ಬಾರ್ಬಡೋಸ್ (ವೆಸ್ಟ್ಇಂಡೀಸ್): ಟಿ20 ವಿಶ್ವಕಪ್ನ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸುತ್ತಿದ್ದು, ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ಗೆ ನೆರವಾಗುವ ಬಾರ್ಬಡೋಸ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮೊದಲ ಗೆಲುವಿನ ನಿರೀಕ್ಷೆಯಲ್ಲಿವೆ.
ಸೆಮಿಫೈನಲ್ಗೆ ತಲುಪಲು ಸೂಪರ್-8 ಹಂತದಲ್ಲಿ ಪ್ರತಿ ಪಂದ್ಯವೂ ಮುಖ್ಯವಾಗಿದ್ದು, ಉಭಯ ತಂಡಗಳಿಗೆ ಗೆಲುವು ಅನಿವಾರ್ಯ. ಇಲ್ಲಿ ಗೆದ್ದ ತಂಡ ಸೆಮೀಸ್ ಸಮೀಪಿಸಲಿದೆ. ಗ್ರೂಪ್ 1 ರಲ್ಲಿ ಅಫ್ಘಾನಿಸ್ತಾನಕ್ಕೆ ಕಠಿಣ ಸವಾಲಿದೆ. ಭಾರತದ ಜೊತೆಗೆ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶಗಳನ್ನು ಎದುರಿಸಬೇಕು. ಭಾರತದ ವಿರುದ್ಧ ಗೆದ್ದಲ್ಲಿ ಇನ್ನೆರಡು ತಂಡಗಳಲ್ಲಿ ಒಂದನ್ನು ಸೋಲಿಸಿದರೆ ಸೆಮೀಸ್ ತಲುಪುವುದು ಪಕ್ಕ.
ಇತ್ತ ಭಾರತ ಕೂಡ ಲೀಗ್ ಹಂತದಲ್ಲಿ ದೊಡ್ಡ ಪ್ರದರ್ಶನ ನೀಡಿಲ್ಲ. ಅಪ್ಘನ್ ವಿರುದ್ಧ ಬ್ಯಾಟಿಂಗ್ ಪರಾಕ್ರಮ ತೋರಿಸಬೇಕಿದೆ. ಪಿಚ್ ಸ್ಪಿನ್ಗೆ ನೆರವು ನೀಡಲಿದ್ದು, ಮೊಹಮದ್ ಸಿರಾಜ್ ಬದಲಿಗೆ ಕುಲದೀಪ್ ಯಾದವ್ಗ ಅವಕಾಶ ನೀಡಲಾಗಿದೆ.
ತಂಡಗಳು ಇಂತಿವೆ- ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಹಜರತುಲ್ಲಾ ಝಜೈ, ಗುಲ್ಬದಿನ್ ನೈಬ್, ನಜಿಬುಲ್ಲಾ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್(ನಾಯಕ), ನೂರ್ ಅಹ್ಮದ್, ನವೀನ್ ಉಲ್ ಹಕ್, ಫಜಲ್ಹಕ್ ಫಾರೂಖಿ.
ಇದನ್ನೂ ಓದಿ: ಟಿ-20 ವಿಶ್ವಕಪ್: ಇಂದು ಭಾರತಕ್ಕೆ ಅಫ್ಘಾನಿಸ್ತಾನ ಸವಾಲು; ಗೆಲುವಿನ ವಿಶ್ವಾಸದಲ್ಲಿ ರೋಹಿತ್ ಪಡೆ - India vs Afghanistan