ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು​ - ಟಿ 20 ವಿಶ್ವಕಪ್ ಎತ್ತಿಹಿಡಿದ ರೋಹಿತ್​ ಪಡೆ​ LIVE UPDATE - IND vs SA final match

author img

By ETV Bharat Karnataka Team

Published : Jun 29, 2024, 7:45 PM IST

Updated : Jun 29, 2024, 10:54 PM IST

ಟಿ-20 ವಿಶ್ವಕಪ್​ ಫೈನಲ್​ ಕದನ
ಟಿ-20 ವಿಶ್ವಕಪ್​ ಫೈನಲ್​ ಕದನ (ETV Bharat)

ಹೈದರಾಬಾದ್​: ಟಿ20 ವಿಶ್ವಕಪ್‌ 2024ರ ಅಂತಿಮ ಹಣಾಹಣಿಯಲ್ಲಿ ಭಾರತ ಟಿ 20 ವಿಶ್ವಕಪ್​ ಗೆದ್ದು ಬೀಗಿದೆ. ಅಂತಿಮವಾಗಿ ಐಸಿಸಿ ಕಪ್​ ಗೆದ್ದು ಭಾರತ ತನ್ನ ಪಾರಮ್ಯ ಮೆರೆದಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿ ಆಗಿದ್ದವು. ಬ್ರಿಡ್ಜ್​ಟೌನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಆರಂಭಿಕ ಹಿನ್ನಡೆಯ ನಡುವೆ ಗೆದ್ದು ಬೀಗಿದೆ. ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಬ್ಯಾಟಿಂಗ್​ ಆಯ್ದುಕೊಂಡಿದ್ದರು.

LIVE FEED

11:28 PM, 29 Jun 2024 (IST)

ವಿಶ್ವಕಪ್​ ಗೆದ್ದ ಭಾರತ

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು​ - ಟಿ 20 ವಿಶ್ವಕಪ್ ಎತ್ತಿಹಿಡಿದ ರೋಹಿತ್​ ಪಡೆ. ಹಾರ್ದಿಕ್, ಬುಮ್ರಾ, ಅರ್ಷದೀಪ್​ ಮತ್ತು ಕೊಹ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. 14 ವರ್ಷಗಳ ಬಳಿಕ ಭಾರತ ತಂಡ ಪ್ರಮುಖ ಪಂದ್ಯದಲ್ಲಿ ಗೆದ್ದು ಟ್ರೋಪಿ ಎತ್ತಿ ಹಿಡಿದಿದೆ.

11:25 PM, 29 Jun 2024 (IST)

ದಕ್ಷಿಣ ಆಫ್ರಿಕಾದ 7ನೇ ವಿಕೆಟ್​ ಪತನ: ಅದ್ಬುತ ಕ್ಯಾಚ್​ ಪಡೆದ ಸೂರ್ಯಕುಮಾರ್​ ಯಾದವ್​

11:22 PM, 29 Jun 2024 (IST)

ಅಂತಿಮ ಓವರ್​

ಅಂತಿಮ ಓವರ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 16ರನ್​​ಗಳು ಬೇಕು

11:13 PM, 29 Jun 2024 (IST)

ಅಗತ್ಯ ಸಮಯದಲ್ಲಿ ವಿಕೆಟ್​ ಕಬಳಿಸಿದ ಬುಮ್ರಾ

ದಕ್ಷಿಣ ಆಫ್ರಿಕಾದ ಆರನೇ ವಿಕೆಟ್​ ಪತನ- ಭಾರತಕ್ಕೆ ಬೂಸ್ಟ್​

10:54 PM, 29 Jun 2024 (IST)

ದುಬಾರಿಯಾದ ಕುಲದೀಪ್​ ಯಾದವ್​

ಸ್ಪಿನ್ನರ್​ ಕುಲದೀಪ್​ ಯಾದವ್​ ದುಬಾರಿ. 4 ಓವರ್​ಗಳಲ್ಲಿ 45 ರನ್​ ಚಚ್ಚಿಸಿಕೊಂಡ ಯಾದವ್​. 14 ಓವರ್​ನಲ್ಲಿ 14 ರನ್​

