ETV Bharat / sports

ಮೊದಲ ಟಿ20 ವಿಶ್ವಕಪ್​ಗೆ ಅಣಿಯಾಗುತ್ತಿರುವ ಯುವ ಆಟಗಾರರು; ಚುಟುಕು ವಿಶ್ವಕಪ್‌ನಲ್ಲಿ ಇವರೇ ಟ್ರಂಪ್ ಕಾರ್ಡ್ - T20 World Cup 2024 - T20 WORLD CUP 2024

T20 World cup 2024: ಈ ಬಾರಿಯ ಚುಟುಕು ವಿಶ್ವಕಪ್‌ನಲ್ಲಿ ಟ್ರಂಪ್ ಕಾರ್ಡ್ ಎಂದು ಕರೆಯಲ್ಪಡುವ ಹಲವು ಯುವ ಆಟಗಾರರು ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ. ಅದರಲ್ಲಿ ಭಾರತದ ಯುವ ಆಟಗಾರರೂ ಸೇರಿದ್ದಾರೆ.

T20 World cup 2024 these 8 players including yashasvi jaiswal will play t20 wc for first time
ಭಾರತೀಯ ಕ್ರಿಕೆಟ್​ ತಂಡ (IANS)
author img

By ETV Bharat Karnataka Team

Published : May 28, 2024, 6:05 PM IST

ನವದೆಹಲಿ: ಬರುವ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಹಲವು ಆಟಗಾರರು ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ. ಹೊಸ ಚಿಗುರು ಹಳೆ ಬೇರು ಎಂಬಂತೆ ಈ ಚುಟುಕು ವಿಶ್ವಕಪ್​​ನಲ್ಲಿ ವಿವಿಧ ದೇಶಗಳ ಅನುಭವಿ ಆಟಗಾರರ ಜತೆಗೆ ಹಲವು ಯುವ ಆಟಗಾರರು ಕೂಡ ಚಮಕ್​ ನೀಡುವ ಉತ್ಸಾಹದಲ್ಲಿದ್ದಾರೆ. ಅದರಲ್ಲಿ ಭಾರತ ತಂಡ ಕೂಡ ಹೊರತಾಗಿಲ್ಲ. ಅನುಭವಿ ಆಟಗಾರರ ಜೊತೆ ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಹಾಗಾಗಿ ಯಾವ ಯಾವ ದೇಶದ, ಯಾರೆಲ್ಲ ಆಟಗಾರರು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ ಆಡುತ್ತಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಯಶಸ್ವಿ ಜೈಸ್ವಾಲ್ (ಭಾರತ): ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್​ಗೆ ಇದು ಮೊದಲ ಟಿ20 ವಿಶ್ವಕಪ್. ಕಳೆದ ಹಲವು ದಿನಗಳಿಂದ ಉತ್ತಮ ಲಯದಲ್ಲಿರುವ ಜೈಸ್ವಾಲ್, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. 17 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 502 ರನ್ ಗಳಿಸಿರುವ ಜೈಸ್ವಾಲ್, ಟಿ20 ವಿಶ್ವಕಪ್​ನಲ್ಲಿ ಆಡುವ ನಿರೀಕ್ಷೆ ಹೊಂದಿದ್ದಾರೆ.

ಹ್ಯಾರಿ ಬ್ರೂಕ್ (ಇಂಗ್ಲೆಂಡ್): ಇಂಗ್ಲೆಂಡ್ ಕ್ರಿಕೆಟ್ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಕೂಡ ಮೊದಲ ಬಾರಿಗೆ T20 ವಿಶ್ವಕಪ್ ಆಡುತ್ತಿರುವ ಕ್ರೀಡಾಪಟು. 25 ವರ್ಷದ ಈ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿ. ಬ್ರೂಕ್ ಇಂಗ್ಲೆಂಡ್ ಪರ 30 ಪಂದ್ಯಗಳ 27 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳ ಸಹಾಯದಿಂದ 545 ರನ್ ಗಳಿಸಿದ್ದಾರೆ. ತಂಡ ಕೂಡ ಇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ.

ತೌಹೀದ್ ಹೃದಯ್ (ಬಾಂಗ್ಲಾದೇಶ): ಬಾಂಗ್ಲಾದೇಶ ಕ್ರಿಕೆಟ್ ತಂಡದ ಯುವ ಎಡಗೈ ಬ್ಯಾಟರ್​ ತೌಹಿದ್ ಹೃದಯ್​ಗೂ ಇದು ಮೊದಲ ವಿಶ್ವಕಪ್. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ. ಇವರು ಬಾಂಗ್ಲಾದೇಶ ಪರ 21 ಟಿ20 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳೊಂದಿಗೆ 454 ರನ್ ಗಳಿಸಿದ್ದಾರೆ.

