ETV Bharat / sports

ಐಪಿಎಲ್​ 2024: ಡೆಲ್ಲಿ ವಿರುದ್ಧ ಶುಭಾರಂಭ ಮಾಡಿದ ಪಂಜಾಬ್​: ನಾಲ್ಕು ವಿಕೆಟ್​ಗಳ ಭರ್ಜರಿ ಜಯ - IPL 2024 - IPL 2024

ಐಪಿಎಲ್​ 2024ರ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪಂಜಾಬ್​ ಕಿಂಗ್ಸ್​ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ಸ್ಯಾಮ್​ ಕರ್ರಾನ್​
ಸ್ಯಾಮ್​ ಕರ್ರಾನ್​
author img

By ETV Bharat Karnataka Team

Published : Mar 23, 2024, 7:25 PM IST

Updated : Mar 23, 2024, 8:56 PM IST

ಮೊಹಾಲಿ : ಚಂಡೀಗಢ್​ನ ಮುಲ್ಲನ್​ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 17ನೇ ಆವೃತ್ತಿ ಐಪಿಎಲ್​ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ 175 ರನ್​ಗಳ ಗುರಿಯನ್ನು ಬೆನ್ನಟ್ಟಿದ್ದ ಪಂಜಾಬ್​ ಕಿಂಗ್ಸ್​ 4 ವಿಕೆಟ್​ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ಟೂರ್ನಿಯಲ್ಲಿ ಪಂಜಾಬ್​ ಶುಭಾರಂಭ ಮಾಡಿದೆ.

ಸ್ಯಾಮ್​ ಕರ್ರನ್​ (63) ಅವರ ಅರ್ಧಶತಕದ ನೆರವಿನಿಂದ ಪಂಜಾಬ್​ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ ಬೌಲಿಂಗ್​ನಲ್ಲಿ ಖಲೀಲ್ ಅಹ್ಮದ್ ಮತ್ತು ಕುಲದೀಪ್ ಯಾದವ್ 2 ವಿಕೆಟ್​ ಹಾಗು ಇಶಾಂತ್ ಶರ್ಮಾ ಒಂದು ಪಡೆದರು. ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದ ಪಂಜಾಬ್​ ನಾಯಕ ಶಿಖರ್​ ಧವನ್, ಡೆಲ್ಲಿ ತಂಡವನ್ನು 174 ರನ್​ಗಳಿಗೆ ಕಟ್ಟಿ ಹಾಕಿದರು. ಡೆಲ್ಲಿ ಪರ ಅಭಿಷೇಕ್​ ಪೂರೆಲ್​ 10 ಬಾಲ್​ಗಳಲ್ಲಿ 32 ರನ್​ಗಳನ್ನು ಗಳಿಸಿದರು. ಹೀಗಾಗಿ ಡೆಲ್ಲಿ ನಿಗದಿತ 9 ವಿಕೆಟ್​ ನಷ್ಟಕ್ಕೆ 174 ರನ್​ಗಳನ್ನು ಗಳಿಸಿತು. ಕೊನೆ ಓವರ್​ನಲ್ಲಿ ದುಬಾರಿಯಾದ ಹರ್ಷಲ್​ ಪಟೇಲ್ ಮತ್ತು ಅರ್ಷ್‌ದೀಪ್ ಸಿಂಗ್ ಪಂಜಾಬ್​ ಪರ ತಲಾ 2 ವಿಕೆಟ್​ ಪಡೆದರು.

ನಂತರ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಂಜಾಬ್​ಗೆ ಶಿಖರ್ ಧವನ್ ಹಾಗು ಜಾನಿ ಬೈರ್‌ಸ್ಟೋ ಪವರ್​ ಫ್ಲೇನಲ್ಲಿ ಉತ್ತಮ ರನ್​ ಗಳಿಸಿ ಕೊಟ್ಟರು. ಆರ್ಕಷಕ ನಾಲ್ಕು ಬೌಂಡರಿ ಸಿಡಿಸಿ ಆಕ್ರಮಕಾರಿಯಾಗಿ ಕಾಣುತ್ತಿದ್ದ ಶಿಖರ್​ ಧವನ್​ (22) ಇಶಾಂತ್​ ಶರ್ಮಾ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್ ಆದರು. ಬಳಿಕ ಕ್ರೀಸ್​ಗೆ ಬಂದ ಪ್ರಭಾಸಿಮ್ರಾನ್ ಸಿಂಗ್​, ಜಾನಿ ಬೈರ್‌ಸ್ಟೋ ಜೊತೆಗೂಡಿದರು. ಆದರೆ, ವಿರ್ಪಯಾಸ ಬೈರ್​ಸ್ಟೋ (9) ರನ್​ ಔಟ್​ ಆದರು.