10:49 PM, 29 Jun 2024 (IST)

13ನೇ ಓವರ್​ನಲ್ಲಿ ಆಫ್ರಿಕಾ ಶಾಕ್​; ಡಿ ಕಾಕ್​ ಔಟ್​

ಅರ್ಶದೀಪ್​ ಸಿಂಗ್​ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡ ಕ್ವಿಂಟನ್​ ಡಿ ಕಾಕ್​. 31 ಎಸೆತಗಳಲ್ಲಿ 39 ರನ್​ ಗಳಿಸಿ ಔಟ್​. ಆಫ್ರಿಕಾದ ನಾಲ್ಕನೇ ವಿಕಟ್​​ ಪತನ.

10:44 PM, 29 Jun 2024 (IST)

ಕ್ಲಾಸಿನ್​ ಅಬ್ಬರ ಮುಂದುವರಿಕೆ

12ನೇ ಓವರ್​ನಲ್ಲಿ ಒಂದು ಸಿಕ್ಸರ್​ ಸಮೇತ 8 ರನ್​ ಗಳಿಸಿದ ಆಫ್ರಿಕಾ. ಕ್ಲಾಸಿನ್​ ಅಬ್ಬರ ಮುಂದುವರಿಕೆ. ಗೆಲ್ಲಲು 48 ಬಾಲ್​ನಲ್ಲಿ 76

10:41 PM, 29 Jun 2024 (IST)

11ನೇ ಓವರ್​ನಲ್ಲಿ ರನ್​ ಸೋರಿಕೆ

ಕ್ಲಾಸಿನ್​ ಅಬ್ಬರಕ್ಕೆ ರವೀಂದ್ರ ಜಡೇಜಾರ 11 ನೇ ಓವರ್​ನಲ್ಲಿ ರನ್​ ಸೋರಿಕೆ. 13 ರನ್​ ಬಿಟ್ಟುಕೊಟ್ಟ ಸ್ಪಿನ್ನರ್​

10:34 PM, 29 Jun 2024 (IST)

ದಕ್ಷಿಣ ಆಫ್ರಿಕಾ 10 ಓವರ್​ಗಳಲ್ಲಿ 81 ರನ್​

ಹಾರ್ದಿಕ್​ಗೆ ಸಿಕ್ಸರ್​ ಎತ್ತಿದ ಹೆನ್ರಿಚ್​ ಕ್ಲಾಸಿನ್​, 10 ಓವರ್​ಗಳಲ್ಲಿ 3 ವಿಕೆಟ್​ಗೆ 81 ರನ್​. ಗೆಲ್ಲಲು 60 ಎಸೆತಗಳಲ್ಲಿ 96 ರನ್​ ಬೇಕು

10:30 PM, 29 Jun 2024 (IST)

ಅಬ್ಬರಿಸಿದ ಸ್ಟಬ್ಸ್​ ನಿಶ್ಯಬ್ಧ

ಸಿಕ್ಸರ್​ಗಳ ಮೂಲಕ ಅಬ್ಬರಿಸುತ್ತಿದ್ದ ಟ್ರಿಸ್ಟನ್​ ಸ್ಟಬ್ಸ್​ ಅಕ್ಷರ್​ ಪಟೇಲ್​ ಬೌಲಿಂಗ್​ನಲ್ಲಿ ಕ್ಲೀನ್​ಬೌಲ್ಡ್​​. 9 ಓವರ್​ಗಳಲ್ಲಿ ಆಫ್ರಿಕಾ 3 ವಿಕೆಟ್​ಗೆ 71 ರನ್​

10:06 PM, 29 Jun 2024 (IST)

