ETV Bharat / sports

ಒಲಿಂಪಿಕ್ಸ್‌ 25 ಮೀ ಪಿಸ್ತೂಲ್ ಸ್ಪರ್ಧೆ: ಫೈನಲ್‌ಗೇರಿದ ಮನು ಭಾಕರ್; ಹ್ಯಾಟ್ರಿಕ್‌ ಪದಕದತ್ತ ಚಿತ್ತ! - Manu Bhaker

author img

By ETV Bharat Sports Team

Published : Aug 2, 2024, 6:40 PM IST

Updated : Aug 2, 2024, 7:28 PM IST

ಒಲಿಂಪಿಕ್ಸ್‌ 25 ಮೀಟರ್ ಪಿಸ್ತೂಲ್‌ ಅರ್ಹತಾ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿ ಮನು ಭಾಕರ್ ಎರಡನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಹ್ಯಾಟ್ರಿಕ್‌ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

Paris Olympics 2024 Manu Bhaker qualifies for 25m pistol final
ಮನು ಭಾಕರ್ (AP)

ನವದೆಹಲಿ: ಭಾರತದ ಪ್ರತಿಭಾವಂತ ಶೂಟರ್ ಮನು ಭಾಕರ್ 25 ಮೀಟರ್ ಮಹಿಳೆಯರ ಪಿಸ್ತೂಲ್ ಅರ್ಹತಾ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇಂದು ನಡೆದ ಸ್ಪರ್ಧೆಯಲ್ಲಿ ಒಟ್ಟು 590 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದಾರೆ.

ಮನು ಭಾಕರ್​ ಈಗಾಗಲೇ ಎರಡು ಪದಕ ಗೆದ್ದಿದ್ದಾರೆ. ನಾಳೆ ಫೈನಲ್‌ ನಡೆಯಲಿದ್ದು, ಅಗ್ರ ಮೂರು ಸ್ಪರ್ಧಿಗಳಲ್ಲಿ ಸ್ಥಾನ ಪಡೆದರೆ ಮನು ಸತತ ಮೂರನೇ ಪದಕ ಸಾಧನೆ ಮಾಡುವರು.

25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಇಶಾ ಸಿಂಗ್ ಒಟ್ಟು 581 ಅಂಕಗಳೊಂದಿಗೆ 18ನೇ ಸ್ಥಾನ ಗಿಟ್ಟಿಸಿಕೊಂಡರು.

ಮನು ಭಾಕರ್​ ಈಗಾಗಲೇ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಕ್ಸೆಡ್‌ ತಂಡದಲ್ಲಿ ಎರಡು ಕಂಚಿನ ಪದಕ ಜಯಿಸಿದ್ದಾರೆ. ಒಂದೇ ಒಲಿಂಪಿಕ್​ನಲ್ಲಿ ಎರಡು ಪದಕ ಪಡೆದ ದೇಶದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಭಾಕರ್ ಭಾಜನರಾಗಿದ್ದಾರೆ.

ನಾಳೆ ಭಾರತೀಯ ಕಾಲಮಾನ, ಮಧ್ಯಾಹ್ನ 1 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಒಂದೇ ಒಲಿಂಪಿಕ್​ನಲ್ಲಿ ಎರಡು ಪದಕ ಪಡೆದ ಏಕೈಕ ಕ್ರೀಡಾಪಟು​; ಶೂಟಿಂಗ್​ನಲ್ಲಿ ಇತಿಹಾಸ ಬರೆದ ಮನು ಭಾಕರ್ - Paris Olympics 2024

Last Updated : Aug 2, 2024, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.