ನವದೆಹಲಿ: ಇಂದು ಪ್ಯಾರಿಸ್ ಒಲಿಂಪಿಕ್ 2024ರ ನಾಲ್ಕನೇ ದಿನವಾಗಿದ್ದು, ಭಾರತೀಯ ಕ್ರೀಡಾಪಟುಗಳು ತಮ್ಮ ಎರಡನೇ ಪದಕ ಗೆಲ್ಲುವ ಉದ್ದೇಶದಿಂದ ಒಲಿಂಪಿಕ್ಗೆ ಪ್ರವೇಶಿಸಲಿದ್ದಾರೆ. ಭಾರತ ಈವರೆಗೆ ಎರಡು ಪದಕ ಗೆದ್ದಿದ್ದು, ಶೂಟಿಂಗ್ ನಲ್ಲಿ ಮನು ಭಾಕರ್ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಇಂದಿನ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ 3ನೇ ದಿನದ ಭಾರತದ ಸ್ಪರ್ಧೆಗಳು;
- 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಪದಕ ಪಂದ್ಯ- ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಮುಡಿಗೆ ಕಂಚು
- ಪುರುಷರ ಹಾಕಿ ಗುಂಪು ಹಂತದ ಪಂದ್ಯ (ಭಾರತ Vs ಐರ್ಲೆಂಡ್) - 4:45 PM
ಭಾರತ ಪುರುಷರ ಹಾಕಿ ತಂಡ ತಮ್ಮ ಎರಡನೇ ಪೂಲ್ ಬಿ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸಿತ್ತು. ಇಂದು ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಪುರುಷರ ಹಾಕಿ ತಂಡವು 11ನೇ ಶ್ರೇಯಾಂಕದ ಐರ್ಲೆಂಡ್ ತಂಡವನ್ನು ಎದುರಿಸಲಿದೆ.
- ಮಹಿಳೆಯರ ಆರ್ಚರಿ ಸಿಂಗಲ್ಸ್, ರೌಂಡ್ ಆಫ್ 32 ಎಲಿಮಿನೇಷನ್ ಪಂದ್ಯ (ಅಂಕಿತಾ ಭಕ್ತ) - 5:14 PM
- ಮಹಿಳೆಯರ ಆರ್ಚರಿ ಸಿಂಗಲ್ಸ್, ರೌಂಡ್ ಆಫ್ 32 ಎಲಿಮಿನೇಷನ್ ಪಂದ್ಯ (ಭಜನ್ ಕೌರ್) - ಸಂಜೆ 5:27
- ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಗುಂಪು ಹಂತ ಪಂದ್ಯ - (ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ) - ಸಂಜೆ 5:30
- ಪುರುಷರ ಸಿಂಗಲ್ಸ್ ಆರ್ಚರಿ ರೌಂಡ್ ಆಫ್ 32 ಎಲಿಮಿನೇಷನ್ ಪಂದ್ಯ (ಧೀರಜ್ ಬೊಮ್ಮದೇವರ) - 10:46 PM
- ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್ ಗುಂಪು ಹಂತ - (ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ) - ಸಂಜೆ 6:20
- ಪುರುಷರ 51 ಕೆಜಿ ಬಾಕ್ಸಿಂಗ್ ರೌಂಡ್ ಆಫ್ 16 - (ಅಮಿತ್ ಪಂಗಲ್) - 7:16 pm
- ಮಹಿಳೆಯರ 57kg ಬಾಕ್ಸಿಂಗ್ ರೌಂಡ್ ಆಫ್ 32 - (ಜಾಸ್ಮಿನ್ ಲಂಬೋರಿಯಾ) - 9:24 pm
- ಮಹಿಳೆಯರ 54 ಕೆಜಿ ಬಾಕ್ಸಿಂಗ್ ರೌಂಡ್ ಆಫ್ 16 (ಪ್ರೀತ್ ಪವಾರ್) - ಮಧ್ಯಾಹ್ನ 1:22
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್: ಟೇಬಲ್ ಟೆನ್ನಿಸ್ನಲ್ಲಿ ಇತಿಹಾಸ ಸೃಷ್ಟಿಸಿದ ಮಣಿಕಾ ಬಾತ್ರಾ! - Manika Batra