ಪೆವಿಲಿಯನ್​ ಹಾದಿ ಹಿಡಿದ ಹೆನ್ರಿಕ್​, ಮಾರ್ಕಮ್​

ಪವರ್​ ಪ್ಲೇನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಟೀಂ ಇಂಡಿಯಾ ಬೌಲರ್​ಗಳು ಶಾಕ್​ ನೀಡಿದ್ದಾರೆ. ಎರಡು ಓವರ್​ಗೆ ಪ್ರಮುಖ ಎರಡು ವಿಕೆಟ್​ ಉರುಳಿಸಿ ಬೌಲಿಂಗ್​ನಲ್ಲಿ​ ಮೋಡಿ ಮಾಡಿದ್ದಾರೆ. ಹೆಂಡ್ರಿಕ್ಸ್​​​ ಮತ್ತು ಮಾರ್ಕಮ್​ ಪೆವಿಲಿಯನ್​ ಹಾದಿ ಹಿಡಿದರು. ಬುಮ್ರಾ ಮತ್ತು ಅರ್ಷದೀಪ್​ ತಲಾ ಒಂದು ವಿಕೆಟ್​ ಪಡೆದರು.

9:38 PM, 29 Jun 2024 (IST)

ಕೊನೆಯ ಓವರ್​ನಲ್ಲಿ ದುಬೆ, ಜಡೇಜಾ ಔಟ್​

ಕೊನೆಯ ಓವರ್​ನಲ್ಲಿ ಸಿಡಿದ ದುಬೆ. ಬೌಂಡರಿ ಬಾರಿಸಿ ಬಳಿಕ ಔಟ್​. 2 ರನ್​ ಗಳಿಸಿ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಔಟ್​. ಭಾರತ 20 ಓವರ್​ಗಳಲ್ಲಿ 176.

9:29 PM, 29 Jun 2024 (IST)

ದುಬೆ- ವಿರಾಟ್​ ಫಿಫ್ಟಿ ಪಾಲುದಾರಿಕೆ; 76 ರನ್​ಗೆ ವಿರಾಟ್​ ಔಟ್​

32 ಎಸೆತಗಳಲ್ಲಿ 51 ರನ್​ ಪಾಲುದಾರಿಕೆ ಮೆರೆದ ಶಿವಂ ದುಬೆ ಮತ್ತು ವಿರಾಟ್​. 95 ಮೀಟರ್​ ದೂರ ಸಿಕ್ಸರ್​ ಬಾರಿಸಿದ ಕೊಹ್ಲಿ. ದೊಡ್ಡ ಹೊಡೆತಕ್ಕೆ ಕೈ ಹಾಕಿ ಜಾನ್ಸನ್​ಗೆ ವಿರಾಟ್​ ಕೊಹ್ಲಿ ಔಟ್​. ಮೊದಲ ಎಸೆತದಲ್ಲೇ ಹಾರ್ದಿಕ್​ ಬೌಂಡರಿ.

9:24 PM, 29 Jun 2024 (IST)

18ನೇ ಓವರ್​ನಲ್ಲಿ ವಿರಾಟ್​ ಗುಡುಗು

ರಬಾಡಗೆ ಮೊದಲ ಎಸೆತದಲ್ಲಿ ಸಿಕ್ಸರ್​ ಬಾರಿಸಿದ ವಿರಾಟ್​, ಬಳಿಕ ಬೌಂಡರಿ. 16 ರನ್​ ಗಳಿಕೆ- 4 ವಿಕೆಟ್​ಗೆ 150 ರನ್​

9:19 PM, 29 Jun 2024 (IST)

ವಿರಾಟ್​ ಕೊಹ್ಲಿ ಅರ್ಧಶತಕ, 134-4 ರನ್​

50 ರನ್​ ಪೂರೈಸಿದ ವಿರಾಟ್​ ಕೊಹ್ಲಿ. ಫೈನಲ್​ನಲ್ಲಿ ಮಹತ್ವದ ಬ್ಯಾಟಿಂಗ್​. ಟಿ20 ವಿಶ್ವಕಪ್​ನಲ್ಲಿ ಮೊದಲ ಫಿಫ್ಟಿ. ಶಿವಂ ದುಬೆ ಬೌಂಡರಿ. 134-4 ರನ್​

9:15 PM, 29 Jun 2024 (IST)

