲ್​ ರಾಹುಲ್ ಇದ್ದಾರೆ. ಇವರು 2018ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ 149ರನ್ ಗಳಿಸಿದ್ದರು. 464 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಕೆಎಲ್ ರಾಹುಲ್, ರಿಷಭ್​ ಪಂತ್ ಜೊತೆಗೂಡಿ ಉತ್ತಮ ಸ್ಕೋರ್​ ಕಲೆಹಾಕಿದ್ದರು. ಆದರೆ, ಇಂಗ್ಲೆಂಡ್ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಕೆಎಲ್ ರಾಹುಲ್​ ಅವರ ವಿಕೆಟ್ ಪಡೆದು ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಂತಿಮವಾಗಿ ಈ ಪಂದ್ಯವನ್ನು ಭಾರತ 118 ರನ್‌ಗಳಿಂದ ಸೋಲನುಭವಿಸಿತು.

ಕೆಎಲ್​ ರಾಹುಲ್
ಕೆಎಲ್​ ರಾಹುಲ್ (IANS)

3. ದಿಲೀಪ್ ವೆಂಗ್‌ಸರ್ಕರ್: 1979ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ದಿಲೀಪ್ ವೆಂಗ್‌ಸರ್ಕರ್ 146 ರನ್ ಗಳಿಸಿದ್ದರು. ಇದು ಅವರ ಅತ್ಯಂತ ಸ್ಮರಣೀಯ ಪ್ರದರ್ಶನವಾಗಿತ್ತು, ಅವರ ಈ ಇನ್ನಿಂಗ್ಸ್​ನಿಂದ ಭಾರತ ​390 ಗಡಿ ತಲುಪಿತ್ತು. ಡ್ರಾ ಸಾಧಿಸಲು ಭಾರತಕ್ಕೆ ಇನ್ನೂ 26 ರನ್ ಗಳ ಅಗತ್ಯವಿದ್ದ ಸಮಯದಲ್ಲಿ ದಿಲೀಪ್​ ರನ್​ ಔಟ್​ಗೆ ಬಲಿಯಾದರು​. ಇದರಿಂದ ಭಾರತ ಈ ಪಂದ್ಯವನ್ನು ಕೈಚೆಲ್ಲಿತು.

4. ವಿರಾಟ್ ಕೊಹ್ಲಿ: 2014-15ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ 86.50 ಸರಾಸರಿಯಲ್ಲಿ 692 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 115 ರನ್ ಗಳಿಸಿದ್ದರೇ. ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯದ ಮಾರಕ ಬೌಲರ್‌ಗಳಾದ ಮಿಚೆಲ್ ಜಾನ್ಸನ್, ಪೀಟರ್ ಸಿಡ್ಲ್, ನಾಥನ್ ಲಿಯಾನ್ ಅವರನ್ನು ಎದುರಿಸಿ 141 ರನ್ ಚಚ್ಚಿದ್ದರು. ಆದರೆ ಯಾವೊಬ್ಬ ಆಟಗಾರನಿಂದ ಸರಿಯಾದ ಬೆಂಬಲ ಸಿಗದ ಕಾರಣ ಭಾರತ 48 ರನ್‌ಗಳಿಂದ ಪರಾಭವಗೊಂಡಿತ್ತು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)

5. ಸಚಿನ್​ ತೆಂಡೂಲ್ಕರ್​: ಪಾಕಿಸ್ತಾನ ವಿರುದ್ಧ 136ರನ್ ಗಳಿಸುವ ಮೂಲಕ ಸಚಿನ್ ತಮ್ಮ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್ ಆಡಿದ್ದರು. 12 ವರ್ಷಗಳ ನಂತರ ಪಾಕಿಸ್ತಾನ ಭಾರತಕ್ಕೆ ಭೇಟಿ ನೀಡಿದ್ದ ಐತಿಹಾಸಿಕ ಸಂದರ್ಭದಲ್ಲಿ ಸಚಿನ್​ ಈ ಸಾಧನೆ ಮಾಡಿದ್ದರು. ಈ ವೇಳೆ ಪಾಕಿಸ್ತಾನವು ವಿಶ್ವದ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿತ್ತು. ವಾಸಿಂ, ವಕಾರ್, ಸಕ್ಲೇನ್ ಮುಷ್ತಾಕ್ ಅವರಂತಹ ಬೌಲರ್‌ಗಳು ಎದುರಾಳಿ ತಂಡಗಳಿಗೆ ಮಾರಕವಾಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಸಚಿನ್ ಸಮಯೋಚಿತ ಆಟವಾಡಿದರು. ಬೆನ್ನುನೋವಿನಿಂದ ಬಳಲುತ್ತಿದ್ದರೂ ಕುಗ್ಗದ ಸಚಿನ್ ಭರ್ಜರಿ ಶತಕ ಬಾರಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು.