ಕನ್ವರ್ಪಾಲ್ ತತ್ಗುರ್ (ಕೆನಡಾ): ಕೆನಡಾ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಕನ್ವರ್ಪಾಲ್ ತತ್ಗುರ್ ಅವರು ತಮ್ಮ ಬೌಲಿಂಗ್​ ವೇಗಕ್ಕೆ ಹೆಸರುವಾಸಿ. ಬರುವ ಟಿ20 ವಿಶ್ವಕಪ್​ನಲ್ಲಿ ಕನ್ವರ್ಪಾಲ್ ತಮ್ಮ ತಂಡಕ್ಕೆ ನಿರೀಕ್ಷಿತ ಗೆಲುವು ತಂದುಕೊಡಬಲ್ಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕನ್ವರ್ಪಾಲ್ ತಮ್ಮ ವೇಗದ ಬೌಲಿಂಗ್​ ಮತ್ತು ಅಮೆರಿಕದ ಬೌನ್ಸಿ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಸಾಕಷ್ಟು ಕಾಡಬಹುದು.

ವಿಲ್ ಜಾಕ್ವೆಸ್ (ಇಂಗ್ಲೆಂಡ್): ಇಂಗ್ಲೆಂಡ್‌ನ ಅಪಾಯಕಾರಿ ಆಲ್‌ರೌಂಡರ್ ವಿಲ್ ಜಾಕ್ವೆಸ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಿಂದ ಹೆಚ್ಚು ಗಮನ ಸೆಳೆಯಬಲ್ಲ ಆಟಗಾರರಲ್ಲಿ ಒಬ್ಬರು. 25 ವರ್ಷದ ಈ ಆಟಗಾರ ಇಂಗ್ಲೆಂಡ್ ಪರ 12 ಟಿ20 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 218 ರನ್ ಗಳಿಸಿದ್ದಾರೆ. ಇದಲ್ಲದೇ ಈ ಆಫ್ ಸ್ಪಿನ್ನರ್ ಹೆಸರಿನಲ್ಲಿ 1 ವಿಕೆಟ್ ಕೂಡ ಇದೆ.

ರಚಿನ್ ರವೀಂದ್ರ (ನ್ಯೂಜಿಲೆಂಡ್): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಎಡಗೈ ಸ್ಟಾರ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಕೂಡ ಮೊದಲ ಬಾರಿಗೆ T20 ವಿಶ್ವಕಪ್ ಆಡುತ್ತಿರುವ ಕ್ರೀಡಾಪಟು. 20 ಪಂದ್ಯಗಳಲ್ಲಿ 1 ಅರ್ಧಶತಕದ ಸಹಾಯದಿಂದ ಒಟ್ಟು 214 ರನ್ ಗಳಿಸಿದ್ದಾರೆ. ತಮ್ಮ ಚಮತ್ಕಾರದ ಬೌಲಿಂಗ್​ ದಾಳಿಯಿಂದ 11 ವಿಕೆಟ್ ಸಹ ಪಡೆದಿದ್ದಾರೆ.

ಟ್ರಿಸ್ಟಾನ್ ಸ್ಟಬ್ಸ್ (ದಕ್ಷಿಣ ಆಫ್ರಿಕಾ): 23 ವರ್ಷದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಟ್ರಿಸ್ಟಾನ್ ಸ್ಟಬ್ಸ್ ಕೂಡ ಮೊದಲ ಬಾರಿಗೆ T20 ವಿಶ್ವಕಪ್ ಆಡುತ್ತಿರುವ ಕ್ರೀಡಾಪಟುಗಳಲ್ಲಿ ಒಬ್ಬರು. 17 ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 239 ರನ್ ಗಳಿಸಿರುವ ಟ್ರಿಸ್ಟಾನ್ ಸ್ಟಬ್ಸ್, ಈ ವಿಶ್ವಕಪ್‌ನ ಅಪಾಯಕಾರಿ ಆಟಗಾರ ಕೂಡ ಹೌದು. ಉತ್ತಮ ಲಯದಲ್ಲಿರುವ ಟ್ರಿಸ್ಟಾನ್ ತಂಡಕ್ಕೆ ವರದಾನವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ದೀಪೇಂದ್ರ ಸಿಂಗ್ ಐರಿ (ನೇಪಾಳ): ವಿಶ್ವದ ಅತ್ಯುತ್ತಮ ಆಲ್ ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ನೇಪಾಳದ ದೀಪೇಂದ್ರ ಸಿಂಗ್ ಐರಿ ಕೂಡ ಆಡುತ್ತಿರುವುದು ಮೊದಲ T20 ವಿಶ್ವಕಪ್ ಆಗಿದೆ. ಇತ್ತೀಚೆಗೆ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಸಂಚಲನ ಸೃಷ್ಟಿಸಿರುವ ದೀಪೇಂದ್ರ, ತಂಡಕ್ಕೆ ತಮ್ಮದೇಯಾದ ಕೊಡುಗೆ ನೀಡಬಹುದು. ಇವರು 64 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 9 ಅರ್ಧಶತಕಗಳೊಂದಿಗೆ 1626 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್​ ಹುದ್ದೆಗಾಗಿ ಕೆಕೆಆರ್​ ಫ್ರಾಂಚೈಸಿ ಬಿಡ್ತಾರಾ ಗೌತಮ್​ ಗಂಭೀರ್​? - Gautam Gambhir

ETV Bharat Logo

Copyright © 2025 Ushodaya Enterprises Pvt. Ltd., All Rights Reserved.