ಶಿವಂ ದುಬೆ ಬ್ಯಾಟಿಂಗ್​​ ದರ್ಬಾರ್ ಶುರು

16ನೇ ಓವರ್​ನಲ್ಲಿ ಶಿವಂ ದುಬೆ ಗುಡುಗು. ತಬ್ರಿಜ್​ ಶಮ್ಸಿಗೆ ಬೌಂಡರಿ ಬಾರಿಸಿದ ದುಬೆ. 18 ರನ್​ ಗಳಿಕೆ. 126-4 ರನ್​

9:13 PM, 29 Jun 2024 (IST)

ಶಿವಂ ದುಬೆ ಸಿಕ್ಸರ್​, ರನ್​ ಗಳಿಕೆ ಹೆಚ್ಚಳ

15 ಓವರ್​ನಲ್ಲಿ ಸಿಕ್ಸರ್​ ಬಾರಿಸಿದ ಶಿವಂ ದುಬೆ , ಮಾರ್ಕೊ ಜಾನ್ಸನ್​ಗೆ ಹೊಡೆತ. 10 ರನ್ ಗಳಿಕೆ. 118-4 ರನ್​

9:04 PM, 29 Jun 2024 (IST)

ಅಕ್ಷರ್​ ಪಟೇಲ್​ ರನ​ಔಟ್​

14ನೇ ಓವರ್​ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ. ರನ್​ ಔಟ್​ ಆಗಿ ಅರ್ಧಶತಕದಿಂದ ತಪ್ಪಿಸಿಕೊಂಡ ಅಕ್ಷರ್​ ಪಟೇಲ್​. ಕ್ವಿಂಟನ್​ ಡಿ ಕಾಕ್​ರ ನೇರ ಎಸೆತಕ್ಕೆ ಔಟ್​. 31 ಎಸೆತಗಳಲ್ಲಿ 47 ಗಳಿಸಿದ್ದ ಅಕ್ಷರ್​.

8:59 PM, 29 Jun 2024 (IST)

ನೋಕಿಯಾ ಬಿಗಿದಾಳಿ, ರನ್​ ಕುಸಿತ

13 ನೇ ಓವರ್​ನಲ್ಲಿ ಮತ್ತೆ ರನ್​ ಗಳಿಕೆ ಕುಸಿತ. ಉತ್ತಮ ಬೌಲಿಂಗ್​ ದಾಳಿ ಮಾಡಿ 5 ರನ್ ಮಾತ್ರ ಬಿಟ್ಟುಕೊಟ್ಟ ಆ್ಯನ್ರಿಚ್​ ನೋಕಿಯಾ. 98-3

8:55 PM, 29 Jun 2024 (IST)

ಸಿಕ್ಸರ್​​ ಬಾರಿಸಿದ ಅಕ್ಷರ್​ ಪಟೇಲ್​

12ನೇ ಓವರ್​ನಲ್ಲಿ ಸಿಕ್ಸರ್​ ಬಾರಿಸಿದ ಅಕ್ಷರ್​ ಪಟೇಲ್​, ತಬ್ರಿಜ್​ ಶಮ್ಸಿಗೆ ಚಚ್ಚಿದ ಎಡಗೈ ಆಟಗಾರ. ಓವರ್​ನಲ್ಲಿ 11 ರನ್​ ಗಳಿಕೆ. 93ಕ್ಕೆ3. 50 ರನ್​ ಪಾಲುದಾರಿಕೆ ಮಾಡಿದ ವಿರಾಟ್​ ಮತ್ತು ಅಕ್ಷರ್​.

