ETV Bharat / sports

T20 ವಿಶ್ವಕಪ್​ಗೆ ಕಿವೀಸ್​ ತಂಡ ಪ್ರಕಟ: ವಿಲಿಯಮ್ಸನ್​ಗೆ ನಾಯಕತ್ವ, ರಚಿನ್​ ರವೀಂದ್ರಗೆ ಸ್ಥಾನ - T20 ವಿಶ್ವಕಪ್​

ಜೂನ್​​ 2 ರಿಂದ ಟಿ-20 ವಿಶ್ವಕಪ್​ ಟೂರ್ನಿ ಆರಂಭವಾಗಲಿದ್ದು, ನ್ಯೂಜಿಲ್ಯಾಂಡ್​ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

T20 ವಿಶ್ವಕಪ್​ಗೆ ಕಿವೀಸ್​ ತಂಡ ಪ್ರಕಟ
T20 ವಿಶ್ವಕಪ್​ಗೆ ಕಿವೀಸ್​ ತಂಡ ಪ್ರಕಟ
author img

By ETV Bharat Karnataka Team

Published : Apr 29, 2024, 1:47 PM IST

ನವದೆಹಲಿ: ಜೂನ್​ 2 ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್‌ಗೆ ಇನ್ನು 31 ದಿನಗಳು ಬಾಕಿ ಉಳಿದಿವೆ. ಎಲ್ಲ ಕ್ರಿಕೆಟ್​​ ಮಂಡಳಿಗಳು ತನ್ನ ತಂಡವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಬ್ಯುಸಿ ಆಗಿವೆ. ಈ ಮಧ್ಯೆ ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿ 2024ರ ಟಿ-20 ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ನಾಯಕರಾಗಿದ್ದ ಕೇನ್ ವಿಲಿಯಮ್ಸನ್​ರನ್ನೇ ಇಲ್ಲಿ ಮುಂದುವರಿಸಲಾಗಿದೆ.

ಹಿರಿಯ ಆಟಗಾರ ವಿಲಿಯಮ್ಸನ್​ಗೆ ಇದು 6ನೇ ಟಿ-20 ವಿಶ್ವಕಪ್ ಆಗಿದೆ. ಇದರಲ್ಲಿ ನಾಲ್ಕು ವಿಶ್ವಕಪ್‌ಗಳಲ್ಲಿ ನಾಯಕರಾಗಿ ನೇಮಕವಾಗಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಅತಿಹೆಚ್ಚು ವಿಕೆಟ್​ ಪಡೆದ ಖ್ಯಾತಿಯ ಹಿರಿಯ ಬೌಲರ್ ಟಿಮ್​ ಸೌಥಿಗೆ ಸ್ಥಾನ ನೀಡಲಾಗಿದೆ. ಇದು ಅವರ 7ನೇ ವರ್ಲ್ಡ್​ ಕಪ್​ ಆಗಿದೆ. ಜೊತೆಗೆ ಟ್ರೆಂಟ್​ ಬೌಲ್ಟ್​ಗೂ ಅವಕಾಶ ನೀಡಲಾಗಿದ್ದು, ಇದು ಅವರ ಐದನೇ ಟಿ20 ವಿಶ್ವಕಪ್​ ಆಗಿದೆ. ಮ್ಯಾಟ್ ಹೆನ್ರಿ ಮತ್ತು ಆಲ್‌ರೌಂಡರ್ ರಚಿನ್ ರವೀಂದ್ರ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದ ಟಿ-20 ವಿಶ್ವಕಪ್‌ ಆಡದ ಆಟಗಾರರಾಗಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ತಂಡದ ಕೋಚ್ ಗ್ಯಾರಿ ಸ್ಟೀಡ್​, ವಿಶ್ವಕಪ್​ಗೆ ತಂಡವನ್ನು ರಚನೆ ಮಾಡುವುದು ಸವಾಲಿನ ಸಂಗತಿ. ಆಯ್ಕೆಯಾದ ಎಲ್ಲ ಆಟಗಾರರಿಗೆ ಅಭಿನಂದನೆ. ವಿಶ್ವ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸುವುದು ವಿಶೇಷವೇ ಸರಿ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿನ ಪಿಚ್​ಗಳು ವಿಭಿನ್ನವಾಗಿವೆ. ಪರಿಸ್ಥಿತಿಗೆ ಹೊಂದಿಕೊಂಡು ವಿಶ್ವಕಪ್​ ಗೆಲ್ಲುವ ಗುರಿ ನಮ್ಮದಾಗಬೇಕು ಎಂದರು.

ಈವರೆಗೂ ಐಸಿಸಿ ಟೂರ್ನಿಗಳನ್ನು ಆಡದ ಮ್ಯಾಟ್​ ಹೆನ್ರಿ ಮತ್ತು ರಚಿನ್​ ರವೀಂದ್ರಗೆ ಅವಕಾಶ ನೀಡಲಾಗಿದೆ. ಇಬ್ಬರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಜೂನ್​ 2 ರಿಂದ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಆರಂಭವಾಗಲಿದೆ. 20 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ತಲಾ 5 ತಂಡಗಳನ್ನು 4 ಗುಂಪುಗಳಲ್ಲಿ ರಚಿಸಲಾಗಿದೆ.

ನ್ಯೂಜಿಲೆಂಡ್ ವಿಶ್ವಕಪ್ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್​ವೇ, ಲೂಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡೇರಿಯಲ್​ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ಸ್ ಸೌಥಿ.

ಇದನ್ನೂ ಓದಿ: 6 ನಿಮಿಷ, 10 ಎಸೆತದಲ್ಲಿ 50 ರಿಂದ 100 ರನ್ ಬಾರಿಸಿದ ವಿಲ್​ ಜಾಕ್ಸ್​: ಸಿಡಿಲಬ್ಬರದ ಬ್ಯಾಟಿಂಗ್​ಗೆ ಕೊಹ್ಲಿ ಫಿದಾ - will jacks fastest hundred

ETV Bharat Logo

Copyright © 2024 Ushodaya Enterprises Pvt. Ltd., All Rights Reserved.