ನವದಹೆಲಿ: ಅಮೆರಿಕನ್ ಶಾಟ್ ಪುಟ್ ಅಥ್ಲೀಟ್ ರೇಯಾನ್ ಕ್ರೂಗರ್ ಪ್ಯಾರಿಸ್ ಒಲಿಂಪಿಕ್ನಲ್ಲಿ ಗೆದ್ದ ಚಿನ್ನದ ಪದಕವನ್ನು ತನ್ನ ನಾಯಿಗೆ ತೊಡಿಸುವ ಮೂಲಕ ಮುಂದಿನ ಲಾಸ್ ಏಂಜಲೀಸ್ ಒಲಿಂಪಿಕ್ಗೆ ತಯಾರಿ ಆರಂಭಿಸಿದ್ದಾರೆ.
3 time Olympic Gold Medalist from the USA has already started preparing for the 2028 Los Angeles Olympics. pic.twitter.com/NWYpjGaPRa
— Mufaddal Vohra (@mufaddal_vohra) August 10, 2024
3 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಮೆರಿಕನ್ ಅಥ್ಲೀಟ್ ರೇಯಾನ್ ಕ್ರೌಸರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಮುಂದಿನ ತಯಾರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾವು ಅಭ್ಯಾಸದಲ್ಲಿ ತೊಡಗಿದ್ದು, ಮುಂಭಾಗದಲ್ಲಿ ಅವರು ಸಾಕು ನಾಯಿ ಚಿನ್ನದ ಪದಕ ಧರಿಸಿಕೊಂಡು ತನ್ನ ಮಾಲೀಕನ ಅಭ್ಯಾಸವನ್ನು ವೀಕ್ಷಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅದಕ್ಕೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
3 time Olympic Gold Medalist from the USA has already started preparing for the 2028 Los Angeles Olympics. pic.twitter.com/NWYpjGaPRa
— Mufaddal Vohra (@mufaddal_vohra) August 10, 2024
ಅವರು ಮೂರು ಬಾರಿ ಚಿನ್ನದ ಪದಕ ವಿಜೇತರಾಗಲು ಇದೇ ಕಾರಣ ಎಂದು ಒಬ್ಬ ಬಳಕೆದಾರರು ವಿಡಿಯೋ ಕಾಮೆಂಟ್ನಲ್ಲಿ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ಚಾಂಪಿಯನ್ ಆಗಲು ಈ ರೀತಿಯ ಅಭ್ಯಾಸ ಅಗತ್ಯ ಎಂದು ಬರೆದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ನಲ್ಲಿ ಈ ಬಾರಿ ರೇಯಾನ್ ಸತತ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ಅವರು ಟೋಕಿಯೊ ಮತ್ತು ರಿಯೊ ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಇದನ್ನೂ ಓದಿ: ವಿಶ್ವದ 10 ಶ್ರೀಮಂತ ಕ್ರಿಕೆಟ್ ಮಂಡಳಿಗಳು ಯಾವುವು ಎಂದು ನಿಮಗೆ ಗೊತ್ತಾ? - Richest Cricket Boards