8:50 PM, 29 Jun 2024 (IST)

ರನ್​ ಗಳಿಸಲು ಭಾರತ ಪರದಾಟ

11ನೇ ಓವರ್​​ನಲ್ಲಿ ಮಾರ್ಕೊ ಜಾನ್ಸನ್​ ಬಿಗಿ ದಾಳಿ. 7 ರನ್​​ ಮಾತ್ರ ಬಿಟ್ಟುಕೊಟ್ಟ ಬೌಲರ್​. ಭಾರತ 82 ಕ್ಕೆ 3

8:43 PM, 29 Jun 2024 (IST)

10 ಓವರ್​ಗಳಲ್ಲಿ ಭಾರತ 75 ರನ್​ ಗಳಿಕೆ

ತಬ್ರಿಜ್​ ಶಮ್ಸಿ ಬೌಲಿಂಗ್​ ಅಟ್ಯಾಕ್​, ರನ್​ ಗಳಿಸಲು ಬಿಡದ ಹರಿಣಗಳು, 10 ಓವರ್​ಗಳಲ್ಲಿ ಭಾರತ 75 ಕ್ಕೆ 3

8:39 PM, 29 Jun 2024 (IST)

ಕೇಶವ್​ ಮಹಾರಾಜ್​ಗೆ ಚಚ್ಚಿದ ಅಕ್ಷರ್​

ಮೂರು ವಿಕೆಟ್​ ಕಿತ್ತ ಬಳಿಕ ಒತ್ತಡ ಹೇರಲು ಆರಂಭಿಸಿದ ದಕ್ಷಿಣ ಆಫ್ರಿಕಾ. ಕೇಶವ್​ ಮಹಾರಾಜ್​ರ 9ನೇ ಓವರ್​ನಲ್ಲಿ ಸಿಕ್ಸರ್​ ಬಾರಿಸಿದ ಅಕ್ಷರ್​ ಪಟೇಲ್​, 3 ಒಂಟಿ, 1 ಸಿಕ್ಸರ್​ ಸೇರಿ 9 ರನ್​ ಬಂದವು. ಭಾರತ 68/3

8:35 PM, 29 Jun 2024 (IST)

ಅಕ್ಷರ್​ ಪಟೇಲ್​ ಸಿಕ್ಸರ್​: ಭಾರತ 59/3

8ನೇ ಓವರ್​ನಲ್ಲಿ ಆಡ್ಯಂ ಮಾರ್ಕ್ರಮ್​ ಎಸೆತದಲ್ಲಿ 10 ರನ್​ ಬಂದವು. ಅಕ್ಷರ್​ ಪಟೇಲ್​ 3 ನೇ ಎಸೆತವನ್ನು ಸಿಕ್ಸರ್​ ಬಾರಿಸಿದರು. ಭಾರತ 3 ವಿಕೆಟ್​ಗೆ 59 ರನ್​ ಬಾರಿಸಿದೆ.

8:33 PM, 29 Jun 2024 (IST)

ದಕ್ಷಿಣ ಆಫ್ರಿಕಾ ಬಿಗುವಿನ ದಾಳಿ

7ನೇ ಓವರ್​ನ ಎಸೆದ ಆ್ಯನ್ರಿಚ್​ ನೋಕಿಯಾ ಬಿಗುವಿನ ದಾಳಿ ಮಾಡಿ ಕೇವಲ 4 ರನ್​ ಮಾತ್ರ ನೀಡಿದರು.

8:27 PM, 29 Jun 2024 (IST)

ಪವರ್​ಪ್ಲೇನಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ

6ನೇ ಓವರ್​ನಲ್ಲಿ ನಾಯಕ ಐಡೆನ್​ ಮಾರ್ಕ್ರಮ್​ ಬೌಲಿಂಗ್​ ದಾಳಿಗೆ ಇಳಿದರು. ಸ್ಪಿನ್​ ದಾಳಿ ಕೈ ಹಿಡಿಯುತ್ತಿರುವ ಕಾರಣ ದಕ್ಷಿಣ ಆಫ್ರಿಕಾ ನಾಯಕ ತಾವೇ ಬೌಲಿಂಗ್​ ಮಾಡಿ 6 ಎಸೆತಗಳಲ್ಲಿ 6 ರನ್​ ನೀಡಿದರು. 6 ಓವರ್​ಗಳ ಪವರ್​ಪ್ಲೇನಲ್ಲಿ ಹರಿಣಗಳು ಮೇಲುಗೈ ಸಾಧಿಸಿದರು.

