ETV Bharat / sports

ಟಿ20 ವಿಶ್ವಕಪ್, ಐಪಿಎಲ್‌ನಲ್ಲಿ ರಿಷಬ್ ಪಂತ್ ಆಡುವ ಸಾಧ್ಯತೆ

author img

By ETV Bharat Karnataka Team

Published : Feb 7, 2024, 5:32 PM IST

ಕಾರು ಅಪಘಾತದಲ್ಲಿ ಬದುಕುಳಿದು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಕ್ರಿಕೆಟರ್​ ರಿಷಬ್​ ಪಂತ್​ ಮುಂಬರುವ ಟಿ20 ವಿಶ್ವಕಪ್, ಐಪಿಎಲ್‌​ನಲ್ಲಿ ಆಡುವ ಸಾಧ್ಯತೆ ಇದೆ.

ರಿಷಬ್​ ಪಂತ್​
ರಿಷಬ್​ ಪಂತ್​

ಮೆಲ್ಬೋರ್ನ್: ಭೀಕರ ರಸ್ತೆ ಅಪಘಾತದಲ್ಲಿ ಅದೃಷ್ಟವಶಾತ್​ ಪಾರಾಗಿ ಒಂದು ವರ್ಷದಿಂದ ವೃತ್ತಿಪರ ಕ್ರಿಕೆಟ್​ನಿಂದ ದೂರ ಉಳಿದಿರುವ ರಿಷಬ್​ ಪಂತ್​ ಟಿ20 ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. 17ನೇ ಆವೃತ್ತಿಯ ಐಪಿಎಲ್​ನಲ್ಲೂ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವ ಕುರಿತು ತಂಡದ ಆಡಳಿತ ಮಂಡಳಿ ಸುಳಿವು ನೀಡಿದೆ.

ಕ್ರೀಡಾ ಮಾಧ್ಯಮವೊಂದರ ಜೊತೆ ಬುಧವಾರ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್​ ರಿಕ್ಕಿ ಪಾಂಟಿಂಗ್​, "ಇಂಡಿಯನ್​ ಪ್ರೀಮಿಯರ್​ ಲೀಗ್​ನ 17ನೇ ಆವೃತ್ತಿಯಲ್ಲಿ ಕ್ರಿಕೆಟರ್​ ರಿಷಬ್​ ಪಂತ್​ ಆಡುವ ವಿಶ್ವಾಸ ಹೊಂದಿದ್ದಾರೆ. ಆದರೆ, ಬ್ಯಾಟರ್​ ಆಗಿ ಮಾತ್ರವೇ ಅಥವಾ ವಿಕೆಟ್​ ಕೀಪರ್​ ಆಗಿಯೂ ಕಣಕ್ಕಿಳಿಯಲಿದ್ದಾರೆಯೇ ಎಂಬುದು ಖಚಿತವಾಗಬೇಕಿದೆ" ಎಂದರು.

ಇಂಪ್ಯಾಕ್ಟ್​ ಪ್ಲೇಯರ್​?: "ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಪಂತ್​ ಓಡಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಿಸಿರಬಹುದು. ಇನ್ನು ಕೆಲವೇ ವಾರಗಳಲ್ಲಿ ಐಪಿಎಲ್​ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಎಡಗೈ ಬ್ಯಾಟರ್ ಆಗಿ​ ತಂಡಕ್ಕೆ ಸೇರಿಸುವ ಬಗ್ಗೆ ವಿಶ್ವಾಸ ಹೊಂದಿದ್ದೇವೆ. ಎಲ್ಲ 14ರಲ್ಲಿ ಅಲ್ಲದೇ ಇದ್ದದ್ದರೂ 10 ಪಂದ್ಯಗಳಲ್ಲಿ ಅವರು ಆಡಲಿದ್ದಾರೆ. ಇಲ್ಲವಾದಲ್ಲಿ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಳಸಿಕೊಳ್ಳುತ್ತೇವೆ" ಎಂದು ಹೇಳಿದರು.

"ಮಾರ್ಚ್​ನಲ್ಲಿ ಐಪಿಎಲ್​ ಆರಂಭವಾಗುವ ನಿರೀಕ್ಷೆ ಇದೆ. ಅಷ್ಟೊತ್ತಿಗಾಗಲೇ ಪಂತ್​ ಫಿಟ್​ ಆಗಿ ತಂಡದ ಬಲ ಹೆಚ್ಚಿಸುವ ಸಾಧ್ಯತೆ ಇದೆ. ಡೆಲ್ಲಿ ತಂಡದ ನಾಯಕನಾಗಿರುವ ಪಂತ್​ ವಿಕೆಟ್ ಕೀಪಿಂಗ್ ಮಾಡಲು ಕಷ್ಟವಾದಲ್ಲಿ ಬ್ಯಾಟರ್ ಆಗಿ ಆಡಬಹುದು. ಅವರು ಎಂತಹ ಡೈನಾಮಿಕ್ ಆಟಗಾರ ಎಂಬುದು ಎಲ್ಲರಿಗೂ ಗೊತ್ತಿದೆ. ಕಳೆದ ವರ್ಷದ ಐಪಿಎಲ್​ ಸೀಸನ್​ನಲ್ಲಿ ಮಿಸ್​ ಮಾಡಿಕೊಂಡೆವು. 13 ತಿಂಗಳ ಹಿಂದೆ ನಡೆದ ಭೀಕರ ಅಪಘಾತದಲ್ಲಿ ಬದುಕುಳಿದಿದ್ದೇ ಪವಾಡ" ಎಂದಿದ್ದಾರೆ.

ಡೇವಿಡ್​ ವಾರ್ನರ್​ ನಾಯಕ: ಒಂದು ವೇಳೆ, ಪಂತ್ ಅಲಭ್ಯವಾದಲ್ಲಿ ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸುತ್ತಾರೆ ಎಂದು ಪಾಂಟಿಂಗ್ ಖಚಿತಪಡಿಸಿದ್ದಾರೆ. ಹಿಂದಿನ ಸೀಸನ್​ ಕೂಡ ಡೆಲ್ಲಿ ತಂಡ ವಾರ್ನರ್ ನಾಯಕತ್ವ ಆಡಿತ್ತು. ಪಾಯಿಂಟ್​ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.

2022 ರ ಡಿಸೆಂಬರ್​​ನಲ್ಲಿ ಕ್ರಿಕೆಟರ್​ ರಿಷಬ್​ ಪಂತ್​ ಭೀಕರ ಕಾರು ಅಪಘಾತಕ್ಕೀಡಾಗಿದ್ದರು. ನಂತರ ಯಾವುದೇ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕ್ರಿಕೆಟಿಗ ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ತಮ್ಮ ಚಟುವಟಿಕೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 'ನನ್ನನ್ನು ಅದೇನೋ ರಕ್ಷಿಸಿತು': ಮೃತ್ಯುವಿಗೆ ಹತ್ತಿರವಾದ ಕ್ಷಣದ ಬಗ್ಗೆ ರಿಷಭ್​ ಪಂತ್ ಮನದಾಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.