ETV Bharat / sports

T20 World cup: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1ರನ್​ನ ರೋಚಕ ಗೆಲುವು - SA BEAT NEP - SA BEAT NEP

ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾ 1ರನ್​ನಿಂದ ರೋಚಕ ಗೆಲುವು ಸಾಧಿಸಿದೆ.

ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1ರನ್​ನ ರೋಚಕ ಗೆಲುವು
ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1ರನ್​ನ ರೋಚಕ ಗೆಲುವು (AP)
author img

By ANI

Published : Jun 15, 2024, 2:53 PM IST

ಕಿಂಗ್ಸ್​ಸ್ಟೌನ್: ಟಿ20 ವಿಶ್ವಕಪ್​ನ 31ನೇ ಪಂದ್ಯದಲ್ಲಿ ನೇಪಾಳದ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿನ ದವಡೆಯಿಂದ ಸ್ವಲ್ಪ ಅಂತರದಲ್ಲೇ ಪಾರಾಗಿ 1 ರನ್​ಗಳಿಂದ ಗೆಲುವು ಸಾಧಿಸಿದೆ. ಕಿಂಗ್ಸ್​​ಸ್ಟೌನ್​​ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೇಪಾಳ ಗೆಲ್ಲುತ್ತದೆ ಎಂದೇ ಅಂದಾಜಿಸಲಾಗಿತ್ತು. ಕೊನೆಯ ಬೌಲ್​ವರೆಗೂ ಹೋರಾಟ ನಡೆಸಿ ಅಂತಿಮವಾಗಿ 1 ರನ್​ನಿಂದ ಸೋಲನುಭವಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ದಕ್ಷಿಣ ಆಫ್ರಿಕಾ ರಿಝ್​ ಹೆಂಡ್ರಿಕ್ಸ್​ (40) ಮತ್ತು ಸ್ಟಬ್ಸ್​ (27) ಬ್ಯಾಟಿಂಗ್​ ನೆರವಿನಿಂದ 7 ವಿಕೆಟ್​ ನಷ್ಟಕ್ಕೆ 115 ರನ್​ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಇದಕ್ಕುತ್ತರವಾಗಿ ನೇಪಾಳ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್​ ಕಳೆದುಕೊಂಡು 114 ಗಳಿಸಲಷ್ಟೇ ಶಕ್ತವಾಯಿತು.

ನೇಪಾಳಕ್ಕೆ ಕೊನೆಯ 6 ಎಸೆತಗಳಲ್ಲಿ 8 ರನ್‌ಗಳ ಅಗತ್ಯವಿತ್ತು. ಈ ವೇಳೆ ಬಾರ್ಟ್‌ಮ್ಯಾನ್‌ ಭರ್ಜರಿ ಬೌಲಿಂಗ್​ ಮಾಡಿ ಕೇವಲ 6 ರನ್​ಗಳನ್ನು ಮಾತ್ರ ಬಿಟ್ಟುಕೊಟ್ಟು ಒಂದು ವಿಕೆಟ್​ ಅನ್ನು ಪಡೆದು ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಕೊನೆಯ ಎಸೆತದಲ್ಲಿ ನೇಪಾಳಕ್ಕೆ 1 ಎಸೆತದಲ್ಲಿ 2 ರನ್‌ಗಳ ಅಗತ್ಯವಿತ್ತು. ಆದರೆ, ಗುಲ್ಶನ್ ಝಾ ಬೌಲ್​ ಡಾಟ್​ ಮಾಡಿ ರನ್​ ಕಸಿಯಲು ಮುಂದಾಗಿ ರನ್​ಔಟ್​ ಆದರು. ನೇಪಾಳ ಆರಂಭಿಕವಾಗಿ ಸತತ ವಿಕೆಟ್​ಗಳನ್ನು ಕಳೆದುಕೊಂಡಿತು. 35 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು.

ಇದಾದ ಬಳಿಕ ಆಸಿಫ್ ಶೇಖ್ (42) ಮತ್ತು ಅನಿಲ್ ಶಾ (27) ತಂಡಕ್ಕೆ ಆಸರೆಯಾದರು. ಈ ಇಬ್ಬರ ಹೊರತಾಗಿ ಎಲ್ಲಾ ಬ್ಯಾಟರ್​ಗಳು ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ 4 ವಿಕೆಟ್ ಪಡೆದು ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು.

ಇದನ್ನೂ ಓದಿ: ಟಿ20 ವಿಶ್ವಕಪ್​: ಉಗಾಂಡ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನ್ಯೂಜಿಲೆಂಡ್​ - T20 World Cup 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.