8:21 PM, 29 Jun 2024 (IST)

5ನೇ ಓವರ್​: ಸೂರ್ಯಕುಮಾರ್​ ಔಟ್​, ಮತ್ತೆ ಒತ್ತಡದಲ್ಲಿ ಭಾರತ

5ನೇ ಓವರ್​ನಲ್ಲಿ ಸೂರ್ಯಕುಮಾರ್​ ಯಾವದ್​ ಔಟ್​ ಆದರು. ರಬಾಡಾ ಬೌಲಿಂಗ್​ನಲ್ಲಿ ದೊಡ್ಡ ಹೊಡೆತ ಬಾರಿಸಿ ಕೈ ಸುಟ್ಟುಕೊಂಡರು. ಸೆಮಿಫೈನಲ್​ ಹೀರೋ ಅಕ್ಷರ್​ ಪಟೇಲ್​ ಕಣಕ್ಕಿಳಿದಿದ್ದು, ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇದರಿಂದ ತಂಡ 5 ಓವರ್​ಗೆ 3 ವಿಕೆಟ್​ ಕಳೆದುಕೊಂಡು 39 ರನ್​ ಗಳಿಸಿದೆ.

8:21 PM, 29 Jun 2024 (IST)

4ನೇ ಓವರ್​​: ಕೇಶವ್​ ಮಹಾರಾಜ್​ಗೆ ವಿರಾಟ್​ ಕೊಹ್ಲಿ ಬೌಂಡರಿ

4ನೇ ಓವರ್​ನಲ್ಲಿ ಕೇಶವ್​ ಮಹಾರಾಜ್​ಗೆ ವಿರಾಟ್​ ಕೊಹ್ಲಿ ಒಂದು ಬೌಂಡರಿ ಚಚ್ಚಿದರು. ಮೊದಲ ಎಸೆತದಲ್ಲಿ 2 ರನ್​ ಬಂದರೆ, 4 ಎಸೆತ ಬೌಂಡರಿ ಸೇರಿತು. ಉಳಿದ ನಾಲ್ಕು ಎಸೆತಗಳು ರನ್​ ಬರಲಿಲ್ಲ.

8:16 PM, 29 Jun 2024 (IST)

ರಬಾಡ ಗುಡ್​ ಬೌಲಿಂಗ್​

ರಬಾಡ ಎಸೆದ ಮೂರನೇ ಓವರ್​ನಲ್ಲಿ 3 ರನ್​ಗಳು ಮಾತ್ರ ಬಂದವು. ಎರಡು ವಿಕೆಟ್​ ಕಳೆದುಕೊಂಡ ಭಾರತ ತುಸು ಒತ್ತಡಕ್ಕೆ ಒಳಗಾಯಿತು. ಕೊನೆಯ ಎಸೆತದಲ್ಲಿ ಸೂರ್ಯಕುಮಾರ್​ ಯಾದವ್​ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. 32 ಯಾರ್ಡ್​ನಿಂದ ಹೊರಗೆ ಬಿದ್ದ ಕಾರಣ ಔಟ್​ನಿಂದ ಬಚಾವಾದರು.

8:12 PM, 29 Jun 2024 (IST)

ಹಿಟ್​ಮ್ಯಾನ್​​ ರೋಹಿತ್​ ಶರ್ಮಾ, ರಿಷಬ್​ ಪಂತ್​ ಔಟ್​

ಎಡಗೈ ಸ್ಪಿನ್ನರ್​ ಕೇಶವ್​ ಮಹಾರಾಜ್​ ಎಸೆತದ 2ನೇ ಓವರ್​ನಲ್ಲಿ ಭಾರತಕ್ಕೆ ಡಬಲ್​ ಶಾಕ್​ ಉಂಟಾಯಿತು. ಮೊದಲೆರಡು ಎಸೆತದಲ್ಲಿ ಬೌಂಡರಿ ಬಾರಿಸಿದ ರೋಹಿತ್​ ಮೂರನೇ ಎಸೆತದಲ್ಲಿ ಕ್ಯಾಚ್​ ನೀಡಿ ಔಟಾದರು. ಬಳಿಕ ಬಂದ ರಿಷಬ್​ ಪಂತ್​ ಸ್ವೀಪ್​ ಮಾಡಲು ಹೋಗಿ ವಿಕೆಟ್​​ ಕೀಪರ್​​ಗೆ ಕ್ಯಾಚ್​ ನೀಡಿದರು. ಭಾರತ 23 ರನ್​ಗೆ 2 ವಿಕೆಟ್​ ಕಳೆದುಕೊಂಡಿದೆ.

