ETV Bharat / sports

ಟಿ20 ವಿಶ್ವಕಪ್​: ಚೇಸ್ ಅಜೇಯ ಆಟ; ನ್ಯೂಗಿನಿಯಾ ವಿರುದ್ಧ ಸೋಲಿನಿಂದ ಪಾರಾದ ವಿಂಡೀಸ್​ - WI vs PNG

ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್​​ ರೋಸ್ಟನ್ ಚೇಸ್ ಪ್ರಮುಖ ಪಾತ್ರ ವಹಿಸಿದರು.

WEST INDIES DEFEATS PAPUA NEW GUINEA
ನ್ಯೂಗಿನಿಯಾ ವಿರುದ್ಧ ಗೆದ್ದ ವೆಸ್ಟ್​ ಇಂಡೀಸ್​ (Image: AP)
author img

By ANI

Published : Jun 3, 2024, 9:19 AM IST

ಗಯಾನಾ (ವೆಸ್ಟ್ ಇಂಡೀಸ್): ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ 5 ವಿಕೆಟ್‌ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್​​ ರೋಸ್ಟನ್ ಚೇಸ್ ಹಾಗೂ ಆಲ್​ರೌಂಡರ್​​ ಆಂಡ್ರೆ ರಸೆಲ್ ಅಜೇಯ ಆಟವಾಡಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದುಕೊಟ್ಟರು.

ಟಾಸ್​ ಗೆದ್ದ ವೆಸ್ಟ್​ ಇಂಡೀಸ್​ ತಂಡವು ಪಪುವಾ ನ್ಯೂಗಿನಿಯಾವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಕೆರಿಬಿಯನ್ನರ ಬಿಗುವಿನ ಬೌಲಿಂಗ್​ ಎದುರು ಪರದಾಡಿದ ಎದುರಾಳಿ ಬ್ಯಾಟರ್​ಗಳು ವೇಗವಾಗಿ ರನ್​ ಗಳಿಸುವಲ್ಲಿ ವಿಫಲರಾದರು. 34 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ನ್ಯೂಗಿನಿಯಾಗೆ ಮಧ್ಯಮ ಕ್ರಮಾಂಕದಲ್ಲಿ ಸೆಸೆ ಬೌ (50) ಅರ್ಧಶತಕ ಬಾರಿಸಿ ನೆರವಾದರು.

ಇನ್ನುಳಿದಂತೆ ನಾಯಕ ಅಸ್ಸಾದ್​ ವಾಲಾ 21 ಹಾಗೂ ವಿಕೆಟ್​ ಕೀಪರ್​ ಕಿಪ್ಲಿನ್​ ಡೊರಿಗಾ 18 ಎಸೆತಗಳಲ್ಲಿ 27, ಚಾರ್ಲಸ್​ ಅಮಿನಿ 12 ಹಾಗೂ ಚಾದ್​ ಸೊಪರ್​ 10 ರನ್​ ಗಳಿಸಿ ತಂಡಕ್ಕೆ ಕಾಣಿಕೆ ನೀಡಿದರು. 20 ಓವರ್​ಗಳ ಅಂತ್ಯಕ್ಕೆ ನ್ಯೂಗಿನಿಯಾ 8 ವಿಕೆಟ್​ ಕಳೆದುಕೊಂಡು 136 ರನ್​ ಪೇರಿಸಿತು. ವಿಂಡೀಸ್​ ಪರ ಅಂಡ್ರೆ ರಸೆಲ್​, ಅಲ್ಜಾರಿ ಜೋಸೆಫ್​ ತಲಾ ಎರಡು ವಿಕೆಟ್​ ಕಬಳಿಸಿದರು.

137 ರನ್​ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಕೂಡ ಅಬ್ಬರದ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್​​ ಜಾನ್ಸನ್​ ಚಾರ್ಲಸ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ತದನಂತರ ಒಂದಾದ ಬ್ರೆಂಡನ್ ಕಿಂಗ್ (34)​ ಹಾಗೂ ನಿಕೋಲಸ್​ ಪೂರನ್ (27) ನಿಧಾನವಾಗಿ ಆಡಿದರೂ ಕೂಡ ಆರಂಭಿಕ ಆಘಾತದ ಬಳಿಕ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು​. ಇವರಿಬ್ಬರ ವಿಕೆಟ್​ ಪತನದ ಬಳಿಕ ರೋಸ್ಟನ್ ಚೇಸ್ ಜವಾಬ್ದಾರಿಯುತ ಬ್ಯಾಟಿಂಗ್​ ಪ್ರದರ್ಶಿಸಿದರು.

ಈ ನಡುವೆ ನಾಯಕ ವೊವ್ಮನ್ ಪೊವೆಲ್​ (15) ಹಾಗೂ ಶೆರ್ಫನ್​ ರುದರ್ಫೋರ್ಡ್ (2)​ ಔಟಾಗಿದ್ದರಿಂದ 97 ರನ್​ಗೆ 5 ವಿಕೆಟ್​ ಕಳೆದುಕೊಂಡ ವಿಂಡೀಸ್​ ಕೊಂಚ ಒತ್ತಡಕ್ಕೆ ಸಿಲುಕಿತ್ತು. ಬಳಿಕ ಕ್ರೀಸ್​ಗೆ ಬಂದ ಅಂಡ್ರೆ ರಸೆಲ್​ ಸಿಕ್ಸರ್​ ಸಹಿತ ಅಜೇಯ 15 ರನ್​ ಹಾಗೂ ಚೇಸ್​ 42 ರನ್​ಗಳೊಂದಿಗೆ ಒಂದು ಓವರ್​ ಬಾಕಿ ಇರುವಾಗಲೇ ಕೆರಿಬಿಯನ್ನರು ಗೆಲುವಿನ ನಗೆ ಬೀರಿದರು. ಎರಡು ಬಾರಿಯ ಚಾಂಪಿಯನ್​ ತಂಡ 5 ವಿಕೆಟ್​ ಜಯದೊಂದಿಗೆ ಚುಟುಕು ವಿಶ್ವಕಪ್​ನಲ್ಲಿ ಗೆಲುವಿನ ಆರಂಭ ಮಾಡಿದೆ.

ಇದನ್ನೂ ಓದಿ: ಭಾರತ ತಂಡದ ಕೋಚ್ ಆಗುವ ಬಗ್ಗೆ ಗೌತಮ್ ಗಂಭೀರ್ ಮೊದಲ ಪ್ರತಿಕ್ರಿಯೆ - Gautam Gambhir

ETV Bharat Logo

Copyright © 2024 Ushodaya Enterprises Pvt. Ltd., All Rights Reserved.