6. ವಿಜಯ್ ಹಜಾರೆ: 1949ರಲ್ಲಿ ಮುಂಬೈನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕೊನೆಯ ಪಂದ್ಯದಲ್ಲಿ ಭಾರತ ಗೆಲುವಿಗೆ 361 ರನ್‌ಗಳ ಅಗತ್ಯವಿತ್ತು. ಕೇವಲ 81 ರನ್‌ಗಳಿಗೆ ತಂಡ ಎರಡು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಪಂದ್ಯವನ್ನು ಗೆಲ್ಲುವುದು ಕಠಿಣ ಕೆಲಸವಾಗಿತ್ತು. ಈ ವೇಳೆ ಬ್ಯಾಟಿಂಗ್​ ಬಂದ ವಿಜಯ್ ಹಜಾರೆ ಸಮಯೋಚಿತ ಪ್ರದರ್ಶನ ತೋರಿ 122 ರನ್​ಗಳ ಸಿಡಿಸಿ ತಂಡವನ್ನು 355ರ ಗಡಿಗೆ ಕೊಂಡೊಯ್ದಿದ್ದರು.

ಯುವರಾಜ್​ ಸಿಂಗ್​
ಯುವರಾಜ್​ ಸಿಂಗ್​ (Getty Images)

7. ಯುವರಾಜ್ ಸಿಂಗ್: ಈ ಎಡಗೈ ಬ್ಯಾಟ್ಸ್‌ಮನ್ 2006ರಲ್ಲಿ ಪಾಕಿಸ್ತಾನದ ವಿರುದ್ಧ 122 ರನ್ ಗಳಿಸಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಿನ 2005-06ರ ಟೆಸ್ಟ್​ ಸರಣಿಯ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಭಾರತ ಪಾಕ್​ ವಿರುದ್ಧ 341 ರನ್‌ಗಳಿಂದ ಹೀನಾಯ ಸೋಲನುಭವಿಸಿತ್ತು.

ರಿಷಭ್​ ಪಂತ್​
ರಿಷಭ್​ ಪಂತ್​ (IANS)

8. ರಿಷಭ್​ ಪಂತ್: 2018ರ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧದ ​ಸರಣಿ ಮೂಲಕ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದ ರಿಷಭ್​ ಪಂತ್ ಕೊನೆಯ ಪಂದ್ಯದಲ್ಲಿ​ ​114ರನ್​ಗಳ ಇನ್ನಿಂಗ್ಸ್​ ಆಡಿದ್ದರು. ಆದರೆ ಭಾರತ ಅದಾಗಲೆ ಸರಣಿಯನ್ನು ಕಳೆದುಕೊಂಡಿತ್ತು. ಕೊನೆಯ ಪಂದ್ಯವನ್ನೂ ಭಾರತ 118 ರನ್‌ಗಳಿಂದ ಸೋತಿತ್ತು.

ಇದನ್ನೂ ಓದಿ: 2ನೇ ಟೆಸ್ಟ್: ರೋಹಿತ್​ ಶರ್ಮಾ - ಸಿರಾಜ್​ ಸ್ಟನ್ನಿಂಗ್​ ಕ್ಯಾಚ್​ಗೆ ಅಭಿಮಾನಿಗಳು ಫಿದಾ; ವಿಡಿಯೋ ವೈರಲ್​​ - Rohit Siraj stunning Catch

Last Updated : Sep 30, 2024, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.