8:06 PM, 29 Jun 2024 (IST)

ಶುರುವಾದ ವಿರಾಟ್​ ವೀರಾವೇಷ, ರೋಹಿತ್​ ಶರ್ಮಾ ಔಟ್​

ಟೂರ್ನಿಯಲ್ಲಿ ವೈಫಲ್ಯ ಕಂಡಿರುವ ವಿರಾಟ್​ ಕೊಹ್ಲಿ ಮಹತ್ವದ ಫೈನಲ್​ ಪಂದ್ಯದ ಮೊದಲ ಓವರ್​ನಲ್ಲಿ ಸಿಡಿಯಲು ಆರಂಭಿಸಿದ್ದಾರೆ. ಮಾರ್ಕೊ ಜಾನ್ಸನ್​ ಎಸೆದ ಮೊದಲ ಓವರ್​ನ 2, 3 ಮತ್ತು ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇದರಿಂದ ತಂಡ ಮೊದಲ ಓವರ್​ನಲ್ಲಿ 15 ರನ್​ ಕೊಳ್ಳೆ ಹೊಡೆಯಿತು. 2ನೇ ಓವರ್​ನಲ್ಲಿ ರೋಹಿತ್​ ಶರ್ಮಾ (9) ಎರಡು ಬೌಂಡರಿ ಬಾರಿಸಿ ಔಟ್​ ಆದರು.

7:55 PM, 29 Jun 2024 (IST)

180 ರನ್​ ಗಳಿಸಿದಲ್ಲಿ ಗೆಲುವಿನ ನಿರೀಕ್ಷೆ ಹೆಚ್ಚು

ಟಾಸ್​ ಗೆದ್ದ ತಂಡಗಳು ಕಳೆದ 8 ಟಿ-20 ವಿಶ್ವಕಪ್​ಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿವೆ. 2010 ರ ಬಳಿಕ ಹಗಲು ಹೊತ್ತಿನಲ್ಲಿ ನಡೆಯುತ್ತಿರುವ ಮೊದಲ ಫೈನಲ್​ ಪಂದ್ಯ ಇದಾಗಿದೆ. ಪವರ್​ಪ್ಲೇ ಅತ್ಯಂತ ನಿರ್ಣಾಯಕವಾಗಿದೆ. ಇತ್ತಂಡಗಳು ಗೆಲುವಿನ ತಂತ್ರಗಳನ್ನು ರೂಪಿಸಿವೆ.

ನಿರೀಕ್ಷೆಯಂತೆ ಭಾರತ ತಂಡ ಮೊದಲು ಬ್ಯಾಟಿಂಗ್​ ಮಾಡಲು ಸಜ್ಜಾಗಿದೆ. ಹೆಚ್ಚಿನ ರನ್ ಗಳಿಸಿ ಹರಿಣಗಳ ಮೇಲೆ ಒತ್ತಡ ಹೇರುವ ತಂತ್ರ ಇದಾಗಿದೆ. ಈ ಪಿಚ್​​ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಭಾರತ 181 ರನ್ ಗಳಿಸಿತ್ತು. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 201 ರನ್ ಗಳಿಸಿತ್ತು. ಇಲ್ಲಿನ ಬೌಂಡರಿ ಲೈನ್​ ಚಿಕ್ಕದಾಗಿದೆ. 180 ರ ಆಸುಪಾಸಿನಲ್ಲಿ ರನ್​ ಗಳಿಸುವ ತಂಡಕ್ಕೆ ಗೆಲುವಿನ ಪ್ರಮಾಣ ಹೆಚ್ಚಿದೆ.

Last Updated : Jun 29, 2024, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.