Indian bowler retirement: ಟೀಂ ಇಂಡಿಯಾದ ವೇಗದ ಬೌಲರ್ ಮತ್ತು ವಿರಾಟ್ ಕೊಹ್ಲಿಯ ಸಹ ಆಟಗಾರ ಕ್ರಿಕೆಟ್ಗೆ ನಿವೃತ್ತ ಘೋಷಿಸಿದ್ದಾರೆ. ಟೀಂ ಇಂಡಿಯಾ ಪರ ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ್ದ ಇವರು 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದಷ್ಟೇ ಅಲ್ಲದೇ 55ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ್ದರು.
ಯಾರಿವರು ಟೀಂ ಇಂಡಿಯಾದ ವೇಗದ ಬೌಲರ್ : ಈ ಹಿಂದೆ ಆರ್ಸಿಬಿಯ ಸ್ಟಾರ್ ಬೌಲರ್ ಆಗಿದ್ದ ಇವರು ಬಳಿಕ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಒಟ್ಟು 55 ಐಪಿಎಲ್ ಪಂದ್ಯಗಳನ್ನು ಆಡಿ 58 ವಿಕೆಟ್ಗಳನ್ನು ಉರುಳಿಸಿದ್ದರು. 29 ರನ್ಗಳಿಗೆ 4 ವಿಕೆಟ್ ಪಡೆದಿದ್ದು ಐಪಿಎಲ್ನಲ್ಲಿ ಇವರ ಬೆಸ್ಟ್ ಇನ್ನಿಂಗ್ಸ್ ಆಗಿತ್ತು. ಮೇ 19 2022ರಂದು ಇವರು ಗುಜರಾತ್ ಟೈಟಾನ್ಸ್ ಪರ ಕೊನೆಯ ಐಪಿಎಲ್ ಪಂದ್ಯವನ್ನಾಡಿದ್ದರು.
ಹೌದು ನಾವು ಹೇಳುತ್ತಿರುವು ವಿರಾಟ್ ಕೊಹ್ಲಿಯ ಸಹ ಆಟಗಾರ ಟೀಂ ಇಂಡಿಯಾದ ವೇಗದ ಬೌಲರ್ ಸಿದ್ದಾರ್ಥ್ ಕೌಲ್ ಕುರಿತು. ಹೌದು, ಟೀಂ ಇಂಡಿಯಾದ ವೇಗದ ಬೌಲರ್ ಆಗಿದ್ದ ಸಿದ್ದಾರ್ಥ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 2018ರಲ್ಲಿ ಇಂಗ್ಲೆಂಡ್ ವಿರುದ್ಧ ODI ಪಂದ್ಯದೊಂದಿಗೆ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಇವರು ಅದೇ ವರ್ಷ ಸೆಪ್ಟೆಂಬರ್ 25 ರಂದು ಅಫ್ಘಾನಿಸ್ತಾನ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಕೊನೆಯ ಬಾರಿಗೆ 2019ರಂದು ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯವನ್ನಾಡಿದ್ದರು. ಇದು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಐಪಿಎಲ್ನಲ್ಲಿ ಆಡಿದ್ದ ಸಿದ್ದಾರ್ಥ ಕೌಲ್ ಬಳಿಕ ಐಪಿಎಲ್ ನಲ್ಲಿ ಮುಂದುವರೆದ ಅವರು ತಮ್ಮ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಇದರಲ್ಲದೆ ಕೌಲ್ 88 ಪ್ರಥಮ ದರ್ಜೆ ಕ್ರಿಕೆಟ್ಗಳನ್ನು ಆಡಿ 297 ವಿಕೆಟ್ಳನ್ನು ಉರುಳಿಸಿದ್ದಾರೆ. 2023-24ರ ಸೈಯದ್ ಅಲಿ ಮುಷ್ತಾಕ್ ಟ್ರೋಫಿಯಲ್ಲೂ 10 ಪಂದ್ಯಗಳನ್ನು ಆಡಿದ್ದ ಅವರು 16 ವಿಕೆಟ್ ಪಡೆದಿದ್ದಾರೆ. ವಿಜಯ ಹಜಾರೇ ಟ್ರೋಫಿಯಲ್ಲೂ 6 ಪಂದ್ಯಗಳನ್ನು ಆಡಿ 19 ವಿಕೆಟ್ ಕಿತ್ತಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಕೌಲ್: 2023ರಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಕೌಲ್, ಇತ್ತೀಚೆಗೆ ಮುಕ್ತಾಯಗೊಂಡ 2025ರ ಹರಾಜಿನಲ್ಲೂ ಅನ್ಸೋಲ್ಡ್ ಆಟಗಾರರ ಪಟ್ಟಿಗೆ ಸೇರಿದ್ದರು. 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಂಡರ್ -19ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಕೌಲ್ ಗಾಯದ ಸಮಸ್ಯೆಯಿಂದಾಗಿ 5 ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಅವರಿಗೆ ಕ್ರಿಕೆಟ್ನಲ್ಲಿ ಹೆಚ್ಚಿನ ಅವಕಾಶಗಳು ಸಿಗದೇ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಕಣ್ಮರೆಯಾದರು. ಇದೀಗ ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ: ಮಹಾ ದುರಂತ!; ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಆಲ್ರೌಂಡರ್ ಸಾವು: ಶೋಕ ಸಾಗರದಲ್ಲಿ ಕ್ರೀಡಾಲೋಕ!