ಪ್ರಮುಖ ಎರಡು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ ಪಂಜಾಬ್​ಗೆ ಪ್ರಭಾಸಿಮ್ರಾನ್ ಸಿಂಗ್ ಮತ್ತು ಸ್ಯಾಮ್ ಕರ್ರಾನ್ ಚೇತರಿಕೆ ಆಟವಾಡುವ ಮೂಲಕ ರನ್​ ಕಲೆ ಹಾಕಿದರು. ಉತ್ತಮವಾಗಿ ಆಡುತ್ತಿದ ಪ್ರಭಾಸಿಮ್ರಾನ್ ಸಿಂಗ್ (26) ವಿಕೆಟ್​ ಅನ್ನು ಕುಲದೀಪ್ ಯಾದವ್ ಪಡೆಯುವಲ್ಲಿ ಯಶಸ್ವಿಯಾದರು. ಬಳಿಕ ಜಿತೇಶ್ ಶರ್ಮಾ (9) ಕೂಡ ಕುಲದೀಪ್​ಗೆ ವಿಪೆಟ್​ ಒಪ್ಪಿಸಿದರು.

ಈ ಹಂತದಲ್ಲಿ ಒಂದಾದ ಇಂಗ್ಲೆಂಡ್​ ಆಟಗಾರರಾದ ಸ್ಯಾಮ್ ಕರ್ರಾನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ನಿಧನಗತಿಯಲ್ಲಿ ಬ್ಯಾಟ್​ ಬೀಸಿದರು. ಡೆಲ್ಲಿ ಬೌಲಿಂಗ್​ ವಿಭಾಗದ ಯೋಜನೆ ಅರಿತ ಇಬ್ಬರು ಅರ್ಧಶತಕ ಜೊತೆಯಾಟವಾಡಿದರು. ಗೆಲುವಿನ ಸಮೀಪ ಪಂಜಾಬ್​ ಅನ್ನು ತರುವಲ್ಲಿ ಈ ಜೋಡಿ ಸಫಲವಾಯಿತು. ಇನ್ನೊಂದೆಡೆ, ಆರು ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಸಿದ ಸ್ಯಾಮ್ ಕರ್ರಾನ್ ಅರ್ಧಶತಕ ಪೂರೈಸಿ ಖಲೀಲ್ ಅಹ್ಮದ್ ಗೆ ವಿಕೆಟ್​ ನೀಡಿದರು. ಇದೇ ಓವರ್​ನಲ್ಲಿ ಶಶಾಂಕ್ ಸಿಂಗ್ ಸಹಾ ಶೂನ್ಯಕ್ಕೆ ಔಟ್​ ಆಗಿ ಹೊರ ನಡೆದರು. ಅಂತಿಮವಾಗಿ ಎರಡು ಬೌಂಡರಿ ಮತ್ತು 3 ಸಿಕ್ಸರ್​ ಹೊಡೆದು ಲಿವಿಂಗ್‌ಸ್ಟೋನ್ (38) ಮತ್ತು ಹರ್‌ಪ್ರೀತ್ ಬ್ರಾರ್ ಅಜೇಯರಾಗುವ ಮೂಲಕ ಪಂಜಾಬ್​ ಜಯ ಗಳಿಸುವಂತೆ ನೋಡಿಕೊಂಡರು.

ತಂಡಗಳು : ಡೆಲ್ಲಿ ಕ್ಯಾಪಿಟಲ್ಸ್ : ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್, ರಿಷಭ್​ ಪಂತ್(ನಾಯಕ ಮತ್ತು ವಿಕೀ), ರಿಕಿ ಭುಯಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಸುಮಿತ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ

ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೀ) ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್, ಶಶಾಂಕ್ ಸಿಂಗ್

ಇದನ್ನೂ ಓದಿ : ಐಪಿಎಲ್​ 2024: ಪಂಬಾಬ್​​​ಗೆ 175 ರನ್​ಗಳ ಟಾರ್ಗೆಟ್​; ಡೆಲ್ಲಿ ಪರ ಕೊನೆಯಲ್ಲಿ ಅಬ್ಬರಿಸಿದ ​​ಅಭಿಷೇಕ್ ಪೊರೆಲ್ - Punjab Kings vs Delhi Capitals

Last Updated : Mar 23, 2024, 8:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.